288 ನೇ ಮಾಸಿಕ ಸಾಹಿತ್ಯ ಚಿಂತನ ಗೋಷ್ಠಿ

ಯುವ ಭಾರತ ಸುದ್ದಿ ಗೋಕಾಕ:
ಗೋಕಾಕ ಸಾಹಿತ್ಯ ಚಿಂತನ ಕಮ್ಮಟ ಹಾಗೂ ಬೆಟಗೇರಿಯ ಶ್ರೀ ಸರ್ವೇಶ್ವರ ಪ್ರಸಾದಿತ ಶಿವ ಕಾಳಿಕಾಂಬಾ ಸಾಂಸ್ಕೃತಿಕ ಸಂಸ್ಥೆ (ರಿ) ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ
ಜ.14 ರಂದು ಸಾಯಂಕಾಲ 5:30 ಘಂಟೆಗೆ ಫಾಲ್ಸ್ ರಸ್ತೆ ಪ್ರಾ. ಶಕುಂತಲಾ ದಂಡಗಿಯವರ ‘ನಿಸರ್ಗ’ ನಿಲಯದಲ್ಲಿ 288 ನೇ ಮಾಸಿಕ ಸಾಹಿತ್ಯ ಚಿಂತನ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಇತ್ತೀಚೆಗೆ ಆನಂದಕಂದರ ಜನ್ಮಭೂಮಿ ಬೆಟಗೇರಿ ಗ್ರಾಮದಲ್ಲಿ ಜರುಗಿದ ಗೋಕಾಕ ತಾಲೂಕಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮೀಕ್ಷೆಯನ್ನು ಹಿರಿಯ ಸಾಹಿತಿ, ಗಜಲ್ ಕವಿ, ಶಿಕ್ಷಕ ಈಶ್ವರ ವಿರುಪಾಕ್ಷಪ್ಪ ಮಮದಾಪೂರ ಮಾಡಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವ್ಹಿ.ವ್ಹಿ. ದೇಯಣ್ಣವರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಮೇಶ ಎಸ್. ಅಳಗುಂಡಿಯವರು ವಹಿಸಲಿದ್ದಾರೆ. ಗೋಕಾಕ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳೊಂದಿಗೆ ಬೆಟಗೇರಿ ಗ್ರಾಮದ ಗುರು-ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸರ್ವರೂ ಆಗಮಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಈಶ್ವರಚಂದ್ರ ಬೆಟಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳ : ಗೋಕಾಕ ಶ್ರೀ ಈಶ್ವರಚಂದ್ರ ಎಸ್. ಬೆಟಗೇರಿ
YuvaBharataha Latest Kannada News