Breaking News

ಸಾಹಿತ್ಯ ಸಮ್ಮೇಳನ ಮೆರವಣಿಗೆಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ.!

Spread the love


ಗೋಕಾಕ: ಕರದಂಟಿನ ನಾಡಲ್ಲಿ ಕನ್ನಡ ಕಂಪು ಹರಡಿದೆ. ನಗರದಲ್ಲಿ ಎಲ್ಲಿ ನೋಡಿದಲ್ಲಿ ಕನ್ನಡ ಬಾವುಟಗಳ ಹಾರಾಟದ ಜೊತೆಗೆ ಕನ್ನಡಾಭಿಮಾನಿಗಳ ಹರ್ಷ, ಉತ್ಸಾಹ ಮನ ಮುಟ್ಟಿತ್ತು.
ಎಲ್ಲೆಡೆ ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತ ಕೋರುವ ಕಟೌಟಗಳು ಮುಖ್ಯ ರಸ್ತೆಗಳಲ್ಲಿ ರಾರಾಜಿಸುತ್ತಿದ್ದವು. ಎಲ್ಲಲ್ಲೂ ಕನ್ನಡಮಯ ವಾತಾವರಣ ಸೃಷ್ಠಿಯಾಗಿತ್ತು. ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ತು ಗೋಕಾಕ ವತಿಯಿಂದ ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರ ಧ್ವಜಾರೋಹಣವನ್ನು ವಿಠ್ಠಲ ಹಟ್ಟಿ ನೇರವೇರಿಸಿದರು.
ನಾಡ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ನೇರವೇರಿಸಿದರು.
ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ಪರಿಷತ್ತ ಧ್ವಜಾರೋಹಣ ನೇರವೇರಿಸಿದರು.
ನಂತರ ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿದರು. ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಗೊoಡ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಸಿ.ಕೆ.ನಾವಲಗಿ ದಂಪತಿಗಳನ್ನು ಸಾರೂಟದಲ್ಲಿ ರಂಗಕರ್ಮಿ ಶ್ರೀ ಬಸವಣ್ಣೆಪ್ಪ ಹೊಸಮನಿ ಸಭಾ ಮಂಟಪದವರೆಗೆ ಕರೆ ತರಲಾಯಿತು.


ಅಶ್ವದ ಮೇಲೆ ಕುಳಿತ ಕನ್ನಡಾಭಿಮಾನಿಯ ಗಮನ ಸೆಳೆಯಿತಲ್ಲದೇ ದಟ್ಟಿ ಕುಣಿತ, ಕರಡಿ ಮಜಲು ಹಾಗೂ ಸಂಗೋಳ್ಳಿ ರಾಯಣ್ಣ, ಕಿತ್ತೂರ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ಕನ್ನಡ ನಾಡಿನ ದಿಗ್ಗಜ್ಜರ ಮಹಾನ್ ವ್ಯಕ್ತಿಗಳ ವೇಷಭೂಷಣ ಗಮನ ಸೆಳೆಯಿತು. ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ತಾಲೂಕಾಧಿಕಾರಿಗಳು ಭಾಗವಹಿಸಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

20 − 16 =