ಸಂಘಟಿತ ಹೋರಾಟದಿಂದ ನಮ್ಮ ಹಕ್ಕು ಪಡೆಯಲು ಸಾಧ್ಯ; ಶೀತಲಗೌಡ ಪಾಟೀಲ!
ಯುವ ಭಾರತ ಸುದ್ದಿ ಕಾಗವಾಡ : ಎಲ್ಲಿಯ ವರೆಗೆ ನಾವು ಪಕ್ಷಾತೀತವಾಗಿ ಸಂಘಟಿತರಾಗುವದಿಲ್ಲವೋ ಅಲ್ಲಿಯವರೆಗೆ ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ನಮಗೆ ನ್ಯಾಯ ದೊರೆಯಲು ಸಾಧ್ಯವಿಲ್ಲ. ಕಾರಣ ಇನ್ನೂ ಮುಂದೆ ಈ ಭಾಗದ ಜೈನ್ ಸಮಾಜ ಬಾಂಧವರೆಲ್ಲರು ಸಂಘಟಿತರಾಗಿ ಹೋರಾಡೋಣ ಎಂದು ಉಗಾರ ಬುದ್ರುಕ್ ಪದ್ಮಾವತಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಶೀತಲಗೌಡ ಪಾಟೀಲ ಕರೆ ನೀಡಿದರು.
ಅವರು ಶನಿವಾರ ಉಗಾರ ಖುದ್ರ ಪಟ್ಟಣದ ದಿಗಂಬರ್ ಜೈನ್ ಸಮಾಜ ಭವನದಲ್ಲಿ ಏರ್ಪಡಿಸಲಾಗಿದ್ದ ಜೈನ ಜಾಗ್ರತಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾಗವಾಡ ತಾಲೂಕಿನ ಜೈನ ಸಮಾಜ ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಹೋರಾಡಿದಾಗ ಮಾತ್ರ ನಮಗೆ ನ್ಯಾಯ ದೊರೆಯಲು ಸಾಧ್ಯವೆಂದು ಹೇಳಿದರು.
ಖ್ಯಾತ ನ್ಯಾಯವಾದಿ ಹಾಗೂ ಐನಾಪುರ ಪಟ್ಟಣ ಪಂಚಾಯತ್ ಸದಸ್ಯ ಸಂಜಯ ಕುಚನೂರೆ ಮಾತನಾಡಿ, ಸರಕಾರದ ಕಾಗದ ಪತ್ರದಲ್ಲಿ ಮಾತ್ರ ಜೈನರು ಅಲ್ಪಸಂಖ್ಯಾತರು. ಆದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲ. ನಾವು ಸರಕಾರಕ್ಕೆ ಭೀಕ್ಷೆ ಬೇಡುತ್ತಿಲ್ಲ. ನಮ್ಮ ಪಾಲಿನ ಹಕ್ಕನ್ನು ನಾವು ಕೇಳುತ್ತೇವೆ. ಆದ್ದರಿಂದ ನಾವೆಲ್ಲ ಸಂಘಟಿತರಾಗಿ ಹೋರಾಟ ಮಾಡಿ ನಮ್ಮ ಹಕ್ಕುಗಳನ್ನು ಪಡೆಯೋಣ ಎಂದರು.
ಅದೇ ರೀತಿ ಶಿರಗುಪ್ಪಿಯ ಅಭಯಕುಮಾರ ಶೇಡಬಾಳದ ಶೀತಲ ಮಾಲಗಾಂವೆ, ಜೆ.ಎನ್. ನಾಂದಣಿ, ಅಕಿವಾಟೆ, ಸುರೇಶ ಚೌಗುಲಾ ಹಾಗೂ ಎಸ್.ಸಿ. ಪಾಟೀಲ, ರಾಮಚಂದ್ರ ಕಿಲ್ಲೇದಾರ, ಟಿ.ಕೆ. ಧೋತ್ರೆ ಅಪ್ಪಾಸಾಬ ಚೌಗುಲೆ,ಮೊದಲಾದವರು ಜೈನ ಸಮಾಜ ಬಾಂಧವರನ್ನು ಉದ್ದೇಶಿಸಿ, ಮಾತನಾಡಿದರು.
ಈ ಸಭೆಯಲ್ಲಿ ಮುಂದೆ ಕೈಗೊಳ್ಳಬೇಕಾಗ ಸಭೆಗಳ ಕುರಿತು ಹಾಗೂ ಸಂಘಟನೆಯ ಕುರಿತು ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ಸಮಯದಲ್ಲಿ ಶೀತಲಗೌಡಾ ಪಾಟೀಲ, ಎಸ್.ಸಿ. ಪಾಟೀಲ, ಅಭಯಕುಮಾರ ಅಕಿವಾಟೆ, ಸಂಜಯ ಕುಚನೂರೆ, ಯಶವಂತ ಪಾಟೀಲ, ಆಧಿನಾಥ ದಾನೊಳ್ಳಿ, ಬಾಹುಬಲಿ ಕುಸನಾಳೆ, ಜಿನೇಂದ್ರ ಶೆಟ್ಟಿ, ಸುರೇಶ ಚೌಗುಲಾ,ಕುಮಾರ ಪಾಟೀಲ, ಶೀತಲ ಮಾಲಗಾಂವೆ, ವಿನೋದ ಬರಗಾಲೆ, ಜೆ.ಎನ್. ನಾಂದಣಿ, , ರಾಮಚಂದ್ರ ಕಿಲ್ಲೇದಾರ, ಟಿ.ಕೆ. ಧೋತ್ರೆ, ಭೀಮು ಭೋಲೆ, ಡಾ. ರಾಜೇಂದ್ರ ಸಾಂಗಾವೆ, ಪ್ರವೀಣ ಚೌಗುಲೆ, ರಾಜು ದುಗ್ಗೆ, ಜಯಪಾಲ ಎರಂಡೋಳೆ, ಕುಮಾರ ಮಾಲಗಾಂವೆ, ಪ್ರಕಾಶ ಎಂದಗೌಡರ, ಭೀಮು ಅಕಿವಾಟೆ, ರಾಜೇಂದ್ರ ಚೌಗುಲೆ, ಪ್ರಕಾಶ ಹೆಮಗೀರೆ, ಸೇರಿದಂತೆ ಕಾಗವಾಡ, ಅಥಣಿ ತಾಲೂಕಿನ ನೂರಾರು ಜೈನ ಮುಖಂಡರು ಹಾಜರಿದ್ದರು.