Breaking News

ಖತರ್ನಾಕ ಇರಾನಿ ಗ್ಯಾಂಗ್ ಬೆನ್ನತ್ತಿದ ಗೋಕಾಕ ಪೋಲಿಸ್.!

Spread the love

ಖತರ್ನಾಕ ಇರಾನಿ ಗ್ಯಾಂಗ್ ಬೆನ್ನತ್ತಿದ ಗೋಕಾಕ ಪೋಲಿಸ್.!

 

 

ಯುವ ಭಾರತ ವಿಶೇಷ

ಗೋಕಾಕ: ನಗರದಲ್ಲಿ ಪೋಲಿಸರ ಸೋಗಿನಲ್ಲಿ ಪದೇ ಪದೇ ನಡೆಯುತ್ತಿರು ಸರಗಳ್ಳತನ ಪ್ರಕರಣಕ್ಕೆ ಸಂಬಧಿಸಿದ0ತೆ ಎಚ್ಚೆತ್ತುಕೊಂಡಿರುವ ಪೋಲಿಸ್ ಇಲಾಖೆ. ಈ ಕಳ್ಳತನ ನಡೆಸುವ ಗ್ಯಾಂಗ್‌ಗೆ ಗೋಕಾಕ ಪೋಲಿಸರು ಜಾಲ ಬೀಸಿದ್ದಾರೆ.
ಕಳೆದ ಮೇ31ರಂದು ಇಲ್ಲಿಯ ನವೀನ್ ಪೇಗ್ ಬಾರ್ ಹತ್ತಿರ ಮತ್ತು ಇದೆ ಜುಲೈ ತಿಂಗಳ 20ರಂದು ವಿವೇಕಾನಂದ ನಗರದಲ್ಲಿ ಪೋಲಿಸರ ಸೋಗಿನಲ್ಲಿ ಮಹಿಳೆಯರನ್ನು ಅಡ್ಡಗಟ್ಟಿ ಮೈ ಮೇಲೆ ಬಂಗಾರದ ಆಭರಣಗಳನ್ನು ಹಾಕಿಕೊಂಡು ಒಡಾಡಬೇಡಿ. ಕಳ್ಳರು ಚೈನ್ ಸ್ನಾಚಿಂಗ್ ಮಾಡಿದರೆ ಏನು ಮಾಡುತ್ತಿರಾ ಎಂದು ಮಹಿಳೆಯರನ್ನು ಪ್ರಶ್ನಿಸಿ ಮಹಿಳೆಯರ ಮನವೊಲಿಸಿ ಅವರ ಮೈಮೇಲಿರುವ ಬಂಗಾರದ ಆಭರಣಗಳನ್ನು ಕಳ್ಳರು ಪಡೆದು ಪರಾರಿಯಾಗಿದ್ದಾರೆ.
ಈ ಖತರ್‌ನಾಕ ಕಳ್ಳರು ಇರಾನಿ ಗ್ಯಾಂಗ್ ಎಂದು ತನಿಖೆಯಲ್ಲಿ ಕಂಡು ಬಂದಿದ್ದು, ಇರಾನಿ ಗ್ಯಾಂಗ್ ಹೆಡೆಮೂರಿ ಕಟ್ಟಲು ಗೋಕಾಕ ಸಪಿಐ ಗೋಪಾಲ ರಾಠೋಡ ನೇತ್ರತ್ವದಲ್ಲಿ ಸ್ಥಳೀಯ ಶಹರ ಠಾಣೆ ಪಿಎಸ್‌ಐ ಎಮ್ ಡಿ ಘೋರಿ ಸೇರಿ ಅಪರಾಧ ವಿಭಾಗದ ಪೋಲಿಸ್ ಸಿಬ್ಬಂಧಿ ಸಜ್ಜಾಗಿದ್ದು ಕಳ್ಳರ ಮೂಲ ಹುಡುಕಿ ಬೆನ್ನತ್ತಿದ್ದು. ಕಳ್ಳರು ಒಂದೇ ಜಾಗದಲ್ಲಿ ನೆಲೆನಿಲ್ಲದೆ ಸ್ಥಾನ ಪಲ್ಲಟ ಮಾಡುತ್ತಿರುವದು ಬೆಳಕಿಗೆ ಬಂದಿದೆ.
ಈಗಾಗಲೇ ವಿಜಯಪುರದಲ್ಲೂ ಈ ಇರಾನಿ ಗ್ಯಾಂಗ್ ತಮ್ಮ ಕೈಚಳಕ ತೋರಿಸಿದ್ದು, ಜಿಲ್ಲೆಯ ಸಂಕೇಶ್ವರ ಮತ್ತು ಗೋಕಾಕನಲ್ಲೂ ಕಳ್ಳತನ ಮಾಡಿದ್ದಾರೆ. ಸದ್ಯ ಕಳ್ಳರ ಲೋಕೇಷನ್ ಟ್ರೇಸ್ ಮಾಡುತ್ತಿರುವ ಪೋಲಿಸ್ ಇಲಾಖೆ ಅತಿಶೀಘ್ರದಲ್ಲೆ ಖರ‍್ನಾಕ ಇರಾನಿ ಗ್ಯಾಂಗ್ ಅಂದರ್ ಮಾಡುವದಾಗಿ ಮೂಲಗಳು ತಿಳಿಸಿವೆ.
ಲಾಕ್‌ಡೌನ್ ಸಂದರ್ಭದಲ್ಲೂ ಇರಾನಿ ಗ್ಯಾಂಗ್ ಕೈಚಳಕ: ಈ ಮೊದಲು ಮಾರಕಾಸ್ತçಗಳ ಹೊಂದಿರುವ ಕಳ್ಳರ ಇರಾನಿ ಗ್ಯಾಂಗ್ ಕೋವಿಡ್ ಲಾಕ್‌ಡೌನ್ ತೆರವಾದ ನಂತರ ಮಧ್ಯರಾತ್ರಿ ಗೋಕಾಕ ನಗರದಲ್ಲಿ ಮನೆಗಳ ಕಳ್ಳತನದಲ್ಲಿ ತೊಡಗಿದ್ದರು. ಆಗ ಇದೇ ಸಿಪಿಐ ಗೋಪಾಲ ರಾಠೋಡ ಅವರು ಮಾರಕಾಸ್ತçಗಳ ಹೊಂದಿರುವ ಗ್ಯಾಂಗ್ ಚಲನವಲನ ಗಮನಿಸಿ ದಿನದ ೨೪ ಗಂಟೆ ತಮ್ಮ ಸಿಬ್ಬಂಧಿಯೊAದಿಗೆ ಕಾರ್ಯನಿರ್ವಹಿಸಿದ್ದರು. ನಂತರದಲ್ಲಿ ಈ ಇರಾನಿ ಗ್ಯಾಂಗ್ ಕಣ್ಮರೆಯಾಗಿತ್ತು. ಸದ್ಯ ಇರಾನಿ ಗ್ಯಾಂಗ್ ಪೋಲಿಸರ ಸೋಗಿನಲ್ಲಿ ಕಳ್ಳನ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೊದಲು ಇವರ ಬಗ್ಗೆ ಜಾಗೃತಿ ಇರಲಿ: ಹೇರ್ ಪೀನ್, ಟಾಚನಿ, ಬಾಚಣಿಗೆ ಸೇರಿದಂತೆ ವಿವಿಧ ವಸ್ತುಗಳನ್ನು ಮನೆ ಮನೆಗೆ ಮಾರಟಕ್ಕೆ ಬರುವ ಹೊರ ಊರಿನ (ಮನಗಾರ) ಮಾರಾಟಗಾರರು ಮತ್ತು ಮಕ್ಕಳಿಗೆ ಒಂಟೆ ಸವಾರಿ ಮಾಡಿಸಲು ಬರುವವರು ನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ, ಮನೆಗಳ ಮಾಹಿತಿ, ಮನೆಯಲ್ಲಿ ವಾಸಿಸುವವರ ಕುಟುಂಬದ ಮಾಹಿತಿಯನ್ನು ಈ ಕಳ್ಳತನ ಮಾಡುವ ಇರಾನಿ ಗ್ಯಾಂಗಗೆ ರವಾನೆಯಾಗುತ್ತಿರುವದಾಗಿ ಮಾಹಿತಿ ಲಭ್ಯವಾಗಿದೆ.


ನಗರ ಜನತೆ ಅಪರಿಚಿತರ ಬಗ್ಗೆ ಜಾಗೃತೆ ವಹಿಸಿ, ಇಲಾಖೆಗೆ ಮಾಹಿತಿ ನೀಡಬೇಕು. ಈಗಾಗಲೇ ಕಳ್ಳರ ಬಂಧನಕ್ಕೆ ಪೋಲಿಸ ಇಲಾಖೆಗೆ ಸೂಚನೆ ನೀಡಲಾಗಿದೆ. ನಗರದ ಜನತೆ ಭಯ ಪಡುವ ಅವಶ್ಯಕತೆ ಇಲ್ಲ. ಜಾಗೃತೆ ವಹಸಿ, ಯಾರಾದರೂ ಪೋಲಿಸರು ಹೇಸರು ಹೇಳಿದ್ದಲ್ಲಿ ನೇರವಾಗಿ 112ಗೆ ಕರೆ ಮಾಡಿ ಪೋಲಿಸರಿಗೆ ಮಾಹಿತಿ ನೀಡಬೇಕು.
ರಮೇಶ ಜಾರಕಿಹೊಳಿ, ಶಾಸಕರು ಗೋಕಾಕ.

 


ನಗರ ಜನತೆ ಭಯ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ ಈ ಸರಗಳ್ಳತನ ಮಾಡುವ ಗ್ಯಾಂಗನ್ನು ಬಂಧಿಸಲು ತಂಡ ರಚನೆ ಮಾಡಲಾಗಿದೆ. ಈ ತಂಡ ಕಾರ್ಯಾಚರಣೆಯಲ್ಲಿದ್ದು, ಅತಿ ಶೀಘ್ರದಲ್ಲೆ ಕಳ್ಳರ ಬಂಧನ ಮಾಡಲಾಗುವದು. ಅಪರಿಚಿತರು ತಮ್ಮ ಮನೆಗಳ ಸುತ್ತ ಸುಳಿದಾಡಿದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಿ.
ಗೋಪಾಲ ರಾಠೋಡ, ಸಿಪಿಐ ಗೋಕಾಕ.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

9 + ten =