ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಸಾಹುಕಾರ್ ರಮೇಶ ಜಾರಕಿಹೊಳಿ.!
ಗೋಕಾಕ: ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿಯಲ್ಲಿ ಗೋಕಾಕ ಮತಕ್ಷೇತ್ರದ71916 ರೈತ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರದಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2ಸಾವಿರ ರೂಗಳಂತೆ ಒಂದು ವರ್ಷಕ್ಕೆ 6ಸಾವಿರ ರೂಪಾಯಿ ವಿತರಿಸಲಾಗುತ್ತಿದ್ದು, ಕೇಂದ್ರ ಸರಕಾರದಿಂದ 130ಕೋಟಿ ರೂಪಾಯಿ ಮತ್ತು ರಾಜ್ಯ ಸರಕಾರದಿಂದ 71ಕೋಟಿ ರೂಪಾಯಿ ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗುತ್ತಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಶನಿವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ರೈತರು ಕಿಸಾನ್ ಸಮ್ಮಾನ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೇಂದ್ರ ಸರಕಾರವು ಪ್ರತಿಯೋಬ್ಬರ ರೈತರಿಗೂ ಇ-ಕೆವೈಸಿ ಮಾಡಲು ಕಡ್ಡಾಯಗೊಳಿಸಿದೆ. ಇದೆ ಆಗಸ್ಟ31ರ ಒಳಗಾಗಿ ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಗಳು ಅಥವಾ ನಾಗರಿಕ ಸೇವಾಕೇಂದ್ರ(ಸಿಎಸ್‌ಸಿ)ಗಳಲ್ಲಿ ಇ-ಕೆವೈಸಿ ಮಾಡಿಸಿಕೊಂಡು ರೈತರು ಯೋಜನೆಯ ಲಾಬ ಪಡೆಯುವಂತೆ ಮನವಿ ಮಾಡಿದ್ದಾರೆ.
ರೈತರ ಮಕ್ಕಳು ಉನ್ನತ ಶಿಕ್ಷಣ ಹೊಂದಲು ಸರಕಾರ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆ ಜಾರಿಗೆ ತಂದಿದ್ದು, ಗೋಕಾಕ ಮತಕ್ಷೇತ್ರದ 11948 ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸೈತ ವಿದ್ಯಾ ನಿಧಿ ಯೋಜನೆಯಡಿಯಲ್ಲಿ 383 ಕೋಟಿ ರೂಗಳನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆ ಜಮೆ ಮಾಡುತ್ತಿದೆ. ಸರಕಾರ ರೈತ ಪರವಾಗಿ, ರೈತರ ಶ್ರೇಯೋಭವೃದ್ಧಿಗಾಗಿ ಶ್ರಮಿಸುತ್ತಿರುವದನ್ನು ಶಾಸಕ ರಮೇಶ ಜಾರಕಿಹೊಳಿ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಅಭಿನಂಧಿಸಿದ್ದಾರೆ.