ತುಮ್ಮರಗುದ್ದಿಯಲ್ಲಿ ರಸ್ತೆ ತಡೆದು ಆಕ್ರೋಶ
ಬೆಳಗಾವಿ: ರಮೇಶ ಜಾರಕಿಹೊಳಿ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ನಕಲಿ ಸಿಡಿ ಹೊರ ತಂದಿರುವವರ ವಿರುಧ ಕಠಿಣ ಕ್ರಮ ಕೈಗೊಂಡು ಜಾರಕಿಹೊಳಿ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ರವಿವಾರ ಪ್ರತಿಭಟನೆ ನಡೆಸಲಾಯಿತು.
ತುಮ್ಮರಗುದ್ದಿಯಲ್ಲಿ ಬೆಳಗಾವಿ-ಗೋಕಾಕ ಹೆದ್ದಾರಿ ಮೇಲೆ ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ರಮೇಶ ಜಾರಕಿಹೊಳಿ ಅಭಿಮಾನಿಗಳು, ನಕಲಿ ಸಿಡಿಯ ರೂವಾರಿ ಹಾಗೂ ಸುಳ್ಳು ದೂರು ನೀಡಿರುವ ದಿನೇಶ ಕಲ್ಲಹಳ್ಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಾರಕಿಹೊಳಿ ಕುಟುಂಬ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವುದರಿಂದ ಸಹಿಸಲು ಆಗದ ಕುತಂತ್ರಿಗಳು ಇಂಥ ನೀಚ ಕೃತು ನಡೆಸಿದ್ದಾರೆ. ನಕಲಿ ಸೀಡಿ ಮೂಲಕ ಈ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಷಡ್ಯಂತ್ರ ನಡೆಸಿದ್ದಾರೆ. ಸರ್ಕಾರ ಈ ಬಗ್ಗೆ ಕೂಲಂಕಷವಾಗಿ ತನಿಖೆಗಾಗಿ ಸಿಬಿಐ ಅಥವಾ ಸಿಒಡಿ ಒಪ್ಪಿಸಬೇಕು. ತಪ್ಪಿತಸ್ಥರನ್ನು ಬಂಧಿಸಿ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಉಪಾಧ್ಯಕ್ಷ ಶೇಖರ ಕಾಲೇರಿ, ಮುಖಂಡರಾದ ಭರಮಪ್ಪ ನಂದ್ಯಾಗೋಳ, ಕಲ್ಲಪ್ಪ ಬಸರಿಮರದ, ನಾನಪ್ಪ ಪಾರ್ವತಿ, ರಮೇಶ ಶಿನಗಿ, ಗ್ರಾಪಂ ಸದಸ್ಯಫ ಕೀರಪ್ಪ ಯದ್ದಲಗುಡ್ಡ, ಗ್ರಾಪಂ ಸದಸ್ಯ ಯಲ್ಲಪ್ಪ ಸುಲಧಾಳ, ಯಲ್ಲಪ್ಪ ಧರನಟ್ಟಿ, ತುಕಾರಾಮ ಕರಡಿಗುದ್ದಿ, ರಮೇಶ ನಾಯಕ(ಪರಕನಟ್ಟಿ), ಬಾಳಕು ಉದ್ದನ್ನವರ, ರಾಮಪ್ಪ ಹುಚ್ಚಾನಟ್ಡಿ, ದುರ್ಗಪ್ಪ ನಿಟ್ಟೂರ, ಭೀಮಪ್ಪ ಸನದಿ, ಸುರೇಶ ಬಂಜಿರಾಮಗೋಳ, ಆಕಾಶ ಕೊಳದೂರ, ಗುಡದಪ್ಪ ತಳವಾರ ಉಪಸ್ಥಿತರಿದ್ದರು.