Breaking News

ಅತಿ ಹಿಂದುಳಿದ ಉಪ್ಪಾರ ಸಮಾಜದ ಅಭಿವೃದ್ಧಿಗಾಗಿ ಸಮಾಜ ಭಾಂಧವರು ಸಂಘಟಿತರಾಗಿ- ಡಾ. ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿ.!

Spread the love

ಅತಿ ಹಿಂದುಳಿದ ಉಪ್ಪಾರ ಸಮಾಜದ ಅಭಿವೃದ್ಧಿಗಾಗಿ ಸಮಾಜ ಭಾಂಧವರು ಸಂಘಟಿತರಾಗಿ- ಡಾ. ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿ.!


ಗೋಕಾಕ: ಅತಿ ಹಿಂದುಳಿದ ಉಪ್ಪಾರ ಸಮಾಜದ ಅಭಿವೃದ್ಧಿಗಾಗಿ ಸಮಾಜ ಭಾಂಧವರು ಸಂಘಟಿತರಾಗಿ ಹೋರಾಟ ಮಾಡುವ ಅವಶ್ಯ ಎಂದು ಹೊಸದುರ್ಗ ಶ್ರೀ ಭಗೀರಥ ಪೀಠದ ಪೀಠಾಧಿಪತಿ ಡಾ. ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿ ಹೇಳಿದರು.
ಅವರು, ಮಂಗಳವಾರದAದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಉಪ್ಪಾರ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿ, ಉಪ್ಪಾರ ಸಮಾಜವು ಶೈಕ್ಷಣಿಕ, ಸಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದ್ದು ಸಂಘಟನೆಯಿAದ ಮಾತ್ರ ನಮ್ಮ ಬೇಡಿಕೆಗಳು ಈಡೇರುತ್ತವೆ ಈ ನಿಟ್ಟಿನಲ್ಲಿ ಸಮಾಜ ಬಾಂಧವರು ತಮ್ಮಲ್ಲಿರುವ ವೈಮನಸ್ಸು ಬಿಟ್ಟು ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಉಪ್ಪಾರ ಸಮಾಜದ ಅಭಿವೃದ್ಧಿ ಹಿತದೃಷ್ಟಿಯಿಂದ ಗೋಕಾಕ ನಗರದ ಹೊರವಲಯದಲ್ಲಿ ಶ್ರೀ ಭಗೀರಥ ಪೀಠ ಸ್ಥಾಪನೆ ಮತ್ತು ಈ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನು ನಿರ್ಮಿಸಲು ಎಲ್ಲ ಮುಖಂಡರು ಶ್ರಮವಹಿಸಿ ಆದಷ್ಟು ಬೇಗ ಅಡಿಗಲ್ಲು ನೆರವೇರಿಸಲು ಸಹಕರಿಸುವಂತೆ ತಿಳಿಸಿದರು.
ಉಪ್ಪಾರ ಸಮಾಜದ ಹಾಗೂ ಲೋಕಕಲ್ಯಾಣಾರ್ಥವಾಗಿ ಬರುವ ನವರಾತ್ರಿ ಸಮಯದಲ್ಲಿ ಮಹಾಚಂಡಿಕಾ ಯಾಗವನ್ನು ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಮಾಡಲು ಸಭೆಯಲ್ಲಿ ತಿರ್ಮಾನಿಸಿದ್ದು, ಅದರಂತೆ ಜಿಲ್ಲೆಯ ಎಲ್ಲ ಮುಖಂಡರು ಸೇರಿ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆದಷ್ಟು ಬೇಗ ಹಮ್ಮಿಕೊಳ್ಳುವಂತೆ ಮಾರ್ಗದರ್ಶನ ಮಾಡಿದರು.
ಶ್ರೀ ಭಗೀರಥ ಮೂರ್ತಿ ಪ್ರತಿಷ್ಠಾಪನೆ ಮತ್ತು ದೇವಸ್ಥಾನ ನಿರ್ಮಾಣ: ಹೊಸದುರ್ಗದ ಶ್ರೀ ಭಗೀರಥ ಪೀಠದಲ್ಲಿ ೬೦ಅಡಿ ಎತ್ತರ ಏಕಶೀಲಾ ಶ್ರೀ ಭಗೀರಥ ಮಹರ್ಷಿಗಳ ಮೂರ್ತಿ ಸ್ಥಾಪನೆಗೆ ಕಳೆದ ಬಿಜೆಪಿ ಸರಕಾರ ೧೨ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿತ್ತು ಆದರೆ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಈ ಮಾಹಿತಿಯನ್ನು ಹೇಳಿಕೊಳ್ಳಲಾಗಿಲ್ಲ. ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಹ ಅನುದಾನ ನೀಡುವಂತೆ ವಿನಂತಿಸಲಾಗಿದ್ದು, ಅವರು ಸಹ ಅನುದಾನ ನೀಡುವದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದರು.
ಈಗಾಗಲೇ ಶ್ರೀಮಠದಿಂದ ಹೊಸದುರ್ಗದಲ್ಲಿ ಆಂಗ್ಲ ಮಾಧ್ಯಮ(ಸಿಬಿಎಸ್‌ಸಿ) ವಸತಿ ಶಾಲೆ ಪ್ರಾರಂಭಿಸಲಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಈ ಭಾಗದ ವಿದ್ಯಾರ್ಥಿಗಳನ್ನು ಸಹ ಶಾಲೆಗೆ ಸೇರಿಸಬಹುದು. ಶಾಲೆಗೆ ಸೇರಿಸುವ ಪಾಲಕರು ಶಾಲೆಗೆ ಬಂದು ಅರ್ಜಿ ಸಲ್ಲಿಸಬೇಕು. ಅಪಪ್ರಚಾರದಲ್ಲಿ ತೋಡಗಿರುವ ಕೆಲವರ ಬಗ್ಗೆ ತೆಲೆಕೆಡಿಸಿಕೊಳ್ಳದೇ ಸಮಾಜದ ಅಭಿವೃದ್ಧಿಗೆ ನಾವೆಲ್ಲ ಕಂಕಣಬದ್ಧರಾಗಿ ದುಡಿಯೋಣ ಎಂದರು.
ಈ ಸಂದರ್ಭದಲ್ಲಿ ಖಟಕಭಾವಿಯ ಶ್ರೀ ಧರಿಸಿದ್ಧೇಶ್ವರ ಸ್ವಾಮಿಜಿ, ಗೋಕಾಕ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ, ಉಪಾಧ್ಯಕ್ಷರುಗಳಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೇನ್ನವರ, ಉಪ್ಪಾರ ಸಮಾಜದ ಮುಖಂಡರುಗಳಾದ ಎಸ್ ಎಮ್ ಹತ್ತಿಕಟಗಿ, ಪರಸಪ್ಪ ಚೂನನ್ನವರ, ಜಿ ಎಸ್ ಉಪ್ಪಾರ, ಪರಪ್ಪ ಬ್ಯಾಕೂಡ, ಭರಮಣ್ಣ ಉಪ್ಪಾರ, ಕೃಷ್ಣಾ ಬೂದಿಗೊಪ್ಪ, ಮಹಾಲಿಂಗಪ್ಪ ಲಾತೂರ, ಸುರೇಶ ಲೋನಾರಿ, ಮಹಾದೇವ ಗದಾಡಿ, ಬಸವರಾಜ ಚುನಾಮದಾರ, ಮಲ್ಲಿಕಾರ್ಜುನ ಚೌಕಾಶಿ, ಭೀಮಶಿ ಹಂದಿಗುAದ, ಶಂಭುಲಿAಗ ಮುಕ್ಕನವರ, ಗೋವಿಂದ ಕಿತ್ತೂರ, ರಾಜು ಹಳಕಟ್ಟಿ, ನಾಗಪ್ಪ ಕಡಕೋಳ, ಕಲ್ಲಪ್ಪ ಸಿಂಗನ್ನವರ, ಸತ್ತೆಪ್ಪ ಬಬಲಿ, ಮುತ್ತೆಪ್ಪ ಕುಳ್ಳೂರ, ಶಿವು ಕುಡ್ಡೇವೆಮ್ಮಿ, ಬಸವರಾಜ ಮರೆಪ್ಪಗೋಳ, ಲಕ್ಷö್ಮಣ ಬೂದಿಗೊಪ್ಪ, ಯಲ್ಲಪ್ಪ ಗೂದಿಗೊಪ್ಪ, ಮಾಯಪ್ಪ ತಹಶೀಲದಾರ, ಬಸವರಾಜ ಖಾನಪ್ಪನವರ, ವಿಠ್ಠಲ ಮೆಳವಂಕಿ, ಯಲ್ಲಪ್ಪ ದುರದುಂಡಿ ಸೇರಿದಂತೆ ಉಪ್ಪಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಭ್ಯರ್ಥಿ ಯಾರೇ ಆದರೂ ಕಾರ್ಯಕರ್ತರು ಅವರನ್ನು ಗೆಲ್ಲಿಸಿ-ಸಂಜಯ ಪಾಟೀಲ.!

Spread the loveಅಭ್ಯರ್ಥಿ ಯಾರೇ ಆದರೂ ಕಾರ್ಯಕರ್ತರು ಅವರನ್ನು ಗೆಲ್ಲಿಸಿ-ಸಂಜಯ ಪಾಟೀಲ.! ಗೋಕಾಕ: ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮೂರನೇ …

Leave a Reply

Your email address will not be published. Required fields are marked *

4 × four =