Breaking News

ಕಿಚ್ಚ ಪತ್ರದಲ್ಲೇನಿದೆ ?

Spread the love

ಕಿಚ್ಚ ಪತ್ರದಲ್ಲೇನಿದೆ ?

ಯುವ ಭಾರತ ಸುದ್ದಿ ಬೆಂಗಳೂರು :
ಬಿಜೆಪಿ ವತಿಯಿಂದ ಕಿಚ್ಚ ಸುದೀಪ್​ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಸುದೀಪ್​ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದರು. ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಶಿಕಾರಿಪುರ ಕ್ಷೇತ್ರವ್ಯಾಪ್ತಿಯ ಶಿಕಾರಿಪುರ ಹಾಗೂ ಶಿರಾಳಕೊಪ್ಪಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ನಡೆಸಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ರೋಡ್‌ ಶೋ ನಡೆಸಿದ್ದರು. ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅದ್ದೂರಿ ಪ್ರಚಾರಕ್ಕೆ ನಟ ಕಿಚ್ಚ ಸುದೀಪ್ ಭರ್ಜರಿಯಾಗಿಯೇ ಸಾಥ್‌ ನೀಡಿದರು. ಇದೇ ಮೊಟ್ಟ ಮೊದಲ ಬಾರಿ ಬೆಂಗಳೂರಿನಲ್ಲಿ ಮತ ಬೇಟೆಗಿಳಿದ ಕಿಚ್ಚ ಸುದೀಪ್, ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಭರ್ಜರಿ ಮತಬೇಟೆ ಮಾಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರಕ್ಕಿಳಿದಿದ್ದರು. ಇಂದು ಮತದಾನ ನಡೆಯುತ್ತಿದ್ದು, 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಸುದೀಪ್​ ಬಿಜೆಪಿ ಪರವಾಗಿ ಮತಯಾಚನೆ ಮಾಡಿದ್ದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡುತ್ತಿದ್ದಾರೆ. ನಂತರ ಅವರೇ ಬೇರೆ ಸ್ಟಾರ್​ ನಟರನ್ನು ತಮ್ಮ ಪಕ್ಷದ ಪ್ರಚಾರಕ್ಕೆ ತೊಡಗಿಸಿಕೊಂಡಿರುವುದೂ ನಡೆದಿದೆ. ಈ ಹಿನ್ನೆಲೆಯಲ್ಲಿ ಸುದೀಪ್​ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ.

ಈಗ ಇಂಥ ಸುದೀಪ್​ ಪತ್ರವೊಂದನ್ನು ಬರೆದಿದ್ದು ಬಹಳ ಕುತೂಹಲ ಮೂಡಿಸಿದೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಅವರು ಈ ಪತ್ರವನ್ನು ಬರೆದಿದ್ದಾರೆ. ಅಷ್ಟಕ್ಕೂ ಈ ಪತ್ರದಲ್ಲಿ ಏನಿದೆ ಎನ್ನುವುದೇ ವಿಶೇಷ. ಅಷ್ಟಕ್ಕೂ ಅವರು ಪತ್ರ ಬರೆದಿರುವುದು ವಿಧಾನಸಭಾ ಚುನಾವಣೆ ಪ್ರಚಾರದ ಕುರಿತಾಗಿಯೇ. ಪ್ರಚಾರ ಮುಗಿಸಿ ಸದ್ಯ ಹೊಸ ಸಿನಿಮಾದ ಪ್ರೊಮೋ ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಸುದೀಪ್​. ಈ ನಡುವೆಯೇ, ಚುನಾವಣೆಗೆ ಸಂಬಂಧಿಸಿದ ಪತ್ರವೊಂದನ್ನು ಅಪ್​ಲೋಡ್​ ಮಾಡಿದ್ದಾರೆ. ಇದರಲ್ಲಿ ಅವರು ಪ್ರಚಾರದ ವೇಳೆಯಲ್ಲಿ ಆದ ಅನುಭವವನ್ನು ಅವರು ಕಾವ್ಯ ರೂಪದಲ್ಲಿ ಇಳಿಸಿದ್ದಾರೆ. ಜೊತೆಗೆ ಪೊಲೀಸ್ ಏಟು ತಿಂದವರ ಕ್ಷಮೆಯನ್ನೂ ಅವರು ಕೇಳಿದ್ದಾರೆ.

 

ಪತ್ರದಲ್ಲಿ ಏನಿದೆ?
ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಪತ್ರದಲ್ಲಿ ‘ನಿಮ್ಮ ಕಣ್ಣಲ್ಲಿ ಕಂಡ ಅಪಾರ ಪ್ರೀತಿ ನನ್ನ ಬದುಕಿನ ರೀತಿ. ನಿಮ್ಮ ನಿರಂತರ ರಣಕೇಕೆ ಸಾಕಿಷ್ಟು ಈ ಜನುಮಕೆ. ಹಣತೆ ಹೊತ್ತಿಸಿ ಆರತಿ ಎತ್ತಿದಿರಿ. ದಾರಿಯುದ್ದಕ್ಕೂ ಹೂವ ಚೆಲ್ಲಿದಿರಿ. ನಿಮ್ಮ ಎದೆಯ ಮೇಲಿನ ಹಚ್ಚೆಯಂತೆ ಸದಾ ಜೊತೆಗಿರುವ’ ಎಂದು ಅಭಿಮಾನಿಗಳಿಗೆ ಮತ್ತು ನಾಡಿನ ಜನತೆಗೆ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ‘ಜನಸಾಗರದ ನೂಕು ನುಗ್ಗಲಿನಲ್ಲಿ ಕೆಲವರಿಗೆ ಬಿದ್ದ ಪೊಲೀಸ್ ಲಾಠಿ ಏಟಿಗೆ ಕ್ಷಮೆ ಇರಲಿ. ಸ್ನೇಹಿತರೆ, ನಿಮ್ಮ ಪ್ರತಿ ಮನದಲ್ಲಿ ಈ ಪ್ರೀತಿ ಹೀಗೇ ಇರಲಿ. ಕರುನಾಡಲ್ಲಿ ನಡೆದ ಈ ಮೆರವಣಿಗೆಯುದ್ದಕ್ಕೂ ಜೊತೆಯಾಗಿ ಸಾಗಿ ಮಾಧ್ಯಮ ಮಿತ್ರರಿಗೆ, ಕಾಳಜಿಯಿಂದ ಕಾವಲಿಟ್ಟ ಪೊಲೀಸ್ ಸಿಬ್ಬಂದಿಗೆ, ಮಿಲಿಟರಿ ಕಮಾಂಡೋ ಸಿಬ್ಬಂದಿಗೆ, ಲಕ್ಷಾಂತರ ಕಾರ್ಯಕರ್ತರಿಗೆ ಮತ್ತು ಹೃದಯಗೀತೆಯಾದ ನನ್ನ ಪ್ರೀತಿಯ ಸ್ನೇಹಿತರಿಗೆ ಚಿರಋಣಿ’ ಎಂದು ಸುದೀಪ್​ ಬರೆದಿದ್ದಾರೆ.

ಸದ್ಯ ಸುದೀಪ್​, ಹೊಸ ಸಿನಿಮಾದ ಪ್ರೋಮೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು ಪ್ರೋಮೋ ಶೂಟಿಂಗ್ ನಡೆಯಲಿದ್ದು, ಇದರ ಮಾಹಿತಿಯನ್ನು ಜೂನ್ 1ರಂದು ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × 3 =