Breaking News

ಕುಮಾಸ್ವಾಮಿಯವರ ವಿರುದ್ಧ ಗೋಕಾಕ ಬ್ರಾಹ್ಮಣ ಸಮಾಜದ ಪ್ರತಿಭಟನೆ.!

Spread the love

ಕುಮಾಸ್ವಾಮಿಯವರ ವಿರುದ್ಧ ಗೋಕಾಕ ಬ್ರಾಹ್ಮಣ ಸಮಾಜದ ಪ್ರತಿಭಟನೆ.!


ಗೋಕಾಕ: ಮಾಜಿ ಸಿಎಮ್ ಕುಮಾಸ್ವಾಮಿಯವರ ವಿರುದ್ಧ ಗೋಕಾಕ ತಾಲೂಕ ಅಖಿಲ ಬ್ರಾಹ್ಮಣ ಸಮಾಜದವರು ಪ್ರತಿಭಟನೆ ನಡೆಸಿ, ತಹಶೀಲದಾರ ಮುಖಾಂತರ ಸಿಎಮ್ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರದಂದು ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಗೋಕಾಕ ತಾಲೂಕ ಅಖಿಲ ಬ್ರಾಹ್ಮಣ ಸಮಾಜದವರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕುಮಾರಸ್ವಾಮಿಯವರು ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವದರ ಕುರಿತು ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಭಾವಚಿತ್ರಕ್ಕೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿದರು.
ಮಾಜಿ ಸಿಎಮ್ ಕುಮಾರಸ್ವಾಮಿಯವರು ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವದರಿಂದ ಬ್ರಾಹ್ಮಣ ಸಮಾಜದ ಗೌರಕ್ಕೆ ಧಕ್ಕೆ ಉಂಟಾಗಿದೆ. ತಮ್ಮ ರಾಜಕೀಯ ವೋಟ್ ಬ್ಯಾಂಕಗಾಗಿ ಬ್ರಾಹ್ಮಣ ಸಮಾಜವನ್ನು ನಿಂಧಿಸುತ್ತಿರುವ ರಾಜಕಾರಣಿಗಳ ವಿರುದ್ಧ ಕಠೀಣ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಅಖಿಲ ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ ಕೆ ಜೋಶಿ, ಕಾರ್ಯದರ್ಶಿ ಪವನ ಜೋಶಿ, ಉಪಾಧ್ಯಕ್ಷ ಹನಮಂತರಾವ ದೇಶಪಾಂಡೆ, ಸತೀಶ ನಾಡಗೌಡ, ವಿರೇಂದ್ರ ಪತಕಿ, ವಿಠ್ಠಲ ಜೋಶಿ, ಶ್ರೀಧರ ಮುತಾಲಿಕದೇಸಾಯಿ, ಅರವಿಂದ ಮಹಾಜನ, ಸುಜಾತಾ ದೇಶಪಾಂಡೆ, ರಾಮಚಂದ್ರ ದಿಕ್ಷೀತ, ನಾಗರಾಜ ವಾಳ್ವೇಕರ ಸೇರಿದಂತೆ ನೂರಾರು ಜನ ಬ್ರಾಹ್ಮಣ ಸಮಾಜ ಬಾಂಧವರು ಇದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

5 − 5 =