ದಿ.14 ರಂದು ಉಪ್ಪಾರ ಸಮಾಜ ಸಭೆ-ಮುಖಂಡ ಕುಶಾಲ ಗುಡೇನ್ನವರ.!

ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ತಾಲೂಕಿನ ಉಪ್ಪಾರ ಸಮಾಜದ ಸಭೆಯನ್ನು ಇದೆ ದಿ.14 ರಂದು ನಡೆಯಲಿದೆ ಎಂದು ಉಪ್ಪಾರ ಸಮಾಜದ ಮುಖಂಡ ಹಾಗೂ ನ್ಯಾಯವಾದಿ ಕುಶಾಲ ಗುಡೇನ್ನವರ ತಿಳಿಸಿದ್ದಾರೆ.
ರವಿವಾರದಂದು ಬೆಳಿಗ್ಗೆ 11ಗಂಟೆಗೆ ನಗರದ ಉಪ್ಪಾರ ಗಲ್ಲಿಯ ಶ್ರೀ ಭಗೀರಥ ಸಭಾ ಭವನದಲ್ಲಿ ಜರುಗಲಿದ್ದು. ತಾಲೂಕಿನ ಉಪ್ಪಾರ ಸಮಾಜದ ಸಂಘಟನಾತ್ಮಕ ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗುವದು. ಮತ್ತು ದಿ.ರಾಮಣ್ಣ ತೋಳಿ ಅವರ ನಿಧನದಿಂದ ತೆರವಾದ ತಾಲೂಕ ಉಪ್ಪಾರ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ನಾಯಕರನ್ನು ಆಯ್ಕೆ ಮಾಡಲು ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯಿಸಲಾಗುವದು. ಹೀಗಾಗಿ ಸಮಾಜದ ಮುಖಂಡರು ಮತ್ತು ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
YuvaBharataha Latest Kannada News