Breaking News

ಗೋಕಾಕನಲ್ಲಿ 24ನೇ ವರ್ಷದ ಓಂ ವಿರಾಟ ವಿಶ್ವಕರ್ಮ ಉತ್ಸವ!

Spread the love

ಗೋಕಾಕನಲ್ಲಿ 24ನೇ ವರ್ಷದ ಓಂ ವಿರಾಟ ವಿಶ್ವಕರ್ಮ ಉತ್ಸವ!

ಯುವ ಭಾರತ ಸುದ್ದಿ ಗೋಕಾಕ: ವಿಶ್ವಕರ್ಮ ಸಮಾಜದ ಕಲ್ಯಾಣ ಸಂಸ್ಥೆ ಗೋಕಾಕ ವತಿಯಿಂದ 24ನೇ ವರ್ಷದ ಓಂ ವಿರಾಟ ವಿಶ್ವಕರ್ಮ ಉತ್ಸವ ಕಾರ್ಯಕ್ರಮವನ್ನು ದಿ.೦೩ ರಂದು ಲೋಳಸೂರ ಗ್ರಾಮದ ಸತ್ತೆವ್ವಳ ತೋಟದಲ್ಲಿ ಹಮ್ಮಿಕೊಳ್ಳಲಾಗಿದೆ.


ದಿ.3 ರಂದು ಬೆಳಿಗ್ಗೆ 8 ಗಂಟೆಗೆ ಅಧ್ಯಕ್ಷರುಗಳಾದ ಮಧುಕರ ಲೋಹಾರ ಮತ್ತು ಮಹೇಶ ಬಡಿಗೇರ ಅವರಿಂದ ಧ್ವಜಾರೋಹಣ ಹಾಗೂ ನವದಂಪತಿಗಳಿAದ ಸಾಮೂಹಿಕ ಪೂಜಾ ಸೇವೆ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಮಹಾಪ್ರಸಾದ, ಮಧ್ಯಾಹ್ನ 3ಗಂಟೆಗೆ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಕುರಿತು ಸಭೆ, ಶ್ರೀಮತಿ ಸುಲೋಚನಾ ಕಮ್ಮಾರ ಅವರಿಂದ 24 ವರ್ಷ ಪೂರೈಸಿದ ಸಮಾಜದ ಹಿರಿಯರಿಗೆ ಗೌರವ ಸನ್ಮಾನ ಜರುಗಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ವಿಶೇಷ ಆಹ್ವಾನಿತರಾಗಿ ಶಾಸಕ ರಮೇಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯರುಗಳಾದ ಲಖನ್ ಜಾರಕಿಹೊಳಿ, ಕೆ ಪಿ ನಂಜುAಡಿ, ಲಕ್ಷಿö್ಮÃ ಎಜ್ಯುಕೇಷನ್ ಟ್ರಸ್ಟ ಚೇರಮನ ಭೀಮಶಿ ಜಾರಕಿಹೊಳಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಮುಖ್ಯತಿಥಿಗಳಾಗಿ ಉಕ ವಿಶ್ವಕರ್ಮ ಸೇವಾ ಸಂಘ ಅಧ್ಯಕ್ಷ ಉಮೇಶ ಪತ್ತಾರ, ವಿಶ್ವಕರ್ಮ ಸಮಾಜ ಮುಖಂಡರಾದ ಮಾಣಿಕ ಕಮ್ಮಾರ, ಗೋಪಿನಾಥ ಬಡಿಗೇರ ಆಗಮಿಸಲಿದ್ದಾರೆ.


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

sixteen + 4 =