Breaking News

ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ ಸಂಪನ್ನ

Spread the love

ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ ಸಂಪನ್ನ

ಯುವ ಭಾರತ ಸುದ್ದಿ ಇಂಡಿ :
ಮಠಾದೀಶರು ನನ್ನ ಜೀವನದ ಆಗುಹೋಗುಗಳನ್ನು ಹೇಳಿ ಆಶೀರ್ವದಿಸಿದ್ದಾರೆ. ಅವರು ಹೇಳಿದಂತೆ ಎಲ್ಲವೂ ನಡೆದು ಹೋಗಿದೆ.ಮಠ,ದೇವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಏನಿದೆಯೋ ಎಲ್ಲವು ತೋರಿಸಿಕೊಟ್ಟಿದ್ದಾರೆ. ಮುದೋಳದ ಮೃತ್ಯಂಜಯ ಮಹಾಸ್ವಾಮೀಜಿ ಅವರ ಮಠದಲ್ಲಿ ಕಂತಿಭಿಕ್ಷೆ ಬೇಡಿ ತಂದಿರುವ ಪ್ರಸಾದವನ್ನು ಸ್ವೀಕರಿಸಿ ವಿದ್ಯಾಭ್ಯಾಸ ಮಾಡಿದಕ್ಕಾಗಿ ಮಠದ ಆಶೀರ್ವಾದ ಸದಾ ನನ್ನ ಮೇಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ಬುಧವಾರ ತಾಲೂಕಿನ ಗೋಳಸಾರ ಗ್ರಾಮದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ ೨೯ ನೇ ಪುಣ್ಯಾರಾಧನೆ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ,ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂಡಿ ಭಾಗದ ಭಕ್ತರ ಅನುಕೂಲಕ್ಕಾಗಿ ಶ್ರೀ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಅನ್ನದಾಸೋಹ,ಜ್ಞಾನದಾಸೋಹ,ಆರೋಗ್ಯ ಚಿಂತನೆ,ಶೈಕ್ಷಣಿಕ,ಸಾಮೂಹಿಕ ವಿವಾಹದಂತ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ರೀಗಳಲ್ಲಿ ಭಕ್ತರ ಮೇಲಿರುವ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.ಶ್ರೀಮಠದ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಾಯ,ಸಹಕಾರ ಇದೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ,ಸಾಮೂಹಿಕ ವಿವಾಹದಂತ ಧಾರ್ಮಿಕತೆಯ ಜೊತೆಗೆ ಸಮಾಜ ಕಾರ್ಯಮಾಡುತ್ತಿರುವ ಗೋಳಸಾರ ಮಠ ಶ್ರೇಷ್ಠ ಕಾರ್ಯ ಮಾಡುತ್ತಿದೆ.ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದರ ಜೊತೆಗೆ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನವ ವಧುವರರು ನಾಡಿನ ಶರಣರು,ಸಂತರ ಆಶೀರ್ವಾದ ಪಡೆದುಕೊಳ್ಳುತ್ತಿರುವುದು ಭಾಗ್ಯ ಎಂದು ಹೇಳಿದರು.ಶ್ರೀಮಠದಿಂದ ವೈದ್ಯಕೀಯ,ಕೃಷಿ ಮೇಳ,ಸಾಧಕರನ್ನು ಸತ್ಕರಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.
ಸೊನ್ನ ದಾಸೋಹ ಮಠದ ಡಾ.ಶಿವಾನಂದ ಶ್ರೀಗಳು ಮಾತನಾಡಿ,ಗೋಳಸಾರ ಮಠದ ಶ್ರೀ ಅಭಿನವ ಪುಂಡಲಿಂಗ ಮಹಾಶಿವಯೊಗಿಗಳು ಸಮಾಜಮುಖಿ ಕಾರ್ಯಗಳು ಮಾಡುವುದರ ಜೊತೆಗೆ ಅಧ್ಯಾತ್ಮೀಕ,ಜ್ಞಾನ ದಾಸೋಹ ನೀಡುತ್ತಿರುವುದು ಈ ಭಾಗದ ಭಕ್ತರ ಭಾಗ್ಯ.ಹಿಂದಿನ ಶ್ರೀಗಳು ಹಾಕಿದ ಆಯಾಮಗಳಲ್ಲಿ ಇಂದಿನ ಪೀಠಾಧಿಪತಿ ಅಭಿನವ ಪುಂಡಲಿಂಗ ಶ್ರೀಗಳು ಈ ಭಾಗದ ಸರ್ವಸಮುದಾಯದ ಜನರ ಕಲ್ಯಾಣ ಬಯಸಿ,ವಿವಿಧ ಕಾರ್ಯಗಳು ಹಾಕಿಕೊಂಡು ಭಕ್ತರ ಮನಮುಟ್ಟುವ ಕಾರ್ಯ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಅಭಿನವ ಪುಂಡಲಿಂಗ ಮಹಾಶೀವಯೋಗಿಗಳು ಸಾನಿಧ್ಯ ವಹಿಸಿದ್ದರು.ಬಸವಲಿಂಗ ಮಹಾಸ್ವಾಮೀಜಿ,ಸೋಮಲಿಂಗ ಮಹಾರಾಜ,ಅಭಿನವ ಶಿವಲಿಂಗೇಶ್ವರ ಶ್ರೀ,ಮಲ್ಲಿಕಾರ್ಜುನ ಶ್ರೀ,ಕರೆಪ್ಪ ಮಹಾರಾಜ,ಸಿದ್ದರಾಮ ಶ್ರೀ,ಸಂಗನಬಸವ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಆಲಿಂಗರಾಯ ಮಹಾರಾಜಮಠ, ಬಾಬುಸಾಹುಕಾರ ಮೇತ್ರಿ,ಬಿ.ಡಿ.ಪಾಟೀಲ,ಕಾಸುಗೌಡ ಬಿರಾದಾರ,ಡಾ.ಮಲ್ಲಿಕಾರ್ಜುನ ಕಲ್ಲೂರ,ಎಸಿ ರಾಮಚಂದ್ರ ಗಡಾದೆ,ತಹಶೀಲ್ದಾರ ನಾಗಯ್ಯ ಹಿರೇಮಠ,ಸಿಪಿಐ ಮಹಾದೇವ ಶಿರಹಟ್ಟಿ,ಪಿಎಸೈ ಅಶೋಕ ನಾಯಕ,ಮನೋಹರ ಮಂದೋಲಿ,ವಿರಾಜ ಪಾಟೀಲ,ಆನಂದ ಶಾಸ್ತ್ರಿ,ನಾಗೇಂದ್ರ ಜೇವೂರ,ಮಲ್ಲಿಕಾರ್ಜುನ ಸಾಲಿ,ಎಸ್.ಬಿ.ಬರಗುಂಡಿ,ರಾಜು ತೆಗ್ಗಿಹಳ್ಳಿ,ಪ್ರಭುಗೌಡ ಪಾಟೀಲ,ದತ್ತಾತ್ರೇಯ ಮಠಪತಿ,ಬಾಬುಗೌಡ ಪಾಟೀಲ,ಎಂ.ಆರ್.ಪಾಟೀಲ,ಚನ್ನುಗೌಡ ಪಾಟೀಲ,ದೇವೆಂದ್ರ ಕುಂಬಾರ,ವೆಂಕಟೇಶ ಕುಲಕರ್ಣಿ, ರಾಮಸಿಂಗ ಕನ್ನೊಳ್ಳಿ,ಶ್ರೀಮಂತ ಹಂಜಗಿ,ಹಣಮಂತ ಮಾಲಗಾರ,ಸಿದ್ದಪ್ಪ ಗುನ್ನಾಪೂರ,ಸಂಗಣ್ಣ ನಿಂಬರಗಿ,ಸಿದ್ದರಾಮ ತೆಗ್ಗೆಳ್ಳಿ,ಬಾಳು ಗಣೋರಿ,ಎ.ಪಿ.ಕಾಗವಾಡಕರ,ಆದಪ್ಪ ಪಾಸೋಡಿ,ರವೀಂದ್ರ ಆಳೂರ,ಶಿವಲಿಂಗಪ್ಪ ನಾಗಠಾಣ, ಆಲಿಂಗರಾಯ ಕುಮಸಗಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.ಇದೆ ಸಂದರ್ಭದಲ್ಲಿ ಸಾಧಕರಿಗೆ ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿ ನೀಡಲಾಯಿತು.ಶ್ರೀಮಠದಿಂದ ಅಂಬ್ಯುಲೆನ್ಸ ಲೋಕಾರ್ಪಣೆ ಮಾಡಲಾಯಿತು.

ಬಾಕ್ಸ :
ನಾಡು ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದ ನಂತರ ಈ ಭಾಗದ ಭಕ್ತರ ಹೃದಯದಲ್ಲಿ ಸದಾ ಪೂಜಿಸಿಕೊಳ್ಳುತ್ತಿರುವ ತ್ಯಾಗಜೀವಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅವರು ಸೂರ್ಯ,ಚಂದ್ರ ಇರುವವರೆಗೂ ಅವರು ಅಜರಾಮರವಾಗಿದ್ದಾರೆ ಎನ್ನುವುದಕ್ಕೆ ಅವರು ನೀಡಿದ ಪ್ರವಚನ,ಸಂದೇಶಗಳೇ ಸಾಕ್ಷಿ,ಅಂತಹ ಮಹಾನ್ ಸಂತರ ಬದುಕಿನ ಚಿತ್ರಣವನ್ನು ಪಠ್ಯಪುಸ್ತಕದಲ್ಲಿ ಬರಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಬುಧವಾರ ತಾಲೂಕಿನ ಗೋಳಸಾರ ಗ್ರಾಮದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ ೨೯ ನೇ ಪುಣ್ಯಾರಾಧನೆ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ,ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯಪುರದ ಗೋಳಗುಮ್ಮಟ ವಿಶ್ವ ಪ್ರಖ್ಯಾತವಾದಂತೆ ನಮ್ಮ ಜಿಲ್ಲೆಯ ಸಂಗನಬಸವ ಶ್ರೀಗಳು,ಸಿದ್ದೇಶ್ವರ ಶ್ರೀಗಳು,ಚಿಂತಕ ಎಂ.ಎಂ.ಕಲಬುರ್ಗಿ,ಸಾಹಿತ್ಯದ ಮೇಲುಪರ್ವತ ಹಲಸಂಗಿಯ ಗೆಳೆಯರ ಬಳಗ,ಶರಣ ಶ್ರೇಷ್ಠ ಪುಂಡಲಿಂಗ ಮಹಾಶೀವಯೋಗಿಗಳು ವಿಶ್ವ ಪ್ರಖ್ಯಾತರಾಗಿ ಜಿಲ್ಲೆಯ ಹೆಸರು ಪ್ರಜ್ವಲಿಸಿದ್ದಾರೆ ಎಂದು ಹೇಳಿದರು.
ಗುರುಪರಂಪರೆ,ಸರ್ವರನ್ನು ಪ್ರೀತಿಸುವ ವಿಶ್ವದ ರಾಷ್ಟçಗಳಲ್ಲಿ ಭಾರತ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದೆ.ಎಲ್ಲರ ಹಿತವನ್ನು ಬಯಸುವ ಗೋಳಸಾರದ ಪುಂಡಲಿAಗ ಮಹಾಶಿವಯೋಗಿಗಳ ಆಶೀರ್ವಾದ ಎಲ್ಲರ ಮೇಲಿರಲಿ.ಸರ್ಕಾರ ಮಾಡುವ ಕೆಲಸ ಸಾರ್ವಜನಿಕರ ಅನುಕೂಲಕ್ಕಾಗಿ ಶ್ರೀಗಳು ಮಠದಿಂದ ಅಂಬ್ಯುಲೆನ್ಸ ಲೋಕಾರ್ಪಣೆಗೊಳಿಸಿದ್ದು ಮಠದ ಸಮಾಜಮುಖಿ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.
ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ,ಯಾವುದು ಕೇಳಗೆ ಬಿದ್ದಿದೆಯೋ ಅದನ್ನು ಮೇಲೆತ್ತುವುದೇ ಧರ್ಮ.೧೨ ನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣದಲ್ಲಿ ಕೆಳಗೆ ಬಿದ್ದಿರುವವರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೋ ಆ ಕೆಲಸ ಗೋಳಸಾರ ಮಠದಲ್ಲಿ ಇಂದು ನಡೆಯುತ್ತಿದ್ದು,ಗೋಳಸಾರ ಮಠ ಅಧುನಿಕ ಕಲ್ಯಾಣ ಎಂದು ಹೇಳಿದರು.
೧೨ ಶತಮಾನದಲ್ಲಿ ಕಲ್ಯಾಣದಲ್ಲಿ ಜ್ಞಾನದಾಸೋಹ,ಅನ್ನದಾಸೋಹ,ಆರೋಗ್ಯ ಸೇವೆ,ಭಕ್ತರ ಚಿಂತನೆ,ಸಮಾಜ ಸೇವಾ ಕಾರ್ಯ ನಡೆದಂತೆ ಗೋಳಸಾರ ಮಠದ ಅಭಿನವ ಪುಂಡಲಿಂಗ ಮಹಾಶೀವಯೋಗಿಗಳು ಇಂದು ಮಾಡುತ್ತಿದ್ದು,ನಿಜಕ್ಕೂ ಇದೊಂದು ನವ ಕಲ್ಯಾಣ ಎಂದು ಹೇಳಿದರು.
ಎಸ್.ಬಿ.ಬರಗುಂಡಿ,ಆನಂದ ಶಾಸ್ತ್ರಿ,ರಾಜು ತೆಗ್ಗಿಹಳ್ಳಿ,ಪ್ರಭುಗೌಡ ಪಾಟೀಲ,ದಿ.ಮಲಕಯ್ಯಸ್ವಾಮಿ ಮಠಪತಿ ಅವರಿಗೆ ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿ ನೀಡಲಾಯಿತು.


Spread the love

About Yuva Bharatha

Check Also

ಮತ್ತೆ ಕಂಪಿಸಿದ ಭೂಮಿ

Spread the loveಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ …

Leave a Reply

Your email address will not be published. Required fields are marked *

11 + one =