Breaking News
????????????????????????????????????

19ನೇ ಕನ್ನಡ ಜಾತ್ರೆ ಕಾರ್ಯಕ್ರಮ ಇದೆ ಜ.1ರಿಂದ 3ರ ವರೆಗೆ ಗೋಕಾಕನಲ್ಲಿ -ಬಸವರಾಜ ಹಿರೇಮಠ ಸ್ವಾಮಿಗಳು.!

Spread the love

19ನೇ ಕನ್ನಡ ಜಾತ್ರೆ ಕಾರ್ಯಕ್ರಮ ಇದೆ ಜ.1ರಿಂದ 3ರ ವರೆಗೆ ಗೋಕಾಕನಲ್ಲಿ -ಬಸವರಾಜ ಹಿರೇಮಠ ಸ್ವಾಮಿಗಳು.!

 

 

ಗೋಕಾಕ: ಕಪರಟ್ಟಿ ಕಳ್ಳಿಗುದ್ದಿಯ ಶ್ರೀ ಓಂಕಾರ ಆಶ್ರಮದ ಪವಾಡ ಪುರುಷ ಶ್ರೀ ಗುರು ಮಹಾದೇವ ಅಜ್ಜನವರ ೮೫ನೇ ಜಯಂತಿ ಹಾಗೂ ನಮಸ್ಕಾರ ಸಾಂಸ್ಕೃತಿಕ ಕಲಾ ಸಂಸ್ಥೆ ಗೋಕಾಕ ಇವರ ಆಶ್ರಯದಲ್ಲಿ ೧೯ನೇ ಕನ್ನಡ ಜಾತ್ರೆ ಕಾರ್ಯಕ್ರಮ ಇದೆ ಜ.೧ರಿಂದ ೩ರ ವರೆಗೆ ನಗರದ ಶಿವಾನುಭವ ಮಠದಲ್ಲಿ ನಡೆಯಲಿದೆ ಎಂದು ಕಪರಟ್ಟಿ ಕಳ್ಳಿಗುದ್ದಿಯ ಶ್ರೀ ಬಸವರಾಜ ಹಿರೇಮಠ ಸ್ವಾಮಿಗಳು ಹೇಳಿದರು.

ಅವರು, ನಗರದ ಶಿವಾನುಭವ ಮಠದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ, ದಿ.೦೧ ಸಂಜೆ ೬ಗಂಟೆಗೆ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೫೦ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಶ್ರೀಗಳ ತುಲಾಭಾರ ಕಾರ್ಯಕ್ರಮ ಹಾಗೂ ಕಾಯಕ ಯೋಗಿ ಪ್ರಶಸ್ತಿಯನ್ನು ಭಾಗೋಜಿಕೊಪ್ಪದ ಶ್ರೀ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿಯವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವದು. ದಿ.೦೨ರಂದು ಸಂಜೆ ೬ಗಂಟೆಗೆ ಚಿತ್ರನಟ ಸಚೀನಸುವರ್ಣ ಅವರಿಗೆ ರಾಯಣ್ಣ ಶ್ರೀ ಪ್ರಶಸ್ತಿ ಹಾಗೂ ಸಾಧಕಿ ಡಾ. ಜ್ಯೋತಿ ಅವರಿಗೆ ಚನ್ನಮ್ಮ ಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವದು. ಪ್ರತಿ ದಿನ ಶ್ರೀಮಠದಿಂದ ಆಯ್ಕೆ ಮಾಡಲಾದ ಸಮಾಜ ಸೇವಕ ದಂಪತಿಗಳನ್ನು ಸತ್ಕರಿಸಲಾಗುವದು ಎಂದು ತಿಳಿಸಿದರು.
ಕೊನೆಯ ದಿನವಾದ ದಿ.೩ ರಂದು ಕನ್ನಡ ಜ್ಯೋತಿ ಪ್ರಶಸ್ತಿಯನ್ನು ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳಿಗೆ ಪ್ರಧಾನ ಮಾಡಲಾಗುವದು. ಈ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮಿಜಿ, ಕುಂದರಗಿಯ ಅಮರಸಿದ್ದೇಶ್ವರ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಲೋಕಾಪೂರದ ಡಾ. ಚಂದ್ರಶೇಖರ ಸ್ವಾಮಿಜಿ ವಹಿಸುವರು. ಅಧ್ಯಕ್ಷತೆಯನ್ನು ಶಾಸಕ ರಮೇಶ ಜಾರಕಿಹೊಳಿ, ಮುಖ್ಯತಿಥಿಗಳಾಗಿ ಶಾಸಕ ಸತೀಶ ಜಾರಕಿಹೊಳಿ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವನಾಯಕ ಸರ್ವೋತ್ತಮ ಜಾರಕಿಹೊಳಿ, ಕಾಂಗ್ರೇಸ್ ಮುಖಂಡ ಅಶೋಕ ಪೂಜಾರಿ, ಆರ್‌ಎಸ್‌ಎಸ್ ವಿಭಾಗ ಸರಸಂಘಚಾಲಕ ಎಮ್ ಡಿ ಚುನಮರಿ ಆಗಮಿಸಲಿದ್ದಾರೆ. ಕಪರಟ್ಟಿ ಕಳ್ಳಿಗುದ್ದಿಯ ಶ್ರೀ ಮಠದ ಎಲ್ಲ ಭಕ್ತಾಧಿಗಳು ಆಗಮಿಸುವಂತೆ ಮನವಿ ಮಾಡಿದರು.  ಪತ್ರಿಕಾಗೊಷ್ಠಿಯಲ್ಲಿ ಬಾಳಪ್ಪ ಅಂಬಿ, ತುಕಾರಾಮ ಮುತ್ನಾಳ, ರಾಜು ಮಾಡಲಗಿ, ಮಲ್ಲಿಕಾರ್ಜುನ ನಂದಗಾವಿ ಇದ್ದರು.


Spread the love

About Yuva Bharatha

Check Also

ಗೋಕಾಕ ಬಿಜೆಪಿಯಿಂದ ಜಗದೀಶ ಶೆಟ್ಟರ ಮತ್ತು ರಮೇಶ ಜಾರಕಿಹೊಳಿ ಅವರಿಗೆ ದಿ.20ರಂದು ಅಭಿನಂಧನಾ ಸಮಾರಂಭ.!

Spread the loveಗೋಕಾಕ ಬಿಜೆಪಿಯಿಂದ ಜಗದೀಶ ಶೆಟ್ಟರ ಮತ್ತು ರಮೇಶ ಜಾರಕಿಹೊಳಿ ಅವರಿಗೆ ದಿ.20ರಂದು ಅಭಿನಂಧನಾ ಸಮಾರಂಭ.! ಗೋಕಾಕ: ಬಿಜೆಪಿ …

Leave a Reply

Your email address will not be published. Required fields are marked *

5 × 1 =