ಅಹಿಂದ ವರ್ಗದ ರಾಜಕೀಯ ಭವಿಷ್ಯಕ್ಕೆ ರವಿವಾರ ಸಭೆ
ಯುವ ಭಾರತ ಸುದ್ದಿ ಇಂಡಿ:
ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷವಾದರೂ ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಪಕ್ಷಗಳು ದಲಿತ,ಮುಸ್ಲೀಮ,ಹಿಂದುಳಿದ ವರ್ಗದ ಜನರನ್ನು ತಮ್ಮ ಮತಬ್ಯಾಂಕಾಗಿಯೇ ಬಳಕೆ ಮಾಡಿಕೊಂಡಿದ್ದಾರೆ ವಿನ ಅವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿರುವುದಿಲ್ಲ.ಹೀಗಾಗಿ ೨೦೨೩ರ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಅಹಿಂದ ವರ್ಗದ ರಾಜಕೀಯ ಭವಿಷ್ಯಕ್ಕಾಗಿ ಜ.೨೨ ರಂದು ಬೆಳಿಗ್ಗೆ ೧೦ ಗಂಟೆಗೆ ಎಸ್ಸಿ,ಎಸ್ಟಿ,ಒಬಿಸಿ,ಅಲ್ಪಸಂಖ್ಯಾತ ಸಮುದಾಯದ ಸಭೆ ಕರೆಯಲಾಗಿದೆ ಎಂದು ಬಿಎಎಸ್ಪಿ ಜಿಲ್ಲಾ ಮುಖಂಡ ನಾಗೇಶ ಶಿವಶರಣ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದೇಶದಲ್ಲಿ ಶೇ.೮೦ ರಷ್ಟಿರುವ ಎಸ್ಸಿ,ಎಸ್ಟಿ,ಒಬಿಸಿ,ಅಲ್ಪಸಂಖ್ಯಾತರನ್ನು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಮತಬ್ಯಾಂಕಾಗಿ ಬಳಕೆ ಮಾಡಿಕೊಂಡಿವೆ.ಸಭೆಯಲ್ಲಿ ಅಹಿಂದ ವರ್ಗದ ನಾಯಕನನ್ನು ಕಣಕ್ಕೆ ಇಳಿಸುವ ಕುರಿತು ಹಾಗೂ ಯಾವ ಪಕ್ಷದಿಂದ ಕಣಕ್ಕೆ ಇಳಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗುತ್ತದೆ.ಸಮಮನಸ್ಕರು,ಸಮಾಜದ ಸ್ವಾಭಿಮಾನ ಇರುವವರು ಸಭೆಗೆ ಬರಲಿದ್ದಾರೆ.ಮುಂಬರುವ ವಿಧಾನಸಭೆ,ಜಿಪಂ,ತಾಪಂ ಚುನಾವಣೆಯಲ್ಲಿ ಸ್ಪಂದಿಸುವ ಕುರಿತು ಚರ್ಚಿಸಲಾಗುತ್ತದೆ.ಜ.೨೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದಿAದ ನೂರಾರು ಯುವ ಸಮುದಾಯದೊಂದಿಗೆ ಕಾಲ್ನಡಿಗೆ ಮೂಲಕ ಟಿಪ್ಪುಸುಲ್ತಾನ,ಬಸವೇಶ್ವರ,ದಾದಾಗೌಡ ಪಾಟೀಲ,ಅಂಬೇಡ್ಕರ,ಮಹಾವೀರ,ಶಿವಾಜಿ ವೃತ್ತದ ಮೂಲಕ ನಡೆದು ಹಂಜಗಿ ರಸ್ತೆಯಲ್ಲಿರುವ ಬಾಬು ಜಗಜೀವನರಾಮ ಭವನಕ್ಕೆ ತಲುಪಲಿದೆ.ನಂತರ ಸಭೆ ನಡೆಯಲಿದೆ.ಸಮುದಾಯದ ಕಾಳಜಿಯುಳ್ಳ ಎಲ್ಲ ಯುವಕರು ತಪ್ಪದೆ ಸಭೆಗೆ ಆಗಮಿಸಿ,ತಮ್ಮ ಸಲಹೆ,ಸೂಚನೆಗಳನ್ನು ನೀಡಲು ಅವರು ಮನವಿ ಮಾಡಿಕೊಂಡರು.
ಪುರಸಭೆ ಮಾಜಿ ಸದಸ್ಯ ಮಹಿಬೂಬ ಅರಬ,ಪ್ರಕಾಶ ಹೊಸಮನಿ,ಫಾರೂಕ ಬೊರಾಮಣಿ,ಸುಲ್ತಾನ ಪಟೇಲ,ಸಿದ್ದಾರ್ಥ ಹಳ್ಳದಮನಿ,ಸುನೀಲ ಕಾಲೇಬಾಗ,ಗಣಿಸಾಬ ನಾಗಣಸೂರ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.