ಗೋಕಾಕಿನ ಮೂವರು ಸಾಧಕರಿಗೆ ಕನ್ನಡಪ್ರಭ “ರಜತಸಾಧಕ” ಪ್ರಶಸ್ತಿ ಪ್ರಧಾನ.!
Yuva Bharatha
November 20, 2022
ಗೋಕಾಕ
3,044 Views
ಗೋಕಾಕಿನ ಮೂವರು ಸಾಧಕರಿಗೆ ಕನ್ನಡಪ್ರಭ “ರಜತಸಾಧಕ” ಪ್ರಶಸ್ತಿ ಪ್ರಧಾನ.!
ಗೋಕಾಕ: ರಾಜ್ಯದ ಪ್ರಭಾವಿ ಪತ್ರಿಕೆಯಾದ ಕನ್ನಡಪ್ರಭ ಬೆಳಗಾವಿ ಆವೃತ್ತಿ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ 2022-23ನೇ ಸಾಲಿನ ನಾಡಿನ 25ಜನ ಶ್ರೇಷ್ಠ ಸಾಧಕರಿಗೆ “ರಜತಸಾಧಕರು” ಪ್ರಶಸ್ತಿಗೆ ಗೋಕಾಕ ತಾಲೂಕಿನ ಮೂವರು ಸಾಧಕರು ಆಯ್ಕೆಯಾಗಿದ್ದರೆ.
ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯ ವತಿಯಿಂದ ನೀಡುತ್ತಿರುವ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನ ಫೋರ್ ಸೀಸನ್ಸ್ ಹೋಟೆಲ್ ನಲ್ಲಿ ಸೋಮವಾರ ದಿ.21ರಂದು ಸಂಜೆ 5ಗಂಟೆಗೆ ನಡೆಯಲಿದ್ದು, ಗೋಕಾಕಿನ ಉದ್ಯಮ ಕ್ಷೇತ್ರದಿಂದ ಶ್ರೀಮತಿ ಕವಿತಾ ಆನಂದ ಮಜಲಿಕರ, ಸಮಾಜ ಸೇವೆ ಕ್ಷೇತ್ರದಿಂದ ಶ್ರೀಮತಿ ಸುಷ್ಮೀತಾಕುಮಾರಿ ಕಿಶೋರ ಶೆಟ್ಟಿ ಮತ್ತು ಶ್ರೀ ಜಾವೇದ ಕುತ್ಬುದ್ದಿನ ಗೋಕಾಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಹಾಗೂ ಐಟಿಬಿಟಿ ಸಚಿವ ಡಾ. ಸಿ ಎನ್ ಅಶ್ವಥನಾರಾಯಣ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.