Breaking News

ರೋಡಗಿ : ವಾರ್ಷಿಕ ಸ್ನೇಹ ಸಮ್ಮೇಳನ

Spread the love

ರೋಡಗಿ : ವಾರ್ಷಿಕ ಸ್ನೇಹ ಸಮ್ಮೇಳನ

ಯುವ ಭಾರತ ಸುದ್ದಿ ಇಂಡಿ:
ಸಮಾಜದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆದರೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ,ನೈತಿಕತೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ.ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಆತ್ಮವಿಶ್ವಾಸದಿಂದ ಗುರಿ ಮುಟ್ಟಬೇಕು ಎಂದು ಶಿಕ್ಷಕ ಆರ್.ಜಿ.ಬಂಡಿ ಹೇಳಿದರು.
ಅವರು ತಾಲೂಕಿನ ರೋಡಗಿ ಗ್ರಾಮದಲ್ಲಿ ಶ್ರೀ ಶಿವಯೋಗೆಪ್ಪ ಆಲಗೊಂಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಿದೆ.ಮುಂದೆ ಉನ್ನತ ಕೋರ್ಸಗಳಿಗೆ ಪ್ರವೇಶ ಪಡೆಯಲು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿರಬೇಕು ಎಂದು ಹೇಳಿದ ಅವರು,ಮಕ್ಕಳ ಬೌದ್ಧಿಕ ಪ್ರಗತಿಗೆ ಪರೀಕ್ಷೆಗಳ ಅಂಕಗಳು ನಿದರ್ಶನವಾದರೆ,ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ವಾರ್ಷಿಕ ಸ್ನೇಹ ಸಮ್ಮೇಳನ ನಿದರ್ಶನವಾಗುತ್ತದೆ ಎಂದು ಹೇಳಿದರು.ಶೈಕ್ಷಣಿಕ ಪ್ರಗತಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಸಮಾಜಕ್ಕೆ ಶ್ರೇಷ್ಠವಾದ ಕೊಡುಗೆಯನ್ನು ಕೊಡಬೇಕು ಎಂದು ಹೇಳಿದರು.
ಅಭಿನವ ಶಿವಲಿಂಗೇಶ್ವರ ಶ್ರೀ,ಮಡಿವಾಳೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು.ಭೂಧಾನಿ ಪ್ರಶಾಂತ ಅಲಗೊಂಡ ಕಾರ್ಯಕ್ರಮ ಉದ್ಘಾಟಿಸಿದರು.ಸಂಗಣ್ಣ ಈರಾಬಟ್ಟಿ,ಶಂಕರಗೌಡ ಬಂಡಿ,ಬಸಣ್ಣ ಮಿರಗಿ,ರಾಜಶೇಖರ ಬಂಡಿ,ರುದ್ರು ಅಲಗೊಂಡ,ಜಗದೀಶ ಸೋಲಾಪೂರ,ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಕಲ್ಲೂರಕರ,ಸಂಜು ಮುಲಗಿ,ಪ್ರಭು ಬಬಲೇಶ್ವರ,ಮಲ್ಲುಗೌಡ ಶಿರಶ್ಯಾಡ,ಶಟ್ಟೆಪ್ಪ ಹರಿಜನ,ಮುಖ್ಯೋಪಾಧ್ಯಯ ಬಿ.ಎಸ್.ತಳವಾರ,ಅತಿಥಿ ಶಿಕ್ಷಕರಾದ ಎನ್.ಎಸ್.ಕಂಬಾರ,ಪ್ರಭು ವಾಲಿ,ಎಸ್.ಎಂ.ಪಾಟೀಲ,ವಿಜಯಲಕ್ಷ್ಮಿ,ಮುಲ್ಲಾ, ಸುನೀಲ ಅಂಬಲಿ,ಸಂಜೀವಕುಮಾರ ಬಾಣಿಕೋಲ ಇತರರು ಕಾರ್ಯಕ್ರಮದಲ್ಲಿ ಇದ್ದರು.ಶಿಕ್ಷಕರಾದ ಎಂ.ಎಸ್.ಪಾಟೀಲ,ಸುನೀಲ ಅಂಬಲಿ ನಿರೂಪಿಸಿದರು. ಶಿಕ್ಷಕ ಸಂಜೀವಕುಮಾರ ಬಾಣಿಕೋಲ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


Spread the love

About Yuva Bharatha

Check Also

ಪತ್ರಕರ್ತ ಪ್ರಾದೇಶಿಕತೆ ಮೀರಿ ನಡೆಯಬೇಕು : ಸಿಎಂ ಬೊಮ್ಮಾಯಿ ಅಭಿಮತ

Spread the loveಪತ್ರಕರ್ತ ಪ್ರಾದೇಶಿಕತೆ ಮೀರಿ ನಡೆಯಬೇಕು : ಸಿಎಂ ಬೊಮ್ಮಾಯಿ ಅಭಿಮತ ಯಾವುದೋ ಒಂದು ದಿನಪತ್ರಿಕೆ ಹೊರ ತಂದು …

Leave a Reply

Your email address will not be published. Required fields are marked *

10 + six =