ಮೇಲ್ಮನೆ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ
ಯುವ ಭಾರತ ಸುದ್ದಿ ಬೆಳಗಾವಿ :
ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಹಿರಿಯ ನಾಯಕ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ.
ಹಂಗಾಮಿ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಅವರು ಹೊರಟಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಹೊರಟ್ಟಿ ಅವರು ಮೂರನೇ ಬಾರಿಗೆ ಹುದ್ದೆ ಸಭಾಪತಿ ಸ್ಥಾನ ಅಲಂಕರಿಸಿದಂತಾಗಿದೆ. ಇಂದು ಕಲಾಪ ಪ್ರಾರಂಭವಾಗುತ್ತಿದ್ದಂತೆ ಚುನಾವಣಾ ಪ್ರಕ್ರಿಯೆ ನಡೆಸಿದ ಹೊರಟ್ಟಿಯವರ ಅವಿರೋಧ ಆಯ್ಕೆಯನ್ನು ಹಂಗಾಮಿ ಸಭಾಪತಿ ಘೋಷಿಸಿದರು. 76 ವರ್ಷದ ಹೊರಟ್ಟಿಯವರು ಈ ಮೊದಲು ಸುದೀರ್ಘ ಕಾಲ ಜೆಡಿಎಸ್ ನಲ್ಲಿದ್ದು ಇತ್ತೀಚಿಗೆ ಬಿಜೆಪಿ ಸೇರಿ ವಿಧಾನ ಪರಿಷತ್ ಸದಸ್ಯರಾಗಿ ದಾಖಲೆ ಅವಧಿಗೆ ಆಯ್ಕೆಯಾಗಿದ್ದರು.