ಗೋಕಾಕ: ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರ‍್ಯವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು.
ಶನಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ನಗರಸಭೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರದಲ್ಲಿ ನಡೆದ ೭೪ನೇ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರದಲ್ಲಿ ಧ್ವಜಾರೋಹಣ ನೇರವೇರಿಸಿ, ಪೊಲೀಸ, ಎನ್.ಸಿ.ಸಿ ಹಾಗೂ ಸ್ಕೌಟ್ ಗೈಡ್ಸ ಅವರಿಂದ ವಂಧನೆ ಸ್ವೀಕರಿಸಿ ಅವರು ಮಾತನಾಡಿದರು.
ಸ್ವಾತಂತ್ರ‍್ಯ ಹೋರಾಟಗಾರರಾದ ಮಹಾತ್ಮಾ ಗಾಂಧೀಜಿ, ಸುಭಾಷಚಂದ್ರ ಬೋಸ್, ಸರ್ದಾರ ವಲ್ಲಭಾಯಿ ಪಟೇಲ, ಲಾಲಬಹದ್ದೂರ ಶಾಸ್ತ್ರಿ, ಡಾ.ಬಾಬಾಸಾಹೇಬ ಅಂಬೇಡ್ಕರ್, ಬಾಲಗಂಗಾಧರ ತಿಲಕ್, ಸೇರಿದಂತೆ ಇನ್ನೂ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ದೇಶ ಸ್ವತಂತ್ರಗೊAಡು ೭೩ ವರ್ಷಗಳು ಗತಿಸಿವೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರವು ಮಹತ್ವವಾಗಿದೆ. ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳು, ದೇಶಕ್ಕೆ ಕೊಡುಗೆ ನೀಡಿರುವ ಬೆಳಗಾವಿ ಜಿಲ್ಲೆ ಸ್ವಾತಂತ್ರ‍್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು ಎಂದು ನೆನೆದ ತಹಶೀಲ್ದಾರ ಅವರು ಕಿತ್ತೂರ ರಾಣಿ ಚೆನ್ನಮ್ಮ ಮೊಳಗಿಸಿದ ಸ್ವಾತಂತ್ರ‍್ಯದ ಕಹಳೆಯನ್ನು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತ್ತು. ಸ್ವಾತಂತ್ರ‍್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪನಿಗೆ ದುಸ್ವಪ್ನವಾಗಿ ಕಾಡಿದ ವೀರ ವನಿತೆ ಕಿತ್ತೂರ ಚೆನ್ನಮ್ಮ ಎಂದು ಹೇಳಿದ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಅವರು ಇವತ್ತಿನ ಕೋವಿಡ್ ತುರ್ತು ಸಂದರ್ಭದಲ್ಲಿ ಎಲ್ಲರೂ ಕೂಡಿ ಮತ್ತೊಂದು ಅವಿರತ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರಗಳನ್ನು ಆರಂಭಿಸಲಾಗಿದ್ದು, ಆಕ್ಸಿಜನ್ ಸೌಲಭ್ಯವುಳ್ಳ ೫೦ ಹಾಸಿಗೆಗಳ ಸಹಿತವಾಗಿ ೩೬೦ ಹಾಸಿಗೆಗಳು ಲಭ್ಯ ಇವೆ. ಈ ಕೇಂದ್ರದಲ್ಲಿ ಸರಕಾರದ ಮಾರ್ಗಸೂಚಿಯಂತೆ ಸೋಂಕಿತರಿಗೆ ಉಟೋಪಚಾರ ಒದಗಿಸುವುದರ ಜೊತೆಗೆ ವೈದ್ಯಕೀಯ ಆರೈಕೆ ಮಾಡಲಾಗುತ್ತಿದೆ.
ತಾಲೂಕಾಡಳಿತದ ನೇತೃತ್ವದಲ್ಲಿ ವೈದ್ಯರು, ಶುಶ್ರೂಷಕಿಯರು, ಪೊಲೀಸ ಅಧಿಕಾರಿಗಳು, ಸಿಬ್ಬಂದಿಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತರು , ಎಲ್ಲ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಇತರ ಇಲಾಖೆಯ ಎಲ್ಲ ಅಧಿಕಾರ ವರ್ಗದವರು ಮತ್ತು ಸಾಮಾಜಿಕ ಸಂಘಟನೆಗಳು ಕೊವಿಡ ಯೋಧರಾಗಿ ನಿರ್ವಹಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ.
ಶಾಸಕ ಬಾಲಚಂದ್ರ ಕಾರ್ಯ ಮಾದರಿಯ: ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ವಿಶೇಷ ಕಾಳಜಿ ವಹಿಸಿ ಕಾರ್ಯನಿರ್ವಹಿಸುತ್ತಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿಯೊಬ್ಬ ಸೋಂಕಿತ ವ್ಯಕ್ತಿ ಆರೈಕೆಯಾಗಿ ಬರುವಾಗ ಅವರಿಗೆ ಬೇಡ್ ಸಿಟ್, ಹೊದಿಕೆ, ಮಾಸ್ಕ, ಹ್ಯಾಡಗ್ಲೋಜಗಳ ಜೊತೆಗೆ ಸುಮಾರು ೨೦ ಕ್ಕಿಂತ ಹೆಚ್ಚು ವಸ್ತುಗಳನ್ನು ಹೊಂದಿರುವ ಕಿಟ್ ಗಳನ್ನು ನಿರಂತರವಾಗಿ ಹಂಚಿಕೆ ಮಾಡುತ್ತಿದ್ದಾರೆ. ಮಲ್ಲಾಪೂರ ಪಿ.ಜಿ ಯಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ ಸೆಂಟರದಲ್ಲಿ ೨೦ ಹಾಸಿಗೆ ಉಳ್ಳ ಕೇಂದ್ರೀಕೃತ ಆಮ್ಲಜನಕ ಘಟಕವನ್ನು ಒದಗಿಸಿ ಕೊಟ್ಟಿರುವುದು ಅತ್ಯಂತ ಅಭಿನಂದಾರ್ಹ ಕಾರ್ಯವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಐದು ಜನ ವಿದ್ಯಾರ್ಥಿಗಳಿಗೆ, ಕೋವಿಡ್ ತುರ್ತು ಸಂದರ್ಭದಲ್ಲಿ ಗಣನೀಯ ಸೇವೆಗೈಯುತ್ತಿರುವ ಅಧಿಕಾರಿಗಳಿಗೆ, ನಗರಸಭೆ ಸಿಬ್ಬಂದಿಗಳಿಗೆ, ವೈದ್ಯರಿಗೆ, ಪೊಲೀಸ ಸಿಬ್ಬಂದಿಗಳಿಗೆ, ಅಂಬುಲೆನ್ಸ ಚಾಲಕರಿಗೆ, ಸಾವನ್ನಪ್ಪಿದ ಕೊರೋನಾ ಸೋಂಕಿತರ ಶವ ಸಂಸ್ಕಾರ ಮಾಡಿದ ಕಾರ್ಯಕರ್ತರಿಗೆ ತಾಲೂಕಾಡಳಿತದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಶ್ರೀಮತಿ ಸುನಂದಾ ಕರದೇಸಾಯಿ, ತಾಪಂ ಉಪಾಧ್ಯಕ್ಷ ಯಲಪ್ಪ ಬಿ ನಾಯಿಕ, ತಾ.ಪಂ ಇಒ ಬಸವರಾಜ ಹೆಗ್ಗನಾಯಿಕ, ಸಿಪಿಐ ಗೋಪಾಲ ರಾಠೋಡ,ಪೌರಾಯುಕ್ತ ಶಿವಾನಂದ ಹಿರೇಮಠ, ಬಿಇಒ ಜಿ.ಬಿ.ಬಳಗಾರ, ಡಾ.ಜಗದೀಶ ಜಿಂಗಿ, ಡಾ.ಮಹೇಶ ಕೋಣಿ, ಕೆ.ಎನ.ವಣ್ಣೂರ, ಮಲಬ್ಬನ್ನವರ, ಮುಖಂಡರುಗಳಾದ ಕಳ್ಳಿಗುದ್ದಿ, ಸೋಮಶೇಖರ್ ಮಗದುಮ ಸೇರಿದಂತೆ ಅನೇಕರು ಇದ್ದರು.