Breaking News

ಸಮುದಾಯ ಒಗ್ಗಟ್ಟಾಗಿ ಇದ್ದರೆ ಸಂಘಕ್ಕೆ ಮತ್ತಷ್ಟು ಬಲ ಬರಲಿದೆ- ಎಸ್ ಎಮ್ ಹತ್ತಿಕಟಗಿ.!

Spread the love

ಸಮುದಾಯ ಒಗ್ಗಟ್ಟಾಗಿ ಇದ್ದರೆ ಸಂಘಕ್ಕೆ ಮತ್ತಷ್ಟು ಬಲ ಬರಲಿದೆ- ಎಸ್ ಎಮ್ ಹತ್ತಿಕಟಗಿ.!


ಗೋಕಾಕ: ಉಪ್ಪಾರ ಸಮಾಜ ಹಿಂದುಳಿದ ಸಮಾಜವಾಗಿದ್ದು, ಸಮಾಜ ಭಾಂದವರು ಸಂಘಟಿತರಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಹೊಂದಲು ಸಂಘಟಿತರಾಗುವ ಅವಶ್ಯಕತೆ ಇದ್ದು, ಸಮಾಜ ಭಾಂಧವರ ಸಹಕಾರ ಕೂಡ ಅಗತ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಉಪ್ಪಾರ ಸಮಾಜದ ಮುಖಂಡ ಎಸ್ ಎಮ್ ಹತ್ತಿಕಟಗಿ ಹೇಳಿದರು.
ಅವರು, ನಗರದ ಉಪ್ಪಾರಗಲ್ಲಿಯ ಶ್ರೀ ಭಗೀರಥ ಕಲ್ಯಾಣ ಮಂಟಪದಲ್ಲಿ ನಡೆದ ಉಪ್ಪಾರ ಸಮಾಜದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಉಪ್ಪಾರ ಸಮುದಾಯ ಒಗ್ಗಟ್ಟಾಗಿ ಇದ್ದರೆ ಸಂಘಕ್ಕೆ ಮತ್ತಷ್ಟು ಬಲ ಬರಲಿದೆ ಎಂದರು.
ನೂತನ ಅಧ್ಯಕ್ಷರಾಗಿ ಶಿವಪುತ್ರ ಜಕಬಾಳ, ಉಪಾಧ್ಯಕ್ಷÄಗಳಾಗಿ ಕುಶಾಲ ಗುಡೇನ್ನವರ, ಅಡಿವೆಪ್ಪ ಕಿತ್ತೂರ, ಕಾರ್ಯದರ್ಶಿಯಾಗಿ ವಿಠ್ಠಲ ಮೆಳವಂಕಿ, ಸಹ ಕಾರ್ಯದರ್ಶಿಯಾಗಿ ಯಲ್ಲಪ್ಪ ದುರದುಂಡಿ ಅವರನ್ನು ಸರ್ವಾನುಮತದಿಂದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸಮಾಜದ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ವಿಠ್ಠಲ ಸವದತ್ತಿ, ಟಿ ಆರ್ ಕಾಗಲ, ನ್ಯಾಯವಾದಿಗಳಾದ ಬಿ ಆರ್ ಕೊಪ್ಪ, ಕುಳ್ಳೂರ, ಪರಸಪ್ಪ ಚೂನನ್ನವರ, ಭೀಮಶಿ ಭರಮನ್ನವರ, ಭರಮಣ್ಣ ಉಪ್ಪಾರ, ಮಲ್ಲಿಕಾರ್ಜುನ ಚೌಕಾಶಿ, ಬಸವರಾಜ ಖಾನಪ್ಪನವರ, ಸದಾಶಿವ ಗುದಗಗೋಳ, ಅಶೋಕ ಗೋಣಿ, ಯಲ್ಲಪ್ಪ ಹೆಜ್ಜೆಗಾರ, ಮಾಯಪ್ಪ ತಹಶೀಲದಾರ, ಲಕ್ಕಪ್ಪ ತಹಶೀಲದಾರ, ಲಕ್ಷö್ಮಣ ಖಡಕಭಾಂವಿ ಸೇರಿದಂತೆ ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

three × four =