Breaking News

ಸಮಾಜ ನಮಗೆ ಎಲ್ಲವನ್ನು ನೀಡಿದ್ದು, ಸಮಾಜಕ್ಕಾಗಿ ನಾವು ಕೊಡುಗೆಯನ್ನು ನೀಡಬೇಕು. ಈ ಮಾರ್ಗದಲ್ಲಿ ಶ್ರೀ ಸಾಯಿ ಸಮರ್ಥ ಫೌಂಡೇಶನ್‌ವರು ಸಮಾಜಮುಖಿಯಾಗಿದೆ- ಡಾ|| ಆನಂದ ಎತ್ತಿನಮನಿ!!

Spread the love

ಸಮಾಜ ನಮಗೆ ಎಲ್ಲವನ್ನು ನೀಡಿದ್ದು, ಸಮಾಜಕ್ಕಾಗಿ ನಾವು ಕೊಡುಗೆಯನ್ನು ನೀಡಬೇಕು. ಈ ಮಾರ್ಗದಲ್ಲಿ ಶ್ರೀ ಸಾಯಿ ಸಮರ್ಥ ಫೌಂಡೇಶನ್‌ವರು ಸಮಾಜಮುಖಿಯಾಗಿದೆ- ಡಾ|| ಆನಂದ ಎತ್ತಿನಮನಿ!!

 

ಯುವ ಭಾರತ ಸುದ್ದಿ ಗೋಕಾಕ: ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಂಡು ನಾವೆಲ್ಲ ಸಮಾಜದ ಋಣವನ್ನು ತೀರಿಸೋಣವೆಂದು ನಗರದ ನೇತ್ರತಜ್ಞ ಡಾ|| ಆನಂದ ಎತ್ತಿನಮನಿ ಹೇಳಿದರು.
ಬುಧವಾರದಂದು ನಗರದಲ್ಲಿ ಇಲ್ಲಿಯ ಶ್ರೀ ಸಾಯಿ ಸಮರ್ಥ ಫೌಂಡೇಶನ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ನವರು ಹಮ್ಮಿಕೊಂಡ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಅನುಕೂಲಕ್ಕಾಗಿ ಅವಶ್ಯಕ ಸಲಕರಣೆಗಳ ವಿತರಣಾ ಹಾಗೂ ರಕ್ತದಾನಿಗಳ ಮತ್ತು ಸಂಸ್ಥೆಯಿAದ ಉಚಿತ ನೇತ್ರಶಸ್ತç ಚಿಕಿತ್ಸೆಗೊಳಗಾದವರಿಗೆ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಗೋಕಾಕ ನಗರದಲ್ಲಿ ಇಲ್ಲಿಯ ಶ್ರೀ ಸಾಯಿ ಸಮರ್ಥ ಫೌಂಡೇಶನ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ನವರು ಹಮ್ಮಿಕೊಂಡ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಅನುಕೂಲಕ್ಕಾಗಿ ಅವಶ್ಯಕ ಸಲಕರಣೆಗಳನ್ನು ಗಣ್ಯರು ವಿತರಿಸುತ್ತಿರುವುದು.

ಸಮಾಜ ನಮಗೆ ಎಲ್ಲವನ್ನು ನೀಡಿದ್ದು, ಸಮಾಜಕ್ಕಾಗಿ ನಾವು ಕೊಡುಗೆಯನ್ನು ನೀಡಬೇಕು. ಈ ಮಾರ್ಗದಲ್ಲಿ ಶ್ರೀ ಸಾಯಿ ಸಮರ್ಥ ಫೌಂಡೇಶನ್‌ವರು ಸಮಾಜಮುಖಿಯಾಗಿ, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಸೇರಿದಂತೆ ಬಡವರ ದೀನದಲಿತರ ಸೇವೆ ಮಾಡುತ್ತಿರುವುದು ಮಾದರಿಯಾಗಿದೆ. ಸಂಸ್ಥೆಯ ಈ ಕಾರ್ಯಕ್ಕೆ ನಾವು ಸಹಕಾರ ಕೊಡುವುದರೊಂದಿಗೆ ಸಂಸ್ಥೆ ಇನ್ನೂ ಹೆಚ್ಚು-ಹೆಚ್ಚು ಸಮಾಜಮುಖಿ ಕಾರ್ಯ ಮಾಡಲು ಪ್ರೋತ್ಸಾಹಿಸೋಣವೆಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಆನಂದ ಪಾಟೀಲ ಮಾತನಾಡಿ, ಈಗಾಗಲೇ ನಮ್ಮ ಸಂಸ್ಥೆಯಿAದ ಉಚಿತ ನೇತ್ರಶಸ್ತç ಚಿಕಿತ್ಸೆ, ಕಂಪ್ಯೂಟರ್ ತರಬೇತಿ, ರಕ್ತದಾನ, ಅನ್ನದಾನ ಹಾಗೂ ಪುಣ್ಯಕ್ಷೇತ್ರಗಳ ಯಾತ್ರೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಮನೆಯಲ್ಲಿಯೇ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಅನುಕೂಲಕ್ಕಾಗಿ ಉಚಿತವಾಗಿ ಶೌಚ್‌ಆಸನ ಹೊಂದಿದ ವ್ಹೀಲ್‌ಚೇರ್, ವಿಶೇಷ ಬೆಡ್‌ಮಂಚಗಳು ಸೇರಿದಂತೆ ಇತರೆ ಅವಶ್ಯಕ ಸಾಮಗ್ರಿಗಳನ್ನು ಇಂದು ವಿತರಿಸಲಾಯಿತು. ರೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ಮುAಬರುವ ದಿನಗಳಲ್ಲಿ ಯುವ ಪೀಳಿಗೆಗೆ ಉನ್ನತ ಹುದ್ದೆಯನ್ನು ಅಲಂಕರಿಸಲು ಉಚಿತ ತರಬೇತಿ, ಉಚಿತ ಕಲ್ಯಾಣ ಮಂಟಪ್, ಮಹಿಳೆಯರಿಗಾಗಿ ಸ್ವ-ಉದ್ಯೋಗಗಳನ್ನು ಕೈಗೊಳ್ಳಲು ತರಬೇತಿ ನೀಡಲಾಗುವುದು ಎಂದ ಅವರು ಸಂಸ್ಥೆಯ ಜೊತೆ ಸೇವಾ ಮನೋಭಾವದಿಂದ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವವರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವAತೆ ಕೋರಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅರುಣ ಸಾಲಹಳ್ಳಿ, ಉಪಾಧ್ಯಕ್ಷ ಸತೀಶ ಚಿಪ್ಪಲಕಟ್ಟಿ, ಅತಿಥಿಗಳಾದ ಎಮ್.ವಾಯ್.ಹಾರುಗೇರಿ, ಬಾಪುಗೌಡ ಪಾಟೀಲ, ಡಾ|| ವೈಜಯಂತಿ ಗುಡಗುಡಿ, ಸಂಜಯ ನೇರಲಿ, ನಿರ್ದೇಶಕರಾದ ವೀರಭದ್ರ ಜಂತಿ, ಸಂಜು ಚಿಪ್ಪಲಕಟ್ಟಿ ಸೇರಿದಂತೆ ಅನೇಕರು ಇದ್ದರು.

 


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

19 − twelve =