ಉಷಾತಾಯಿ ಗೋಗಟೆ ಪ್ರೌಢಶಾಲೆ ವಾರ್ಷಿಕ ಸಾಮಾಜಿಕ ಕಾರ್ಯಕ್ರಮ 31ರಂದು

ಯುವ ಭಾರತ ಸುದ್ದಿ ಬೆಳಗಾವಿ :
ಪಾಟೀಲ ಗಲ್ಲಿಯ ಶ್ರೀಮತಿ ಉಷಾ ತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯ ವಾರ್ಷಿಕ ಸಾಮಾಜಿಕ ಚಟುವಟಿಕಾ ಕಾರ್ಯಕ್ರಮ ಡಿಸೆಂಬರ್ 31ರಂದು ಬೆಳಗ್ಗೆ 10:15ಕ್ಕೆ ಶಾಲೆಯ ಸಭಾಗ್ರಹದಲ್ಲಿ ನಡೆಯಲಿದೆ. ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಮುಖ್ಯ ಅತಿಥಿಯಾಗಿ ಆಗಮಿಸುವರು. ರಾಷ್ಟ್ರ ಸೇವಿಕಾ ಸಮಿತಿ ಜಿಲ್ಲಾ ಸೇವಾ ಪ್ರಮುಖೆ ಪಂಕಜಾ ಭಟ್ ಉಪಸ್ಥಿತರಿರುವರು. ಬೆಳಗಾವಿ ಎಜುಕೇಶನ್ ಸೊಸೈಟಿ ಅವಿನಾಶ್ ಪೋತದಾರ್ ಅಧ್ಯಕ್ಷತೆ ವಹಿಸುವರು.
YuvaBharataha Latest Kannada News