Breaking News

ಛಾಯಾಗ್ರಾಹಕರ ಸಂಘದ ಕಚೇರಿ ಕಟ್ಟಡದ ನಿಯೋಜಿತ ಸ್ಥಳದ ನಾಮ ಫಲಕ ಅನಾವರಣಗೊಳಿಸಿದ ಗಣ್ಯರು.!

Spread the love

ಛಾಯಾಗ್ರಾಹಕರ ಸಂಘದ ಕಚೇರಿ ಕಟ್ಟಡದ ನಿಯೋಜಿತ ಸ್ಥಳದ ನಾಮ ಫಲಕ ಅನಾವರಣಗೊಳಿಸಿದ ಗಣ್ಯರು.!


ಗೋಕಾಕ: ಛಾಯಾಗ್ರಾಹಕರು ತಾಂತ್ರೀಕ ಬದಲಾವಣೆಯನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಕೌಶಲ್ಯಗಳೊಂದಿಗೆ ಧೈರ್ಯದಿಂದ ಕಾರ್ಯಪ್ರವೃತ್ತರಾದರೆ ಯಶಸ್ಸು ನಿಶ್ಚಿತವೆಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೀಲಿಪ ಕುರಂದವಾಡಿ ಹೇಳಿದರು.
ಅವರು, ಶುಕ್ರವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾ ಭವನದಲ್ಲಿ ಗೋಕಾಕ ತಾಲೂಕಾ ವೃತ್ತಿ ನಿರತ ಛಾಯಾಗ್ರಾಹಕರ ಸಂಘದಿAದ ಹಮ್ಮಿಕೊಂಡ ೧೮೩ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಭಿರ ಹಾಗೂ ಸಂಘದ ಕಚೇರಿ ಕಟ್ಟಡದ ನಿಯೋಜಿತ ಸ್ಥಳದ ನಾಮ ಫಲಕ ಅನಾವರಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮಾನವನ ಜೀವನದ ಅವಿಸ್ಮರಣೀಯ ನೆನಪುಗಳನ್ನು ಕಟ್ಟಿಕೊಡುವ ಜವಾಬ್ದಾರಿಯುತ ಕಾರ್ಯವನ್ನು ಛಾಯಾಗ್ರಾಹಕರು ಮಾಡುತ್ತಿದ್ದಾರೆ. ಉತ್ತಮ ವರದಿಗೆ ಗುಣಮಟ್ಟದ ವಿಡಿಯೋ ಮತ್ತು ಪೋಟೊಗಳು ಅತಿ ಅವಶ್ಯ. ಸಜ್ಜನ ಸಮಾಜ ನಿರ್ಮಿಸುವಲ್ಲಿ ಛಾಯಾಗ್ರಾಹಕರ ಪಾತ್ರವು ಮಹತ್ವದ್ದಾಗಿದೆ. ಈಗಿನ ಡಿಜಿಟಲ್ ಯುಗದಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ತಾಂತ್ರೀಕತೆಗೆ ಸ್ಫಂಧಿಸಿ ವೃತ್ತಿಯಲ್ಲಿ ಯಶಸ್ವಿಯಾಗಿರೆಂದು ಹಾರೈಸಿದರು.
ಸಾನಿಧ್ಯ ವಹಿಸಿದ್ದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಜೀವ ಉಳಿಸುವ ರಕ್ತದಾನ ದಂತಹ ಪವಿತ್ರ ಕಾರ್ಯ ಮಾಡುತ್ತಿರುವದು. ಮಾದರಿಯಾಗಿದ್ದು, ಈ ಸಂಘದಿAದ ಇನ್ನು ಹೆಚ್ಚು ಸಮಾಜಮುಖಿ ಕಾರ್ಯಗಳು ಬರಲಿ ಎಂದು ಹೇಳಿದರು.
ಕಾರ್ಯಕ್ರಮವನ್ನು ಕೆಎಮ್‌ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರಾದ ಸುರೇಶ ರಜಪೂತ, ಸುಭಾಸ ಶಿಂಧೆ, ಸಮಾಜ ಸೇವಕ ಅಯೂಬ ಖಾನ, ಪ್ರಗತಿಪರ ರೈತ ಲಕ್ಷಿö್ಮÃಕಾಂತ ಸೊಲ್ಲಾಪೂರೆ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಪೌರಾಯುಕ್ತ ಶಿವಾನಂದ ಹಿರೇಮಠ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಸಂಘದ ಅಧ್ಯಕ್ಷ ಮಧುಸೂದನ ಸೋನಗೋಜೆ, ಕಾರ್ಯದರ್ಶಿ ಆನಂದ ಹಳಕಟ್ಟಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

17 − 7 =