Breaking News

ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗದಿಂದ ಪ್ರತಿಭಾವಂತರಾಗಿ-ರಮೇಶ ಜಾರಕಿಹೊಳಿ.!

Spread the love

ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗದಿಂದ ಪ್ರತಿಭಾವಂತರಾಗಿ-ರಮೇಶ ಜಾರಕಿಹೊಳಿ.!


ಗೋಕಾಕ: ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗದಿಂದ ಪ್ರತಿಭಾವಂತರಾಗಿ ತಮ್ಮ ಬದುಕನ್ನು ಉಜ್ವಲ ಗೋಳಿಸಿಕೊಳ್ಳುವಂತೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ೧ಕೋಟಿ ೯೩ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಸರಕಾರ ಶೈಕ್ಷಣಿಕ ಕ್ಷೇತ್ರದ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸುಸಜ್ಜಿತ ಕೋಠಡಿಗಳು, ಪಠ್ಯಪುಸ್ತಕಗಳು,ನೋಟಬುಕ್ಕಗಳು ಸಮವಸ್ತ್ರ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಉನ್ನತ ವ್ಯಾಸಂಗಗಳಿಗೂ ವಿಶೇಷ ತರಬೇತಿಗಳನ್ನು ಸಹ ಆಯೋಜಿಸುತ್ತಿದೆ. ಇವುಗಳ ಸದುಪಯೋಗದಿಂದ ವಿದ್ಯಾರ್ಥಿಗಳು ಸಾಧಕರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಪ್ರಾಚಾರ್ಯ ಎಲ್.ಎ ಅಂತರಗಟ್ಟಿ, ಉಪ ಪ್ರಾಚಾರ್ಯ ಎಂ.ಬಿ ಬಳಗಾರ, ಪದವಿ ಕಾಲೇಜಿನ ಪ್ರಾಚಾರ್ಯ ಮಹೇಶ ಕಂಬಾರ, ಸಲಹಾ ಸಮಿತಿಯ ಸದಸ್ಯರಾದ ಪ್ರಮೋದ್ ಜೋಶಿ, ಕಾಂತು ಎತ್ತಿನಮನಿ, ಬಸವರಾಜ ಮಾಳಗಿ, ಲಕಪ್ಪ ತಹಶೀಲ್ದಾರ, ಅಶೋಕ ಮೇಸ್ತ್ರಿ, ಫಕಿರಸಾಬ ಲೋಕಾಪೂರ, ವಿಜಯಕುಮಾರ್ ಜತ್ತಿ, ಕುಸುಮಾ ಖನಗಾವಿ, ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

thirteen + 7 =