ಕಿತ್ತೂರು ಸಾಹಿತ್ಯ ಸಮ್ಮೇಳನ ಮೆರವಣಿಗೆ!
ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು.
ಸಮ್ಮೇಳನಾಧ್ಯಕ್ಷ ಎಂ.ಎಂ.ಸಂಗಣ್ಣವರ ಅವರನ್ನು ಗೌರವ ಪೂರ್ವಕವಾಗಿ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಿಂದ ವೀರಭದ್ರೇಶ್ವರ ಸಭಾ ಮಂಟಪದವರೆಗೂ ಸಾರೋಟದಲ್ಲಿ ಕರೆ ತರಲಾಯಿತು, ಜಿಲ್ಲಾಧ್ಯೆಕ್ಷೆ ಮಂಗಳಾ ಮೆಟಗುಡ್ಡ, ಹಾಗೂ ತಾಲೂಕಾಧ್ಯಕ್ಷ ಡಾ.ಎಸ್.ಬಿ. ದಳವಾಯಿ ಸರ್ವಾಧ್ಯಕ್ಷರಿಗೆ ಸಾಥ್ ನೀಡಿದರು. ಪಟ್ಟಣದ ರಾಜ ಮಾರ್ಗದುದ್ದಕ್ಕೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಮೆರವಣಿಗೆಯೂ ಗಮನ ಸೇಳಿಯಿತು ಅಲ್ಲದೆ ಕುಂಭಮೇಳ ಹಾಗೂ ಸ್ಥಬ್ದ ಚಿತ್ರಗಳು ಮೆರವಣಿಗೆ ಅಂದವನ್ನು ಇನ್ನಷ್ಟು ಇಮ್ಮಡಿ ಗೊಳಿಸಿತು.
ಶಾಲಾ ಕಾಲೇಜು ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಕನ್ನಡ ಪರ ಘೊಷಣೆಗಳನ್ನು ಕೂಗಿದರು. ಮೆರವಣಿಗೆಯೂ ವೀರಭದ್ರೇಶ್ವರ ಸಭಾ ಮಂಟಪಕ್ಕೆ ಬಂದು ಅಂತ್ಯಗೊಂಡಿತು. ಈ ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆಗಳು, ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು, ಹಾಗೂ ನಾಗರಿಕರು ಹಾಜರಿದ್ದರು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೂಬಸ್ತ ಒದಗಿಸಲಾಗಿತ್ತು. ಇದಕ್ಕೂ ಮೊದಲು ಗಣ್ಯರಿಂದ ಚನ್ನಮ್ಮಾಜಿಯ , ಸಂಗೊಳ್ಳಿ ರಾಯಣ್ಣನ ಹಾಗೂ ಅಮಟೂರು ಬಾಳಪ್ಪರ ಪುತ್ತಳಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.