4ನೇ ವರ್ಷದ ರಾಜ್ಯ ಮಟ್ಟದ ಮುಕ್ತ ವಿಭಾಗದ ಚಿತ್ರಕಲಾ ಸ್ಪರ್ಧೆ ಮತ್ತು ಚಿತ್ರಕಲಾ ಪ್ರದರ್ಶನ.!
ಗೋಕಾಕ: ಕೆಎಮ್‌ಎಫ್ ನಿರ್ದೇಶಕ ಅಮರನಾಥ ಜಾರಕಿಹೋಳಿ ಅಭಿಮಾನಿ ಬಳಗ, ಯುವ ಚಿತ್ರ ಕಲಾವಿದರ ಪ್ರತಿಷ್ಠಾನ (ರಿ)ಗೋಕಾಕ ಇವರ ಸಂಯುಕ್ತಾಶ್ರದಲ್ಲಿ ೪ನೇ ವರ್ಷದ ರಾಜ್ಯ ಮಟ್ಟದ ಮುಕ್ತ ವಿಭಾಗದ ಚಿತ್ರಕಲಾ ಸ್ಪರ್ಧೆ ಮತ್ತು ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ನಗರದ ಸಮುದಾಯ ಭವನದಲ್ಲಿ ನಡೆಯಿತು.
ಕಲಾವಿದ ಮಹಾನಿಂಗ ಹೊಸಕೋಟಿ ಅವರು ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ತಾವುಗಳು ವೇಗವಾಗಿ ಕೆಲಸ ಕಾರ್ಯ ಮಾಡಬಹುದು ಆದರೆ ಚಿತ್ರಗಳನ್ನು ಬಿಡಿಸುವಾಗ ಮಾತ್ರ ನಮ್ಮಲ್ಲಿ ತಾಳ್ಮೆ ಇದ್ದರೆ ಮಾತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸಬಹುದು ಅದಕ್ಕಾಗಿ ಮನುಷ್ಯನಿಗೆ ತಾಳ್ಮೆ ಬಹುದೊಡ್ಡ ಆಸ್ತಿ ಎಂದರು.
ಈ ಸ್ಫರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಚಿತ್ರಕಲಾವಿದರು ತಮ್ಮ ಕುಂಚದಿAದ ಸಂದೇಶ ಸಾರುವ ವಿವಿಧ ಚಿತ್ರಗಳನ್ನು ಬಿಡಿಸಿದರು.
ಚಿತ್ರಕಲಾ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಜಮಖಂಡಿಯ ಸಂತೋಷ ಗುದ್ದೊಡಗಿ, ದ್ವೀತಿಯ ಬಹುಮಾನವನ್ನು ಬೈಲಹೊಂಗಲದ ಡಿ ಬಿ ಮೆಳವಂಕಿ, ತೃತೀಯ ಬಹುಮಾನ ಉಗಾರದ ಸಿಂಧು ಪಾಟೀಲ ಪಡೆದಿದರು. ಬಾಗವಹಿಸಿದ ಎಲ್ಲ ಸ್ಪರ್ದಾಳುಗಳಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಜೆಪಿ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಸ್ಥಾಯಿ ಸಮಿತಿ ಚೆರಮನ್ನ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜಶ್ರೀ ಒಡೆಯರ, ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ, ಕುತುಬುದ್ದಿನ ಗೋಕಾಕ, ಯೂಸುಫ್ ಅಂಕಲಗಿ, ಮುಖಂಡರಾದ ದುರ್ಗಪ್ಪ ಶಾಸ್ತಿçಗೊಲ್ಲರ, ಅಬ್ಬಾಸ ದೇಸಾಯಿ, ಹರೀಶ ಬೂದಿಹಾಳ, ವಿಶ್ವನಾಥ ಬಿಳ್ಳೂರ, ಉಪನ್ಯಾಸಕ ದಯಾನಂದ ಕಾಮಕರ, ಕಲಾವಿದ ರಾಜು ಮುಲ್ಲಾ, ಕು.ಅಕ್ಷತಾ ಕೊಕ್ಕರಿ, ಸೇರಿದಂತೆ ನಗರಸಭೆ ಸದಸ್ಯರು, ಯುವ ಚಿತ್ರ ಕಲಾವಿದರ ಪ್ರತಿಷ್ಠಾನದವರು ಉಪಸ್ಥಿತರಿದ್ದರು.
ಶೈಲಾ ಕೊಕ್ಕರಿ, ನಿರೂಪಿಸಿ, ವಂದಿಸಿದರು.