ಗೋಕಾಕ : ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು
ಯುವ ಭಾರತ ಸುದ್ದಿ ಗೋಕಾಕ :
ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹಾರೈಸಿದ ನಿಸರ್ಗಕವಿ, ರಸಋಷಿ, ಕುವೆಂಪುರವರು ಈ ದೇಶ ಕಂಡ ಅಪ್ರತಿಮ ರಾಷ್ಟ್ರಕವಿ ಎಂದು ಉಪನ್ಯಾಸಕ ಎಸ್.ಎಮ್.ಪೀರಜಾದೆ ಅವರು ಅಭಿಪ್ರಾಯ ಪಟ್ಟರು.
ಇಲ್ಲಿನ ಬಸವಜ್ಯೋತಿ ಐ ಟಿ ಐ ಸಂಸ್ಥೆಯಲ್ಲಿ ಗುರುವಾರದಂದು ರಾಷ್ಟ್ರಕವಿ ಕುವೆಂಪು ರವರ ಜನ್ಮ ದಿನಾಚರಣೆಯ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಆ ಮತದ, ಈ ಮತದ, ಹಳೆ ಮತದ, ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕ್ಕೆ ಓ ಬನ್ನಿ ಸಹೋದರರೇ ವಿಶ್ವಪಥಕ್ಕೆ ಎಂದು ಸಾರಿದ ಕುವೆಂಪುರವರ ಜೀವನ ತತ್ವಗಳು ನಮಗೆ ಆದರ್ಶವಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವಜ್ಯೋತಿ ಐ ಟಿ ಐ ಸಂಸ್ಥೆಯ ಅಧ್ಯಕ್ಷ ಅಶೋಕ ಲಗಮಪ್ಪಗೋಳ ಕುವೆಂಪುರವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಭಿಮಾನ, ಆತ್ಮವಿಶ್ವಾಸ ಬಲದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಪರಶುರಾಮ ಗೋಲ್ಲರ, ವಿಠ್ಠಲ ತಹಶೀಲ್ದಾರ, ಸಂಸ್ಥೆಯ ಪ್ರಾಚಾರ್ಯ ಎಲ್.ಎಸ್.ಜಾಧವ, ಸಾಮ್ರಾಟ ಐ ಟಿ ಐ ಯಾದವಾಡ, ಸಂಸ್ಥೆಯ ಪ್ರಾಚಾರ್ಯ ವಿ.ಕೆ.ಮಿರ್ಜಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅರುಣ ಪೂಜೇರಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.