ಉಪ್ಪಾರ ಓಣಿಯ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ ಏ-18 ರಿಂದ 20 ರವರೆಗೆ.!
ಯುವ ಭಾರತ ಸುದ್ದಿ ಗೋಕಾಕ: ಇಲ್ಲಿಯ ಉಪ್ಪಾರ ಓಣಿಯ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವವು ಎ-18ರಿಂದ 20 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ದಿ.18 ರಿಂದ ಮುಂಜಾನೆ 9ರಿಂದ ಸಾಯಂಕಾಲದ ವರೆಗೆ ವಿವಿಧ ಸ್ಪರ್ಧೆಗಳು ಜರುಗಲಿವೆ. ಮಧ್ಯಾಹ್ನ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಮಂಗಳವಾದ್ಯ ಮೇಳಗಳೊಂದಿಗೆ ಬರಮಾಡಿಕೊಳ್ಳುವುದು. ರಾತ್ರಿ 1೦.3೦ ಗಂಟೆಗೆ ಶ್ರೀ ಮಾರುತೇಶ್ವರ ಗಾಯನ ಸಂಘ ಕುಳಲಿ(ಹರದೇಶಿ) ಹಾಗೂ ಶ್ರೀ ರೇಣುಕಾ ಯಲ್ಲಮ್ಮ ಗಾಯನ ಸಂಘ ನಾವಲಗಿ(ನಾಗೇಶಿ) ತಂಡದವರಿಂದ ಚೌಡಕಿ ಪದಗಳು ಜರುಗಲಿವೆ.
ದಿ.19 ರಂದು ಮುಂಜಾನೆ 6 ಗಂಟೆಗೆ ಅಭಿಷೇಕ, 7ಗಂಟೆಗೆ ಶ್ರೀದೇವಿಯ ಪಲ್ಲಕ್ಕಿಯ ಮೆರವಣಿಯು ಸಕಲ ವಾಧ್ಯಮೇಳಗಳೊಂದಿಗೆ ಹಾಗೂ ಮುತ್ತೆಂದೆಯರ ಆರತಿ, ಅಂಬಲಿ, ಕೊಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ದೇವಿಯ ದೇವಸ್ಥಾನ ತಲುಪುವುದು. ಮಧ್ಯಾಹ್ನ 12 ಗಂಟೆಗೆ ಶ್ರಿ ದೇವಿಯ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ, ಸಾಯಂಕಾಲ 4 ಘಂಟೆೆಗೆ ವಿವಿಧ ಶರತ್ತುಗಳು, ರಾತ್ರಿ 8ಗಂಟೆಗೆ ಶ್ರೀ ದೇವಿಯ ಶ್ರೀಫಲಗಳ ಲೀಲಾವು, ನಂತರ ಸಾಧಕರಿಗೆ ಸತ್ಕಾರ ಸಮಾರಂಭ, ರಾತ್ರಿ 1೦.3೦ ಗಂಟೆಗೆ ಆನಂದ ಕಂದ ನಾಟ್ಯ ಬಳಗ ಗೋಕಾಕ ಇವರಿಂದ “ಅಣ್ಣನ ಕಣ್ಣೀರು” ಸುಂದರ ಸಾಮಾಜಿಕ ನಾಟಕ ಜರಗುವುದು.
ದಿ. 2೦ ರಂದು ಮುಂಜಾನೆ 9 ಗಂಟೆಗೆ ಸುತ್ತಮುತ್ತಲಿನ ದೇವರಗಳ ಪಲ್ಲಕ್ಕಿಗಳನ್ನು ಮರಳಿ ಕಳಿಸಿಕೊಡುವ ಕಾರ್ಯಕ್ರಮ ನಡೆವವು ಎಂದು ಜಾತ್ರಾ ಕಮೀಟಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.