Breaking News

ಮಧ್ಯಂತರ ಬಜೇಟ್ ವಿಕಸಿತ ಪ್ರಗತಿಶೀಲ ಭಾರತದ ಬಜೇಟ್- ರಮೇಶ ಜಾರಕಿಹೊಳಿ.!

Spread the love

ಮಧ್ಯಂತರ ಬಜೇಟ್ ವಿಕಸಿತ ಪ್ರಗತಿಶೀಲ ಭಾರತದ ಬಜೇಟ್- ರಮೇಶ ಜಾರಕಿಹೊಳಿ.!


ಗೋಕಾಕ: ಕೇಂದ್ರ ಸರಕಾರದ ಮಧ್ಯಂತರ ಬಜೇಟ್ ವಿಕಸಿತ ಪ್ರಗತಿಶೀಲ ಭಾರತದ ಬಜೇಟ್ ಇದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಮುಂದಿನ ೫ವರ್ಷಗಳಲ್ಲಿ ೨ಕೋಟಿ ಮನೆಗಳನ್ನು ಬಡವರಿಗೆ ಒದಗಿಸುವ ಗುರೀಯೇ ಮೋದಿ ಸರಕಾರದ ಗ್ಯಾರಂಟಿ. ಮಹಿಳೆಯರ ಆರ್ಥಿಕ ಅಭಿವ್ರದ್ಧಿಗೆ ಸಹಕಾರಿಯಾಗಿದೆ. ಬಜೇಟ ಶ್ರೀಸಾಮಾನ್ಯರ ಪರವಾಗಿದೆ. ಪ್ರಧಾನಿ ಮೋದಿಯವರು ಈ ವರೆಗೆ ನಡೆದು ಬಂದ ಹಾದಿ ಬಡತನ ನಿರ್ಮೂಲನೆ, ಸುಧಾರಣೆ, ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದ್ದಾರೆ. ಕೃಷಿ, ಕೈಗಾರಿಕೆ, ಉದ್ಯೋಗ, ಪ್ರವಾಸೋದ್ಯಮ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವ ನೀಡುವ ಮೂಲಕ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯ ಬಜೇಟ ಇದಾಗಿದೆ ಎಂದು ತಿಳಿಸಿದ್ದಾರೆ.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

4 × 2 =