Breaking News

ದಿ.ಉಮೇಶ ಕತ್ತಿ ಮಾಡಿರುವ ಕೆಲಸ ಜನಮಾನಸದಲ್ಲಿ ಇರಲಿದೆ-ಗಿರೀಶ ಉಪ್ಪಾರ.!

Spread the love

ದಿ.ಉಮೇಶ ಕತ್ತಿ ಮಾಡಿರುವ ಕೆಲಸ ಜನಮಾನಸದಲ್ಲಿ ಇರಲಿದೆ-ಗಿರೀಶ ಉಪ್ಪಾರ.!


ಗೋಕಾಕ: ಆಹಾರ ಮತ್ತು ಅರಣ್ಯ ಸಚಿವ ಉಮೇಶ ಕತ್ತಿಯವರು ನಮ್ಮನ್ನಗಲಿದ್ದರು ಅವರು ಮಾಡಿರುವ ಕೆಲಸ, ಕೈಗಂಡ ಅಭಿವೃದ್ಧಿ ಕಾಮಗಾರಿಗಳ ಮೂಲಕ ಜನಮಾನಸದಲ್ಲಿ ಸದಾಕಾಲ ಇರಲಿದ್ದಾರೆ ಎಂದು ಉಪ್ಪಾರ ಸಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ ಉಪ್ಪಾರ ಹೇಳಿದರು.
ಅವರು, ನಗರದಲ್ಲಿ ಭಗೀರಥ ಉಪ್ಪಾರ ಸಮಾಜದಿಂದ ಹಮ್ಮಿಕೊಂಡ ಶ್ರದ್ಧಾಂಜಲಿ ಸಭೆಯಲ್ಲಿ, ದಿ.ಉಮೇಶ ಕತ್ತಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಪಕ್ಷಾತೀತವಾಗಿ ರೈತರ ಸಮಸ್ಯೆಗಳಿಗೆ ಧ್ವನಿ ಎತ್ತಿತ್ತಿದ್ದ ಉಮೇಶ ಕತ್ತಿಯವರು ರಾಜ್ಯ ಹಾಗೂ ಬೆಳಗಾವಿ ಜಿಲ್ಲೆಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಭಗೀರಥ ಉಪ್ಪಾರ ಸಮಾಜ ತಾಲೂಕ ಅಧ್ಯಕ್ಷ ಶಿವಪುತ್ರ ಜಕಬಾಳ ಮಾತನಾಡಿ, ಉಮೇಶ ಕತ್ತಿಯವರು ಉಪ್ಪಾರ ಸಮಾಜದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸಮಾಜ ಬಾಂಧವರ ಸಮಸ್ಯೆಗಳಿಗೆ ಸ್ಫಂಧಿಸುತ್ತ ಬಂದಿದ್ದರು, ಅವರ ಹುಟ್ಟೂರು ಬೆಲ್ಲದಬಾಗೇವಾಡಿಯ ಪಕ್ಕದಲ್ಲಿರುವ ಜಾಗನೂರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಉಪ್ಪಾರ ಸಮಾಜ ಭಾಂದವರೊAದಿಗೆ ಕತ್ತಿ ಕುಟುಂಬ ಒಳ್ಳೆಯ ನಂಟು ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಭಗೀರಥ ಉಪ್ಪಾರ ಸಮಾಜ ಉಪಾಧ್ಯಕ್ಷ ಕುಶಾಲ ಗುಡೇನ್ನವರ, ಕಾರ್ಯದರ್ಶಿಗಳಾದ ವಿಠ್ಠಲ ಮೆಳವಂಕಿ, ಯಲ್ಲಪ್ಪ ದುರದುಂಡಿ, ಲಕ್ಷö್ಮಣ ತಳ್ಳಿ, ನ್ಯಾಯವಾದಿಗಳಾದ ಎಸ್ ಎಮ್ ಹತ್ತಿಕಟಗಿ, ಕುಳ್ಳೂರ, ಭಟ್ಟಿ, ಸದಾಶಿವ ಗುದಗಗೋಳ, ಶಂಭುಲಿAಗ ಮೂಕನ್ನವರ, ಲಕ್ಷö್ಮಣ ಮಂಗಿ, ಅಡಿವೆಪ್ಪ ಬಿಲಕುಂದಿ, ಯಲ್ಲಪ್ಪ ಹೆಜ್ಜೆಗಾರ, ಪ್ರದೀಪ ನಾಗನೂರ, ಬಸವರಾಜ ಭರಮನ್ನವರ, ಮಂಜುನಾಥ ಜಲ್ಲಿ, ಲಕ್ಷಿö್ಮÃ ಪಾಟೀಲ ಸೇರಿದಂತೆ ಉಪ್ಪಾರ ಸಮಾಜ ಭಾಂದವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

13 + 11 =