ಕಲಿಕಾ ಹಬ್ಬಕ್ಕೆ ಚಾಲನೆ

ಯುವ ಭಾರತ ಸುದ್ದಿ ಗೋಕಾಕ :
ಆಟದ ಮೈದಾನದಲ್ಲಿಯ ಮಕ್ಕಳ ಸಂಭ್ರಮ ತರಗತಿಯೊಳಗೂ ಕಾಣಲು ಸರಕಾರ ಕಲಿಕಾ ಹಬ್ಬವೆಂಬ ನಿತ್ಯೋತ್ಸವ ಜಾರಿಗೆ ತಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ.ಬಳಗಾರ ಹೇಳಿದರು.
ಗುರುವಾರದಂದು ತಾಲೂಕಿನ ನಂದಗಾವ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಮೂಢಿಸಲು ಈ ಕಲಿಕಾ ಹಬ್ಬ ಸಹಕಾರಿಯಾಗಿದೆ. ಮಕ್ಕಳು ತಾವು ಕಲಿತು ಇನ್ನುಳಿದ ತಮ್ಮ ತರಗತಿಯ ಮಕ್ಕಳೊಂದಿಗೆ ಈ ಹಬ್ಬದಲ್ಲಿ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಒಡನಾಟದ ಮೂಲಕ ಪ್ರಶ್ನೆಗಳು, ಪ್ರಯೋಗಗಳು, ವಿಕ್ಷಣೆಗಳು, ಪರಸ್ಪರ ರ‍್ಚೆ, ಮುಕ್ತ ಸಂವಾದ, ಹಾಡು ಹಾಸ್ಯ, ನೃತ್ಯ ನಾಟಕ ಹೀಗೆ ಅನುಭಾತ್ಮಕವಾಗಿ ಕಲಿಯಲಿದ್ದಾರೆ ಎಂದರು.
ಉದ್ಘಾಟನೆಯನ್ನು ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ನೆರವೇರಿಸಿದರು.
YuvaBharataha Latest Kannada News