ಶ್ರೀ ಭಗೀರಥರ ಕಂಚಿನ ಮೂರ್ತಿ ಸ್ಥಾಪನೆಗೆ ಅಡಿಗಲ್ಲು ನೆವೇರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!
ಗೋಕಾಕ: ಈ ಭಾಗದ ಜನರ ಬೇಡಿಕೆಗಳಿಗೆ ಸ್ಫಂಧಿಸಿ ಅವುಗಳನ್ನು ಕಾರ್ಯಗತಗೊಳಿಸುವದರ ಮೂಲಕ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಟಿ ಆರ್ ಕಾಗಲ ಹೇಳಿದರು.
ಅವರು, ತಾಲೂಕಿನ ಭಗೀರಥ ವೃತ್ತದಲ್ಲಿ ರಾಜಋಷಿ ಶ್ರೀ ಭಗೀರಥರವರ ಕಂಚಿನ ಮೂರ್ತಿಯನ್ನು ಸ್ಥಾಪಿಸುವ ಅಡಿಗಲ್ಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ ಅಭಿವೃದ್ಧಿ ಕಾರ್ಯಗಳಿಗೆ ನಾವೆಲ್ಲ ಸಂಘಟಿತರಾಗಿ ಶಾಸಕರೊಂದಿಗೆ ಕೈ ಜೋಡಿಸೋಣ ಎಂದರು.
ತಾಲೂಕ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ ಮಾತನಾಡಿ, ಕರದಂಟು ನಾಡು ಗೋಕಾಕಿನ ಹೆಬ್ಬಾಗಿಲಾದ ಈ ಭಗೀರಥ ವೃತ್ತದಲ್ಲಿ ಭವ್ಯವಾದ ರಾಜಋಷಿ ಶ್ರೀ ಭಗೀರಥರ ಮೂರ್ತಿಯನ್ನು ಸ್ಥಾಪಿಸಿ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಅವರ ಕೀರ್ತಿಯನ್ನು ಹೆಚ್ಚಿಸಿ ಗೋಕಾವಿ ನಾಡಿನ ಭವ್ಯತೆಯನ್ನು ಹೆಚ್ಚಿಸೋಣ ಎಂದರು.
ಈ ಭಾಗದ ಜನರ ಬಹುದಿನ ಬೇಡಿಕೆಯಾಗಿದ್ದ ಈ ಮೂರ್ತಿ ಸ್ಥಾಪನೆ ಇಂದು ಕಾರ್ಯಗತವಾಗುತ್ತಿರುವದು ಎಲ್ಲರಿಗೂ ಸಂತಸ ತಂದಿದೆ. ಈ ಕಾರ್ಯಕ್ಕೆ ಎಲ್ಲರೂ ತನು, ಮನ, ಧನದಿಂದ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ರಾಜಋಷಿ ಶ್ರೀ ಭಗೀರಥರ ಮೂರ್ತಿ ಸ್ಥಾಪನೆಯ ಅಡಿಗಲ್ಲು ಸಮಾರಂಭಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪ್ಪಾರಹಟ್ಟಿಯ ಶ್ರೀ ನಾಗಲಿಂಗ ಮಹಾಸ್ವಾಮಿಜಿಗಳು, ಜಿಪಂ ಮಾಜಿ ಸದಸ್ಯ ಮಡ್ಡೆಪ್ಪ ತೋಳಿನವರ, ಮಾಲದಿನ್ನಿ ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಭರಮನ್ನವರ, ಉಪಾಧ್ಯಕ್ಷೆ ಸೀತವ್ವ ಮೆಳವಂಕಿ, ಮುಖಂಡರುಗಳಾದ ಮುಖಂಡರುಗಳಾದ ಅಶೋಕ ಗೋಣಿ, ಹನಮಂತ ದುರ್ಗನ್ನವರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಭೀಮಶಿ ಭರಮನ್ನವರ, ಕುಶಾಲ ಗುಡೇನ್ನವರ, ಅಡಿವೆಪ್ಪ ಕಿತ್ತೂರ, ಲಕ್ಷö್ಮಣ ಬೂದಿಗೊಪ್ಪ, ಲಕ್ಕಪ್ಪ ಮಾಳಗಿ, ರಂಗಪ್ಪ ನಂದಿ, ರಮೇಶ ಭಂಡಿ, ಬೀರಪ್ಪ ದುರ್ಗಿಪೂಜೇರಿ, ಲಕ್ಕಪ್ಪ ಹೊಸಕುರಬರ, ಲಕ್ಕಪ್ಪ ನಾಯ್ಕ, ಮಹಾದೇವ ಭಂಡಿ, ಹನಮಂತ ಕಿಚಡಿ, ಲಕ್ಷö್ಮಣ ಭಂಗಿ, ಮುತ್ತೆಪ್ಪ ಬೀರನಗಡ್ಡಿ, ಹನಮಂತಗೌಡ ಪಾಟೀಲ, ಕರೇಪ್ಪ ಬಡಿಗವಾಡ, ಶಿವರಾಯಿ ದಂಡಿನ, ಶಿವಪುತ್ರ ದುರದುಂಡಿ, ಹನಮಂತ ಯಡ್ರಾವಿ, ಲಕ್ಕಪ್ಪ ಭಂಡಿ, ಅನೀಲಕುಮಾರ ಕಂಬಾರ ಸೇರಿದಂತೆ ಅನೇಕರು ಇದ್ದರು.