Breaking News

ಶಾಸಕ ಯತ್ನಾಳ ಜನ್ಮ ದಿನದ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜನೆ!

Spread the love

ಶಾಸಕ ಯತ್ನಾಳ ಜನ್ಮ ದಿನದ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜನೆ!

ಕೊಲ್ಹಾರ : ಮಾಜಿ ಕೇಂದ್ರ ಮಂತ್ರಿಗಳು,ವಿಜಯಪುರ ನಗರ ಶಾಸಕ, ಸಿದ್ಧಿಸಿರಿ ಸೌಹಾರ್ದ ಸಹಕಾರಿಯ ಮತ್ತು ಎ S S ಆಸ್ಪತ್ರೆ ಅಧ್ಯಕ್ಷರಾದ ಬಸವನಗೌಡ ರಾಮನಗೌಡ ಪಾಟೀಲ ಯತ್ನಾಳ ರವರ ೫೯ನೇ ಜನ್ಮದಿನದ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಮಂಗಳವಾರ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ಶಿಬಿರ ಉದ್ಘಾಟಿಸಿ ಸಿದ್ಧಿಸಿರಿ ಸೌಹಾರ್ದ ವ್ಯವಸ್ಥಾಪಕ ನಿರ್ದೇಶಕರಾದ ಜೊತಿಬಾ ಎಂ,ಖAಡಾಗಳೆ ಮಾತನಾಡಿ, ತಮ್ಮ ನಾಯಕರ ಜನ್ಮ ದಿನವನ್ನು ಬಹಳಷ್ಟು ಸಂಘ ಸಂಸ್ಥೆಗಳ ನೌಕರರು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಕೊಲ್ಹಾರ ಸಿದ್ದಸಿರಿ ಸೌಹಾರ್ದ ಸಹಕಾರಿಯಲ್ಲಿ ಪಿಗ್ಮಿ ಎಜೇಂಟ್ ರಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಣ ಕಾಳಗಿಯವರು ಶಾಸಕ ಬಸನಗೌಡ ಪಾಟೀಲ ಯತ್ನಾಳರವರ ಮೇಲಿನ ಪ್ರೀತಿ, ಅಭಿಮಾನದಿಂದ ಅವರ ೫೯ನೇ ಜನ್ಮ ದಿನದಂದು ಕೊಲ್ಹಾರ ಹಾಗೂ ಕೊಲ್ಹಾರ ತಾಲೂಕಿನ ಸುತ್ತ ಮುತ್ತಲಿನ ಜನರಿಗೆ ಉಪಯೋಗವಾಗಲೆಂದು ಸ್ವಂತ ಖರ್ಚಿನಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಮಾನವೀಯತೆ ಮೆರೆದಿದ್ದಾರೆ ಅವರಿಗೆ ಶಾಸಕರ ಪರವಾಗಿ ಅಭಿನಂದನೆಗಳು ಎಂದರು.

ಜೆ ಎಸ್ ಎಸ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಿದ್ದಸಿರಿ ಬ್ಯಾಂಕಿನ ಸಿಬ್ಬಂದಿಯವರು ಶಾಲೆಯಲ್ಲಿ ಆಸ್ಪತ್ರೆ ಮಾದರಿ ಸಿದ್ಧತೆಯನ್ನು ಮಾಡಿಕೊಂಡಿದ್ದರು. ೭೦೦ಕ್ಕೂ ಹೆಚ್ಚು ಜನ ಬಿ ಪಿ,ಶುಗರ್,ಇ ಸಿ ಜಿ, ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡರು.ಶಾಸಕರ ೫೯ನೇ ಜನ್ಮ ದಿನದ ನಿಮಿತ್ಯ ೫೯ಜನ ರಕ್ತದಾನ ಮಾಡಿ ವಿಶೇಷತೆ ಮೆರೆದರು.

ಈ ಸಂದರ್ಭದಲ್ಲಿ ಸಹಾಯಕ ಮಹಾ ಪ್ರಬಂಧಕರಾದ ಉಮೇಶ ಬ ಹಾರಿವಾಳ,ಕೊಲ್ಹಾರ ವಲಯದ ಅಧಿಕಾರಿಗಳಾದ ಎಸ್ ಎಸ್ ಗೌರಿಮಠ,ಸಾಲ ವಸೂಲಾತಿ ವಿಭಾಗದ ವಲಯದ ಅಧಿಕಾರಿಗಳಾದ ಮಹೇಶ ಹೋಡ್ಲ, ವೈದ್ಯರಾದ ಡಾ.ಕೃಷ್ಣ ಅಗರಖೇಡ, ಡಾ. ಮಾಸಳಿ,ಕೊಲ್ಹಾರ ವಲಯದ ಪಿಗ್ಮಿ ಏಜೆಂಟರವರಾದ ಲಕ್ಷ್ಮಣ ಕಾಳಗಿ,ಕೊಲ್ಹಾರ ವಲಯದ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಪೀಗ್ಮಿ ಏಜೆಂಟರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪಶ್ಚಿಮ ಬಂಗಳಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಖಂಡಿಸಿ ನಗರದ ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಿಂದ ಪ್ರತಿಭಟನೆ.!

Spread the loveಪಶ್ಚಿಮ ಬಂಗಳಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಖಂಡಿಸಿ ನಗರದ ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಿಂದ ಪ್ರತಿಭಟನೆ.! ಗೋಕಾಕ: …

Leave a Reply

Your email address will not be published. Required fields are marked *

thirteen + 13 =