Breaking News

ಬೆಳಗಾವಿ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ- ಅಧ್ಯಕ್ಷ ಚಂದ್ರಶೇಖರ ಹೊಸಮನಿ!

Spread the love

 ಬೆಳಗಾವಿ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ- ಅಧ್ಯಕ್ಷ ಚಂದ್ರಶೇಖರ ಹೊಸಮನಿ!

 

ಯುವ ಭಾರತ ಸುದ್ದಿ ಇಂಡಿ: ಸಾಮಾಜಿಕ ನ್ಯಾಯಕ್ಕಾಗಿ ಡಿ.೨೧ ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಅಂದು ಬೆಳಗಾವಿ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು,ತಾಲೂಕಿನ ಎಲ್ಲಾ ಮೂಲ ದಲಿತರು ಭಾಗಿಯಾಗಬೇಕು ಎಂದು ಕರ್ನಾಟಕ ಪ್ರದೇಶ ಮಾದಿಗರ ಸಂಘದ ತಾಲೂಕ ಅಧ್ಯಕ್ಷ ಚಂದ್ರಶೇಖರ ಹೊಸಮನಿ ಹೇಳಿದರು.

ಅವರು ಸೋಮವಾರ ಪಟ್ಟಣದ ಡಾ. ಬಾಬು ಜಗಜಿವನ ರಾಮ ಸಮುದಾಯ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿದರು.
ಮೂಲ ದಲಿತರಿಗೆ ಸಿಗಬೇಕಾದ ಸಂವಿಧಾನ ಬದ್ಧ ಹಕ್ಕು ಅವರಿಗೆ ಇನ್ನೂ ಸಿಕ್ಕಿಲ್ಲ. ಅವರು ಈಗಲು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಹಾಗೂ ರಾಜಕೀಯವಾಗಿ ಹಿಂದೆ ಉಳಿದ್ದಾರೆ. ಅದಕ್ಕಾಗಿ ನ್ಯಾ.ಎ.ಜೇ.ಸದಾಶಿವ ವರದಿ ಅನುಷ್ಠಾನಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ.ಸAವಿಧಾನಿಕವಾಗಿ ಅಸ್ಪುçಶ ಜಾತಿಗಳನ್ನು ಸುಮಾರು ೫-೬ ಜಾತಿಗಳಿಗೆ ಮಾತ್ರ ಎಸ್.ಸಿಯಲ್ಲಿ ಅವಕಾಶ ಕಲ್ಪಸಲಾಗಿದೆ. ಆದರೆ ಇಂದು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ, ಮತಗಳ ಆಸೆಯಿಂದ ಸರ್ಶ ಜಾತಿಗಳನ್ನು ಎಸ್ಸಿ ಪಟ್ಟಿಯಲ್ಲಿ ಸೇರಿಸುತ್ತಾ ಬಂದಿದ್ದು, ಇಂದು ಎಸ್ಸಿ ಪಟ್ಟಿಯಲ್ಲಿ ೧೦೧ ಜಾತಿಗಳು ಸೇರ್ಪಡೆಯಾಗಿವೆ. ಬಲಿಷ್ಠರು ಎಲ್ಲಾ ಸೌಲತ್ತು, ಸೌಲಭ್ಯಗಳನ್ನು ಹಾಗೂ ಮಿಸಲಾತಿಯನ್ನು ಹೆಚ್ಚಿಗೆ ಪಡೆಯುತ್ತಿದ್ದಾರೆ. ಬುಟ್ಟಿಯಲ್ಲಿ ಇರುವ ಹಣ್ಣುಗಳನ್ನು ಬಲಿಷ್ಠರು ಮಾತ್ರ ತಿಂದ್ದರೆ ಹೇಗೆ, ಎಲ್ಲರಿಗೂ ಸಿಗಬೇಕು ಅದಕ್ಕಾಗಿ ಒಳಮಿಸಲಾತಿ ಬಗ್ಗೆ ಸರ್ಕಾರಗಳು ವಿಚಾರ ಮಾಡಬೇಕು ಅಂತ ಒಳ ಮಿಸಲಾತಿ ಕಲ್ಪಸಬಹುದು ಎಂದು ಸುಪ್ರಿಂಕೋರ್ಟ ಒಳ ಮಿಸಲಾತಿ ವಿಚಾರವಾಗಿ ಹೇಳಿದೆ. ದಲಿತ ಸಂಘಟನೆಗಳ ಒಕ್ಕೂಟ ಬೆಂಗಳೂರು ಪ್ರಿಡಂ ಪಾರ್ಕನಲ್ಲಿ ಡಿ.೧೧ರಿಂದ ಅನಿರ್ದಿಷ್ಟಾವದಿ ಧರಣ ಸತ್ಯಾಗ್ರಹವು ೮ನೇದಿಕ್ಕೆ ಕಾಲಿಟ್ಟಿದೆ. ಈ ವಿಚಾರವಾಗಿ ಸಂಪುಟದ ಉಪ ಸಮಿತಿಯು ರಚನೆಯಾಗಿದೆ. ಛಲವಾದಿ ಗುರು ಪೀಠಾಽಪತಿ ಬಸವನಾಗಿದೇವ ಸ್ವಾಮೀಜಿಗಳು, ನಟ ಚೇತನ, ನಿವೃತ ಐ.ಎ.ಎಸ್, ಐ.ಪಿ.ಎಸ್., ಎಲ್ಲಾ ದಲಿತ ಸಂಘಟನೆಗಳು, ಎಸ್.ಡಿ.ಪಿ.ಐ ಪಕ್ಷ ಅನೇಕರು ಒಳಮಿಸಲಾತಿಗೆ ಬೆಂಬಲಿಸಿದ್ದಾರೆ.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿಗಳು ನೇತ್ರತ್ವದಲ್ಲಿ ಪಾದಯಾತೆ ನಡೆಯುತ್ತಿದ್ದು,ಬೆಳಗಾವಿ ಸುವರ್ಣಸೌಧದ ಮುಂದೆ ಒಳಮಿಸಲಾತಿ ಜಾರಿಗೆ ಒತ್ತಾಯಿಸಿ ನಡೆಯುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದು ಸಮುದಾಯದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ರವೀಂದ್ರ ನಾರಯಣಪೂರ, ಸಂತೋಷ ಕಾಳೆ, ಭೀಮಾಶಂಕರ ಸೋನ್ನದ, ಪರುಶುರಾಮ ಭಾವಿಕಟ್ಟಿ, ದಯಾನಂದ ಹೊಸಮನಿ, ದತ್ತಾ ಬಂಡೆನವರ, ಕಿರಣ ಕಟ್ಟಿಮನಿ, ಚಂದ್ರು ಮಾದರ ಸಾತಲಗಾಂವ, ಮೀರಾ ವಾಘಮೋರೆ, ಮಹೇಶ ಅಗರಖೇಡ, ಹುಸೇನಿ ಮಾದರ, ಅಂಬಣ್ಣಾ ಭಾವಿಕಟ್ಟಿ, ಭೀಮಾಶಂಕರ ವಾಲಿಕಾರ, ಪ್ರದೀಪ ಡೊಳ್ಳಿನ, ಅವಿನಾಶ ಹಚ್ಚಾಳ, ಲಕ್ಕಿ ಲಚ್ಯಾಣ, ಸಂಜುಕುಮಾರ ಭತಗುಣಕಿ, ಮಲ್ಲಿಕಾರ್ಜುನ ಹೊಸಮನಿ, ಬಸು ಡೊಳ್ಳಿನ ಮೊದಲಾದವರು ಸಭೆಯಲ್ಲಿ ಇದ್ದರು.

 


Spread the love

About Yuva Bharatha

Check Also

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.!

Spread the loveಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.! ಗೋಕಾಕ: ಅಧಿಕಾರಿಗಳು ನದಿ ತೀರದ …

Leave a Reply

Your email address will not be published. Required fields are marked *

four × 3 =