Breaking News

ಉಪ್ಪಾರ ಸಮಾಜಕ್ಕೆ ಎಸ್‌ಟಿ ಮೀಸಲಾತಿ ನೀಡದಿದ್ದಲ್ಲಿ ಉಗ್ರ ಹೋರಾಟ-ಸಮಾಜ ಚಿಂತಕ ಕುಶಾಲ ಗುಡೇನ್ನವರ.!

Spread the love


ಯುವಭಾರತ ಸುದ್ದಿ

ಗೋಕಾಕ: ಹಿಂದುಳಿ ಪ್ರವರ್ಗ ೧ರಲ್ಲಿ ಬರುವ ಉಪ್ಪಾರ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕೆಂದು ಹಿರಿಯ ನ್ಯಾಯವಾದಿ ಹಾಗೂ ಉಪ್ಪಾರ ಸಮಾಜದ ಚಿಂತಕ ಕುಶಾಲ ಗುಡೇನ್ನವರ ಆಗ್ರಹಿಸಿದ್ದಾರೆ.
ರವಿವಾರದಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರವರ್ಗ ೧ರಲ್ಲಿ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಶೇ೪ ರಷ್ಟು ಮೀಸಲಾತಿ ಇದೆ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಬರುವ ಬಜೇಟನಲ್ಲಿ ೧೫೦ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕೆಂದರು.
ಉಪ್ಪಾರ ಸಮಾಜದಲ್ಲಿ ೪೫ ಲಕ್ಷ ಜನಸಂಖ್ಯೆ ಹೊಂದಿವೆ. ಉಪ್ಪಾರ ಸಮಾಜವನ್ನು ತೀರ ಹಿಂದುಳಿದ ಜಾತಿಯಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿಯು ಸಹ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಲ್ಲ ಹೀಗಾಗಿ ಉಪ್ಪಾರ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ರಾಜ್ಯದಾಧ್ಯಂತ ನಮ್ಮ ಭಗೀರಥ ಗುರು ಪೀಠದ ಪರಮ ಪೂಜ್ಯ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ಅವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಉಪ್ಪಿನ ಸತ್ಯಾಗ್ರಹ ನಡೆಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಮುಂಬರುವ ದಿನಗಳಲ್ಲಿ ಎಸ್‌ಟಿ ಮೀಸಲಾತಿಗಾಗಿ ಹಳ್ಳಿ ಹಳ್ಳಿಗಳಿಂದ ಪೂಜ್ಯರ ನೇತ್ರತ್ವದಲ್ಲಿ ಸಮಾಜ ಬಾಂಧವರು ಸೇರಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

7 + 5 =