ಉದ್ಯಮಬಾಗ ಪೊಲೀಸರ ಕಾರ್ಯಾಚರಣೆ ; ರೂ. 1,85,000 ಮೊತ್ತದ 7 ಬೈಕ್ ಪತ್ತೆ

ಯುವ ಭಾರತ ಸುದ್ದಿ ಬೆಳಗಾವಿ :
ಉದ್ಯಮಬಾಗ ಪೊಲೀಸರು ಖಚಿತ ಮಾಹಿತಿ ಕಲೆ ಹಾಕಿ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿತರಾದ ಹೈದರಅಲಿ ಮುಸ್ಲಿಂಅಲಿ ಶೇಖ್ ಸಾ.ಎ.ಪಿ.ಜೆ ಅಬ್ದುಲ್ ಕಲಾಂ ಕಾಲೋನಿ ಪೀರನವಾಡಿ ಬೆಳಗಾವಿ ಮತ್ತು ಮೋದಿನ @ ನದೀಮ ಸಂಶೋದಿನ ಪೋಟೇಗಾರ ಸಾ|| ಕೆ/ಆಪ್ ಮುರಾದಮುಲ್ಲಾ ಎರಡನೇ ಕ್ರಾಸ್ ಅಮನ ನಗರ, ನ್ಯೂ ಗಾಂಧಿನಗರ ಬೆಳಗಾವಿ ಇವರನ್ನು ಬುಧವಾರ ದಸ್ತಗಿರಿ ಮಾಡಿ, ಆರೋಪಿತರಿಂದ ವಿವಿಧ ಕಂಪನಿಯ ಒಟ್ಟು ಏಳು (ಹೀರೊ ಸ್ಪೆಂಡರ್-2, ಆಕ್ಟಿವಾ-2, ಡಿಯೋ-1 ಆಕ್ಸಿಸ್-1, ಯಮಹಾ ಎಫ್‌ಝಡ್-1) ಮೋಟರ್ ಸೈಕಲ್‌ಗಳನ್ನು ಜಪ್ತಪಡಿಸಿಕೊಂಡಿದ್ದು, ಒಟ್ಟು ರೂ.1,85,000/- ಮೌಲ್ಯದ ವಿವಿಧ ಕಂಪನಿಗಳ 7 ಮೋಟರ್ ಸೈಕಲ್‌ಗಳನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಪಿಐ ರಾಮಣ್ಣ ಬಿರಾದಾರ, ಆರ್. ಪಿ. ಕದಂ, ಡಬ್ಲೂ.ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಐ. ಎಸ್. ಪಾಟೀಲ, ಜೆ. ಎಫ್. ಹಾದಿಮನಿ, ಎ.ಬಿ. ಬಿದನೂರ, ಎಸ್. ಎ. ಕರ್ಕಿ, ಐ. ಎಂ. ಚವಲಗಿ ಅವರ ತಂಡವನ್ನು ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಶ್ಲಾಘಿಸಿದ್ದಾರೆ.
YuvaBharataha Latest Kannada News