ಅಥರ್ಗಾದಲ್ಲಿ ಹಬ್ಬದ ವಾತಾವರಣ ಮೂಡಿಸಿದ ಕೆರೆ ತುಂಬುವ ಕಾರ್ಯಕ್ರಮ !
ಯುವ ಭಾರತ ಸುದ್ದಿ ಇಂಡಿ:
ವಿಜಯಪುರ ಜಿಲ್ಲೆಯ ವಿವಿಧ ಅಭಿವೃದ್ದಿ ಕಾಮಗಾರಿಗೆ ೧ ಲಕ್ಷ ಕೋಟಿ ಅನುಧಾನ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದ ಕೇಂದ್ರ ಸರ್ಕಾರ ನೀಡಿದೆ. ವಿಜಯಪುರ ಜಿಲ್ಲೆಗೆ ೧೭ ಬಾಂದಾರ ಕಂ ಬ್ರೀಡ್ಜ ಕೆಲಸಕ್ಕೆ ಕೇಂದ್ರ ಸರ್ಕಾರ ೪೧.೮೫ ಕೋಟಿ ಮಂಜೂರು ಮಾಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ಭಾನುವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಹಮ್ಮಿಕೊಂಡ ಕೆರೆ ತುಂಬುವ ಕಾಮಗಾರಿಯ ಲೋಕಾರ್ಪಣೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಅದೃಷ್ಟ ನನ್ನ ಕಾಲದಲ್ಲಿ ಮೋದಿ ಅವರು ಪ್ರಧಾನಿ ಆಗಿ,ಅಭಿವೃದ್ದಿಗೆ ಅನುಧಾನ ನೀಡಿದ್ದಾರೆ.ಅಭಿವೃದ್ದಿಯ ಹರಿಕಾರ ಪ್ರಧಾನಿ ಮೋದಿ ನರೇಂದ್ರ ಮೋದಿ ಅವರು.ಉತ್ತರ ಭಾರತದ ೭ ರಾಜ್ಯಗಳಲ್ಲಿಯೂ ರಾಷ್ಟ್ರೀಯ ಹೆದ್ದಾರಿ,ವಿಮಾನ ನಿಲ್ದಾಣ ಮೋದಿ ಅವರು ಮಾಡಿದ್ದಾರೆ.ಮಹಾರಾಷ್ಟ್ರ ಸರಹದ್ದಿನಿಂದ ಅಗರಖೇಡ ಮಾರ್ಗವಾಗಿ ಬರುವ ರಾಷ್ಟ್ರೀಯ ಹೆದ್ದಾರಿ ಅಥರ್ಗಾ,ನಾಗಠಾಣಕ್ಕೆ ಬೈಪಾಸ್ ರಸ್ತೆಯ ಮೂಲಕ ಸಾಗಲಿದೆ.ಇದಕ್ಕಾಗಿ ಸಾವಿರ ಕೋಟಿ ಅನುಧಾನ ಬಿಡುಗಡೆ ಆಗಿದೆ ಎಂದು ಹೇಳಿದರು.
೯ ತಿಂಗಳ ಹಿಂದೆ ಕೆರೆ ತುಂಬುವ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಕುಲಂಕಾರೇಶ್ವರ ಆಶೀರ್ವಾದದಿಂದ ಇಂದು ಕೆರೆ ಲೋಕಾರ್ಪಣೆ ಮಾಡಿ ಹಿಂಥ ದೊಡ್ದ ಪ್ರಮಾಣದ ಯೋಜನೆ ಸರ್ಕಾರ ಮುಗಿಸುವ ಕಾರ್ಯ ಮಾಡಿದೆ.ನಮ್ಮ ಗ್ರಾಮಕ್ಕೆ ಕಾಲುವೆ ಇಲ್ಲ,ನೀರಾವರಿ ಇಲ್ಲ ಎಂದು ನನ್ನದ್ದು ಹೊಟ್ಟೆ ಉರಿಯುತಿತ್ತು.ಗೋವಿಂದ ಕಾರಜೋಳ ಅವರಿಗೆ ನಮ್ಮೂರ ಕೆರೆ ತುಂಬಿಸಲು ಕೇಳಿಕೊಂಡಾಗ ಅವರು ಒಪ್ಪಿಕೊಂಡು ಕೆರೆ ತುಂಬಿಸಿಕೊಟ್ಟಿದ್ದಾರೆ.ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಸಚಿವ ಗೋವಿಂದ ಕಾರಜೋಳ ಅವರಿಗೆ ಅಭಿನಂದಿಸುತ್ತೇನೆ.
ಮುAಬರುವ ದಿನದಲ್ಲಿ ಮತ್ತೇ ನನಗೆ,ಕಾರಜೋಳ ಅವರಿಗೆ ಹಾಗೂ ಯಶವಂತರಾಯಗೌಡ ಪಾಟೀಲ ಅವರಿಗೆ ಅವಕಾಶ ಸಿಕ್ಕರೆ ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ.ಗ್ರಾಮಸ್ಥರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ.ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳುವುದು ಬಿಟ್ಟು ಕೆರೆಗೆ ನೀರು ಬಂದಿದೆ.ಜಮೀನದಲ್ಲಿ ದುಡಿಯುವುದು ಕಲಿತುಕೊಳ್ಳಬೇಕು.ಜಮೀನು ಮಾರಾಟ ಮಾಡಬೇಡಿ ಎಂದು ಹೇಳಿದರು.
ಜಗಜಿಣಗಿ ಅವರು ಬಿಟ್ಟು ವಿಜಯಪುರಕ್ಕೆ ಹೋಗಿದ್ದಾರೆ ಎಂದು ಅಂದುಕೊಳ್ಳಬೇಡಿ,ನಾನು ಎಲ್ಲಿ ಇದ್ದರೂ ಹುಟ್ಟಿದ ಊರು ಮರೆಯಲಿಕ್ಕೆ ಆಗುವುದಿಲ್ಲ.ಎಲ್ಲೆ ಇದ್ದರು ಮನಸ್ಸು ಕುಲಂಕಾರೇಶ್ವರ ಗುಡಿಯಲ್ಲಿ ಇರುತ್ತದೆ ಎಂದು ಭಾವುಕರಾಗಿ ಹೇಳಿದರು.
ಇದು ನನ್ನೂರ,ಕುಲಂಕಾರೇಶ್ವರ ನನ್ನವ.ನಾನು ಎಂದೂ ನಾನು ಮಾಡಿದ್ದೇನೆ ಎಂದು ಹೇಳಿಲ್ಲ.ಪೊಟೊ ಹಚ್ಚಿಸಿಕೊಂಡಿರುವುದಿಲ್ಲ.ಪೊಟೊಕ್ಕಿAತ ಜನರ ಮನಸ್ಸಿನಲ್ಲಿ ಇರುವಂತೆ ಕೆಲಸ ಮಾಡಬೇಕು ಎಂದು ಹೇಳಿದರು.ಲೋಕಸಭಾ ಸದಸ್ಯನಾದ ಮೇಲೆ ಅನೇಕ ಅಭಿವೃದ್ದಿ ಯೋಜನೆಗಳನ್ನು ಮಾಡಿದ್ದೇನೆ ಎಂದು ಹೇಳಿದರು.
ಬಾಕ್ಸ:
ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ದೊಡ್ದ ಕೊಡುಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಪಕ್ಷಾತೀತವಾಗಿ ಈ ಭಾಗದ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಭಾನುವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಹಮ್ಮಿಕೊಂಡ ಕೆರೆ ತುಂಬುವ ಕಾಮಗಾರಿಯ ಲೋಕಾರ್ಪಣೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಪಂಚದಲ್ಲಿ ನೀರಿಗಾಗಿ ೪ ನೇ ಮಹಾಯುದ್ದ ನಡೆಯಬಹುದಾದ ಸಂದರ್ಭದಲ್ಲಿ ರಾಜ್ಯದಲ್ಲಿ ಸಮಗ್ರ ನೀರಾವರಿ ಹಾಗೂ ಜೀವಜಲದ ಬಗ್ಗೆ ಪ್ರಾಮಾಣಿಕ ಪ್ರಯತ್ನವನ್ನು ಜಲಸಂಪನ್ಮೂಲ ಸಚಿವ ಗೊವಿಂದ ಕಾರಜೋಳ ಅವರು ಮಾಡುತ್ತಿದ್ದಾರೆ.ಚುನಾವಣೆ ಸಮೀಪಿಸುತ್ತಿದೆ ಎಂದು ಕ್ರೇಡಿಟ್ ತಗೆದುಕೊಳ್ಳುವ ರಾಜಕಾರಣ ಮಾಡಲು ಈ ಕಾರ್ಯಕ್ರಮಕ್ಕೆ ಬಂದಿರುವುದಿಲ್ಲ.ಜನರ ಆಶೋತ್ತರಗಳನ್ನು ಈಡೇರಿಸಿದಕ್ಕಾಗಿ,ಅನುಕರುಣೆಯ ರಾಜಕೀಯ ವ್ಯವಸ್ಥೆಯನ್ನು ಪ್ರತಿಸ್ಥಾಪನೆ ಮಾಡಲು ಹೋರಟಿದ್ದೇವೆ.ಇಂಡಿ ಹೃದಯವಂತರ ನಾಡು,ಹೀಗಾಗಿ ಪಕ್ಷವನ್ನು ಮೀರಿ ಪಾಲ್ಗೊಂಡಿದ್ದಿವಿ.ಸಿಕ್ಕಿರುವ ಅಧಿಕಾರ ಸದ್ಬಳಕೆ ಮಾಡಿಕೊಂಡು ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸಬೇಕಾಗಿರುವುದು ನಮ್ಮ ಕರ್ತವ್ಯ.ಬ್ರಿಟೀಷರ ಕಾಲದಿಂದಲೂ ಬರಗಾಲದಿಂದ ತತ್ತರಿಸುತ್ತಿರುವ ಈ ಪ್ರದೇಶದ ಜನ,ಜಾನುವಾರುಗಳು ಸಂಕಷ್ಟ ಅನುಭವಿಸಿದೆ.ಉತ್ತರ ಕರ್ನಾಟಕದ ಭಾಗದ ನೀರಾವರಿ ಯೋಜನೆಗೆ ದೊಡ್ಡ ಸಹಾಯ ಮಾಡಿದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ನೀರಾವರಿ ಸಚಿವರನ್ನು ಅಭಿನಂದಿಸುತ್ತೇನೆ.
೩ ಸಾವಿರ ಕೋಟಿ ಅನುಧಾನದ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಜಾರಿಗೊಳಿಸುತ್ತಿದ್ದು,ಆ ಯೋಜನೆ ಆದರೆ ಇಂಡಿ,ಚಡಚಣ ಭಾಗಕ್ಕೆ ನೀರಾವರಿ ಅನುಕೂಲವಾಗುತ್ತದೆ.ಮೊದಲು ಕೆರೆ ತುಂಬುವ ಯೋಜನೆ ಅಂದರೆ ನಮ್ಮವರಲ್ಲಿ ಆಸಕ್ತಿ ಇದ್ದರಲಿಲ್ಲ.ಯೋಜನೆ ಸಾಫಲ್ಯ ಕಾಣಲಿಲ್ಲ.ಇಂದು ದೊಡ್ಡ ಹಳ್ಳ ಹರಿಯುವಂತೆ ಪೈಪಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗಿದೆ.ಹೊರ್ತಿ ಭಾಗದ ಸಾವಳಸಂಗ,ಕೂಡಗಿ ಸೇರಿದಂತೆ ೧೯ ಕೆರೆಗಳು ತುಂಬಿಸಲು ೨೦೦ ಕೋಟಿ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ಮನಸ್ಸಿನ ಭಾವನೆ ಈಡೇರಿದಾಗ ಹಿಂತ ಭಾವನೆ ವ್ಯಕ್ತವಾಗುತ್ತದೆ.ಬೇಧ,ಭಾವವಿಲ್ಲದೆ ರೈತ ಭಾವದೊಂದಿಗೆ ರೈತರ ಬಾಳು ಹಸನವಾಗಿದೆ ಎಂದು ತಿಳಿದು ಸಂತೋಷದಿಂದ ಪಕ್ಷಾತೀತವಾಗಿ ಗೌರವಿಸುವ ಕಾರ್ಯಕ್ರಮ ಮಾಡಿದ್ದು ಸಾಕ್ಷಿಯಾಗಿದೆ.ಪಕ್ಷಗಳನ್ನು ಮೀರಿ ನಿಮಗೆ ಸಂತಸವಾಗಿದೆ.ರಾಜ್ಯದ ಸರ್ಕಾರ ದಶಕ ದಶಕಗಳಿಂದ ಇರುವ ಗ್ರಾಮಸ್ಥರ ಬೇಡಿಕೆಗಳನ್ನು ಕನಸು ನನಸು ಮಾಡಿದ್ದಾರೆ.ನನಸು ಮಾಡಿದವರನ್ನು ಗೌರವಿಸುವ ಕಾರ್ಯ ಮಾಡಿದ್ದಿರಿ.ಅಪರೂಪದ ರಾಜಕಾರಣಿ ಜಲಸಂಪನ್ಮೂಲ ಸಚಿವರು.ಸಂಸದರು ಈ ಕಾರ್ಯಕ್ರಮ ತಮ್ಮ ಮನೆಯ ಕಾರ್ಯಕ್ರಮ ಎನ್ನುವಂತೆ ಎಲ್ಲರನ್ನು ವಿನಂತಿ ಮಾಡಿ ವಿಜ್ರಂಭೆಯಿಂದ ಕಾರ್ಯಕ್ರಮವನ್ನು ಮಾಡಿದ್ದಾರೆ.ಅಧಿಕಾರ ಶಾಶ್ವತ ಅಲ್ಲ.ಇರುವಷ್ಟು ದಿನ ಜನಪರವಾಗಿ ಕೆಲಸ ಮಾಡಬೇಕು. ನಾವು ಮಾಡಿದ ಕಾರ್ಯಗಳು ನೆನೆಸಿಕೊಳ್ಳುವಂತಾಗಿರಬೇಕು.
೪ ದಶಕದಿಂದ ಆಗದೆ ಇರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನನ್ನ ಅಧಿಕಾರವನ್ನು ಬಳಕೆ ಮಾಡಿಕೊಂಡು ಮಾಡಿದ್ದೇನೆ. ಕೆರೆಗಳನ್ನು ತುಂಬಿಸಿದ್ದು ಜನರ ಮನಸ್ಸಿನಲ್ಲಿಇರುತ್ತದೆ ಎಂದು ಹೇಳಿದರು.
ನಾಗುಗೌಡ ಪಾಟೀಲ,ಅಶೋಕಗೌಡ ಪಾಟೀಲ, ಪ್ರಕಾಶ ಹಿಟ್ನಳ್ಳಿ ಸೇರಿದಂತೆ ಇತರರು ಇದ್ದರು.ಗಣಪತಿ ಬಾಣಿಕೋಲ ಸ್ವಾಗತಿಸಿದರು.ರಮೇಶ ಗೊಟ್ಯಾಳ ನಿರೂಪಿಸಿದರು.ಸುನೀಲ ರಬಶೇಟ್ಟಿ ವಂದಿಸಿದರು.