Breaking News

ರಾಜ್ಯ ಸರಕಾರದ ವಿರುದ್ಧ ಗೋಕಾಕ ಬಿಜೆಪಿಯಿದ ಪ್ರತಿಭಟನೆ.!

Spread the love

ರಾಜ್ಯ ಸರಕಾರದ ವಿರುದ್ಧ ಗೋಕಾಕ ಬಿಜೆಪಿಯಿದ ಪ್ರತಿಭಟನೆ.!


ಗೋಕಾಕ: ರಾಜ್ಯದಲ್ಲಿ ಭೀಕರ ಬರಗಾಲದಿಂದಾಗಿ ಜನ ಜಾನುವಾರುಗಳಿಗೆ ನೀರಿನ ಅಭಾವವಾಗುತ್ತಿದೆ. ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಸಂದಿಗ್ದ ಸಮಯದಲ್ಲಿ ರಾಜ್ಯ ಸರಕಾರ ಕಮೀಷನ ದಂಧೆಯಲ್ಲಿ ತೋಡಗಿದೆ. ನೈತಿಕ ಹೊಣೆಹೊತ್ತು ಸಿಎಮ್ ಮತ್ತು ಡಿಸಿಎಮ್ ಕೂಡಲೇ ರಾಜಿನಾಮೆ ನೀಡುವಂತೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟಿçÃಯ ಕರ‍್ಯಕಾರಿಣಿ ಸದಸ್ಯ ಲಕ್ಷö್ಮಣ ತಪಸಿ ಹೇಳಿದರು.
ಅವರು, ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಳಗಳಿAದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯ ಸರಕಾರ ಕಮೀಷನ ದಂಧೆಯಲ್ಲಿ ತೋಡಗಿರುವದಕ್ಕೆ ಪೂರಕವೆಂಬAತೆ ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಯಲ್ಲಿ ೪೨ ಕೋಟಿ ನಗದು ಹಣ ಐ ಟಿ ದಾಳಿಯಲ್ಲಿ ಸಿಕ್ಕಿದ್ದು ಅದು ರಾಜ್ಯ ಸರಕಾರಕ್ಕೆ ಈ ಹಣ ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ದಟ್ಟವಾದ ಸುದ್ದಿಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರ ಗಳಿಗೆಂದು ನೀಡಿದ ಬಾಕಿ ಹಣ ೬೫೦ ಕೋಟಿ ಗೆ ಪ್ರತಿಯಾಗಿ ಗುತ್ತಿಗೆದಾರರು ನೀಡಿದ ಕಮೀಷನ ೪೨ ಕೋಟಿ ಎಂಬುದು ನಿರ್ಮಿತವಾಗಿ ಸುದ್ದಿಯಾಗಿದೆ. ಇದಲ್ಲದೆ ಇನ್ನೂ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ಪಂಚ ರಾಜ್ಯ ಚುನಾವಣೆಯ ಕಾಂಗ್ರೆಸ್ ಖರ್ಚಿಗೆ ಕಲೆಕ್ಷನ್ ಮಾಡಲಾಗುತ್ತಿದೆ ಎಂಬುವ ವಿಷಯ ಭಾರಿ ಚರ್ಚೆಯಲ್ಲಿದೆ, ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಮ್ ಹಾಗೂ ಕಲೆಕ್ಷನ್ ಕೇಂದ್ರವಾಗಿದೆ ಎಂದರು.
ಕಾನೂನು ಪ್ರಕೋಷ್ಟ ಜಿಲ್ಲಾ ಸಂಚಾಲಕ ಶಶಿಧರ ದೆಮಶೆಟ್ಟಿ ಮಾತನಾಡಿ, ರಾಜ್ಯ ಸರಕಾರ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ, ಲೋಡ್ ಶೇಡ್ಡಿಂಗ್ ಮೂಲಕ ವಿದ್ಯುತ್ ಕಡಿತ ವಿಪರೀತವಾಗಿದೆ. ಸರಕಾರ ವರ್ಗಾವಣೆ ದಂಧೆ ನಡೆಸಿದೆ. ತುಷ್ಟೀಕರಣದಲ್ಲಿ ಸರ್ಕಾರ ಮುಳುಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮೊದಲು ನಗರದ ಬಸವೇಶ್ವರ ವೃತ್ತದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿ.ಜೆ.ಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಹಚ್ಚಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ನಗರ ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ತವನರಾಜ ಬೆನ್ನಾಡಿ, ಜಯಾನಂದ ಹುಣಚ್ಯಾಳಿ, ಗ್ರಾಮೀಣ ಮಂಡಳ ಪ್ರಧಾನ ಕಾರ್ಯದರ್ಶಿ ಬಾಳೇಶ ಗಿಡ್ಡನವರ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಹಿರೇಮಠ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೆಯರ, ರೈತ ಮೋರ್ಚಾ ಅಧ್ಯಕ್ಷ ಸುರೇಶ ಪತ್ತಾರ, ಯುವ ಮೋರ್ಚಾ ಅಧ್ಯಕ್ಷ ಮಂಜು ಪ್ರಭುನಟ್ಟಿ, ನಗರ ಮಂಡಳ ಉಪಾಧ್ಯಕ್ಷ ಲಕ್ಕಪ್ಪ ತಹಶೀಲದಾರ, ಅಲ್ಪಸಂಖ್ಯಾತರ ಜಿಲ್ಲಾ ಸಂಚಾಲಕ ಶಕೀಲ ಧಾರವಾಡಕರ, ಕಿರಣ ಡಮಾಮಗರ, ಶ್ರೀದೇವಿ ತಡಕೋಡ, ಕುಸುಮಾ ಖನಗಾಂವಿ, ಈಶ್ವರ ಬಾಗೋಜಿ, ನಗರಸಭೆ ಸದಸ್ಯರಾದ ಹನಮಂತ ಕಾಳಮ್ಮನಗುಡಿ, ಬಸವರಾಜ ಆರೇನ್ನವರ, ವಿಜಯ ಜತ್ತಿ, ಸಿದ್ದಪ್ಪ ಹುಚ್ಚರಾಮಪ್ಪಗೋಳ, ಕುತ್ಬುದ್ದಿನ ಗೋಕಾಕ, ಅಬ್ದುಲಸತ್ತಾರ ಶಭಾಶಖಾನ, ಶಿವಪ್ಪ ಗುಡ್ಡಾಕಾಯು, ಹರೀಶ ಬೂದಿಹಾಳ ಸೇರಿದಂತೆ ನಗರಸಭೆ ಸದಸ್ಯರು, ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Spread the love

About Yuva Bharatha

Check Also

ಬಜೇಟ ಅಭಿವೃದ್ಧಿ ಪರವಾಗಿಲ್ಲ- ಭೀಮಶಿ ಭರಮಣ್ಣವರ.!

Spread the loveಬಜೇಟ ಅಭಿವೃದ್ಧಿ ಪರವಾಗಿಲ್ಲ- ಭೀಮಶಿ ಭರಮಣ್ಣವರ.! ಗೋಕಾಕ: ಸಿದ್ಧರಾಮಯ್ಯನವರು ಮಂಡಿಸಿರುವ ಬಜೇಟ ಅಭಿವೃದ್ಧಿ ಪರವಾಗಿಲ್ಲ. ರೈತರ, ಬಡವರ …

Leave a Reply

Your email address will not be published. Required fields are marked *

eleven + 15 =