Breaking News

ಎಸ್ ಎಸ್ ಎಲ್ ಸಿ ನಂತರ ಮುಂದೇನು ?

Spread the love

ಎಸ್ ಎಸ್ ಎಲ್ ಸಿ ನಂತರ ಮುಂದೇನು ?

ಯುವ ಭಾರತ ಸುದ್ದಿ ಮಮದಾಪೂರ :
ಗೋಕಾಕ ತಾಲೂಕಿನ ಮಮದಾಪೂರ ಗ್ರಾಮ ಪಂಚಾಯತದ ಸಭಾ ಭವನದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ‘ಜ್ಞಾನಾಕ್ಷಯ’ ಚಿಂತಕರ ಚಾವಡಿ 27ನೇ ಮಾಲಿಕೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿದಾದ ನಂತರ ಮುಂದೇನು? ಮಾರ್ಗದರ್ಶನ ಉಪನ್ಯಾಸ ಕಾರ್ಯಕ್ರಮವು ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ರ. ವೀ. ದೇಮಶೆಟ್ಟಿ ಎಸ್ ಎಸ್ ಎಲ್ ಸಿ ನಂತರ ಹೆಚ್ಚು ಗೊಂದಲಕ್ಕೊಳಗಾಗದೇ ಹೆಚ್ಚು ಅವಕಾಶ ದೊರೆಯುವ ಶಿಕ್ಷಣವನ್ನು ಆಯ್ಕೆ ಮಾಡುವುದು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಹತ್ತರ ನಂತ 108 ದಾರಿಗಳಿವೆ. ಆಲೋಚಿಸಿ ಆಯ್ಕೆ ಮಾಡಿಕೊಳ್ಳಿ. ಪಿಯುಸಿಯನ್ನೇ ಆಯ್ಕೆ ಮಾಡಬೇಕೆಂದಿಲ್ಲ. ಮುಂದಿನ ಅಧ್ಯಯನವನ್ನು ಮಾಡದ ಮತ್ತು ಉದ್ಯೋಗವನ್ನು ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಹಲವಾರು ಪ್ಯಾರಾ ಮೆಡಿಕಲ್ ಹಾಗು ಅಲ್ಪಾವಧಿ ಕೋರ್ಸ್ ಗಳು ನಿಮ್ಮ ವೃತ್ತಿ ಜೀವನವನ್ನು ಹೊಸದಿಕ್ಕಿನತ್ತ ಕೊಂಡೊಯ್ಯಬಹುದಾಗಿದೆ. ಬಾಲಕಿಯರೂ ಇದರಲ್ಲಿ ಅವಕಾಶ ಪಡೆಯಬಹುದು. ಆದರೆ ವಿದ್ಯಾರ್ಥಿಯು ತಮ್ಮ ಕೌಶಲ್ಯ, ಆಸಕ್ತಿಗಳು ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಕ್ಷೇತ್ರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಪಡೆದ ಅಂಕಗಳನ್ನಾಧರಿಸಿ ಮುಂದಿನ ಶಿಕ್ಷಣಕ್ಕೆ ಪ್ರವೇಶ ಪಡೆಯದೇ ಪಾಲಕರ ಸಲಹೆ ತಮ್ಮ ವಿಷಯಾಸಕ್ತಿ ಮೇಲೆ ಪ್ರವೇಶ ಪಡೆಯುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿಕೊಂಡ ಸ್ಥಳೀಯ ಗ್ರಾಮ ಪಂಚಾಯತ ಚೇರಮನ್ನರಾದ ರಮೇಶ ಗಿ ಗಾಣಗಿಯವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ, ನಿಜಕ್ಕೂ ಎಸ್ ಎಸ್ ಎಲ್ ಸಿ ನಂತರ ಮುಂದೆ ಯಾವುದಕ್ಕೆ ಪ್ರವೇಶ ಪಡೆಯಬೇಕು ಎಂಬ ಗೊಂದಲವಾಗುವುದು ಸಹಜ. ವಿದ್ಯಾರ್ಥಿಗಳಾದವರು ಮುಂದಿನ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕಾದರೆ ಈ ಮಾರ್ಗದರ್ಶನ ನಿಮಗೆ ಒಂದು ದಾರಿದೀಪವಾಗುತ್ತದೆ. ಪ್ರವೇಶ ಪಡೆಯುವ ಮುಂಚೆ ಅನುಭವಿ ಶಿಕ್ಷಕರ ಹತ್ತಿರ ಸಲಹೆ ಪಡೆದು ಸಾಕಷ್ಟು ಅವಕಾಶ ದೊರೆಯುವತ್ತ ಪ್ರವೇಶ ಪಡೆಯುವಂತೆ ಕಿವಿಮಾತು ಹೇಳಿದರು.
ಆರಂಭದಲ್ಲಿ ಶಿಲ್ಪಾ ಗಾಣಗಿ ಮತ್ತು ಸಾನಿಯಾ ಬಾಗವಾನ ವಿಜ್ಞಾನ ಗೀತೆಯನ್ನು ಹಾಡಿದರು. ಸಂದೀಪ ಕಂಬಾರ ಸರ್ವರನ್ನು ಸ್ವಾಗತಿಸಿಕೊಂಡರು. ಅನಿಲ ಸುಣಧೋಳಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಿ ಸಬರದ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪುಷ್ಪಾ ಗಾಣಗಿ ಶ್ರೀ ಕೂಡಲ ಸಂಗಮನವರ ವಚನವನ್ನು ವಾಚಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

twenty − five =