Breaking News

ಕನ್ನಡ ನಾಡು ಅತ್ಯಂತ ವಿಶಾಲವಾದುದು- ಸರ್ವಾಧ್ಯಕ್ಷ ಡಾ. ಸಿ ಕೆ ನಾವಲಗಿ.!

Spread the love


ಗೋಕಾಕ: ಕನ್ನಡ ನಾಡು ಅತ್ಯಂತ ವಿಶಾಲವಾದುದು. ಅದು ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿ ನಿಂತಿದೆ ಎಂದು ಗೋಕಾಕ ತಾಲೂಕಾ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿ.ಕೆ.ನಾವಲಗಿ ಹೇಳಿದರು.
ಅವರು, ಶನಿವಾರದಂದು ಇಲ್ಲಿಯ ನ್ಯೂ ಇಂಗ್ಲೀಷ ಸ್ಕೂಲ ಆವರಣದಲ್ಲಿ ಜರುಗಿದ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭದ ಸರ್ವಾಧ್ಯಕ್ಷ ವಹಿಸಿ ಅವರು ಮಾತನಾಡಿದರು
ಮುಂಬೈ, ಪುಣೆ, ನಾಸಿಕ್ ಸೇರಿದಂತೆ ಮಹಾರಾಷ್ಟ್ರದ ಶೇಕಡಾ ೪೦% ಪ್ರತಿಷತ ಪ್ರದೇಶಗಳು ಕರ್ನಾಟಕ್ಕೆ ಸೇರುಬೇಕು. ಪ್ರಾಥಮಿಕ ಶಾಲೆಯಿಂದ ವಿಶ್ವ ವಿದ್ಯಾಲಯದವರೆಗೆ ಪಠ್ಯದಲ್ಲಿ ಕನ್ನಡ ಭಾಷೆಗೆ ಪ್ರಾತಿನಿತ್ಯ ನೀಡಬೇಕು. ಕನ್ನಡ ರಾಜ್ಯೋತ್ಸವ ಆಚರಣೆ, ಅಭಿವೃದ್ಧಿ ಪ್ರಾಧಿಕಾರ ಇದ್ದು ನೀರಿಕ್ಷಿದಷ್ಟು ಕನ್ನಡ ಭಾಷೆ ಅಭಿವೃದ್ಧಿ ಆಗುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಇವುಗಳು ಇಲ್ಲದಿದ್ದರೂ ಅಲ್ಲಿ ಅವರ ಮಾತೃಭಾಷೆ ಪ್ರಾಧಾನ್ಯತೆ ಪಡೆದಿದೆ. ಸಂವಿಧಾನದಲ್ಲಿ ಮಾತೃ ಭಾಷೆಯಲ್ಲಿಯೇ ಆಡಳಿತ ವಿರಬೇಕು ಎಂದರು ಇಂದು ಪೂರ್ವ ಪ್ರಮಾಣದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿಲ್ಲದಿರುವುದು ವಿಷಾಧನೀಯ. ರಾಜ್ಯೋತ್ಸವ ನಿತ್ಯೋತ್ಸವವಾಗಿ ಪರಿಪೂರ್ವ ಕರ್ನಾಟಕವಾಗಬೇಕು. ಕನ್ನಡಿಗರಿಗೆ ಉದ್ಯೋಗ ಮೀಸಲಿಡಬೇಕು. ಪ್ರಾಧಿಕಾರಗಳು ಗಡಿಭಾಗದ ಅಭಿವೃದ್ಧಿಗೆ ಮಹತ್ವ ನೀಡಿ ಕೆಲಸಮಾಡಬೇಕು
ಬೆಂಗಳೂರಿಗಿAತ ಬೆಳಗಾವಿ ಕನ್ನಡ ಶಕ್ತಿ ಕೇಂದ್ರವಾಗಿದ್ದು, ಗೋಕಾವಿ ನಾಡು ಕೂಡಾ ಅಪ್ಪಟ್ಟ ಜಾನಪದ ಪರಿಸರ ಕೇಂದ್ರವಾಗಿ ನಾಡಿಗೆ ಕಲೆ, ಸಾಹಿತ್ಯ ಸೇರಿದಂತೆ ಮಹತ್ವದ ಕೋಡುಗೆಯನ್ನು ನೀಡುತ್ತಿದ್ದೆ. ಕುಲಗೋಡ ತಮ್ಮಣ್ಣ, ಕೌಜಲಗಿ ನಿಂಗವ್ವ, ಚಂದ್ರಶೇಖರ್ ಕಂಬಾರ ಅವರು ಜಾನಪದ ಕ್ಷೇತ್ರಕ್ಕೆ ಮರೆಯಲಾಗದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಗೋಕಾಕ ನಾಡಿನ ಕನ್ನಡದ ಇತಿಹಾಸವನ್ನು ಮೆಲಕು ಹಾಕಿದರು.


ವೇದಿಕೆಯ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ವಿಧಾನ ಪರಿಷತ್ ಮುಖ್ಯ ಸಚ್ಚೇತಕ ಮಹಾಂತೇಶ ಕವಟಗಿಮಠ, ನಿಕಟಪೂರ್ವ ಅಧ್ಯಕ್ಷ ಮಹಾಲಿಂಗ ಮಂಗಿ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಪ್ರೊ. ಚಂದ್ರಶೇಖರ ಅಕ್ಕಿ, ಸಿದ್ದಲಿಂಗಪ್ಪ ದಳವಾಯಿ, ಜಯಾನಂದ ಮುನವಳ್ಳಿ, ಡಿಡಿಪಿಐ ಗಜಾನನ ಮನ್ನಿಕೇರಿ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ.ಬಳಗಾರ, ಸರೋಜನಿ ಪಂಚಗಾAವಿ, ಪ್ರೊ. ಗಂಗಾಧರ ಮಳಗಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಡಿವೈಎಸ್‌ಪಿ ಜಾವೇದ ಇನಾಮದಾರ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ಸೇರಿದಂತೆ ಹಿರಿಯ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಇತರರು ಇದ್ದರು.
ರಾಮಪ್ಪ ಮಿರ್ಜಿ ಸ್ವಾಗತಿಸಿದರು. ಶೈಲಾ ಕೊಕ್ಕರಿ ನಿರೂಪಿಸಿದರು. ಬಸವರಾಜ ಹಣಮಂತಗೋಳ ವಂದಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

7 − one =