Breaking News

ಗುಡಿಸಲಿಗೆ ಆಕಸ್ಮಿಕ ಬೆಂಕಿ: ವೃದ್ಧ ದಂಪತಿ ಸಜೀವ ದಹನ

Spread the love

ಗುಡಿಸಲಿಗೆ ಆಕಸ್ಮಿಕ ಬೆಂಕಿ: ವೃದ್ಧ ದಂಪತಿ ಸಜೀವ ದಹನ

ಯುವ ಭಾರತ ಸುದ್ದಿ ವಿಜಯಪುರ:
ಗುಡಿಸಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡದಿಂದ ಇಬ್ಬರು ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಚಡಚಣ ಪಟ್ಟಣದ ಹೊರ ವಲಯದ ಜಮೀನಿನ ಗುಡಿಸಲಿನಲ್ಲಿ ವಾಸವಿದ್ದ ಕರೀಮಸಾಬ ಇಮಾಮಸಾಬ ಟಪಾಲ (82), ಸಾಜನಬಿ ಕರೀಮಸಾಬ ಟಪಾಲ ಮೃತಪಟ್ಟಿರುವ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ನೀವರಗಿ ರಸ್ತೆಯಲ್ಲಿನ ತಮ್ಮ ಜಮೀನಿನಲ್ಲಿ ಈ ವೃದ್ಧ ದಂಪತಿ ಗುಡಿಸಲು ಹಾಕಿಕೊಂಡು ವಾಸವಿದ್ದರು. ರಾತ್ರಿ ಮಲಗಿದ್ದ ವೇಳೆ ಚಿಮಣಿಯಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಊಹಿಸಲಾಗಿದೆ. ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇಬ್ಬರು ಗುಡಿಸಲಿನಲ್ಲಿಯೇ ಮೃತಪಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ವಿಷಯ ಗೊತ್ತಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Yuva Bharatha

Check Also

ಪತ್ರಕರ್ತ ಪ್ರಾದೇಶಿಕತೆ ಮೀರಿ ನಡೆಯಬೇಕು : ಸಿಎಂ ಬೊಮ್ಮಾಯಿ ಅಭಿಮತ

Spread the loveಪತ್ರಕರ್ತ ಪ್ರಾದೇಶಿಕತೆ ಮೀರಿ ನಡೆಯಬೇಕು : ಸಿಎಂ ಬೊಮ್ಮಾಯಿ ಅಭಿಮತ ಯಾವುದೋ ಒಂದು ದಿನಪತ್ರಿಕೆ ಹೊರ ತಂದು …

Leave a Reply

Your email address will not be published. Required fields are marked *

three × 1 =