Breaking News

ಬೆಳಗಾವಿ: ಕನ್ನಡ ಗೀತೆಗಳ ಸ್ಪರ್ಧೆ

Spread the love

ಬೆಳಗಾವಿ: ಕನ್ನಡ ಗೀತೆಗಳ ಸ್ಪರ್ಧೆ

ಯುವ ಭಾರತ ಸುದ್ದಿ ಬೆಳಗಾವಿ :                       ಕನ್ನಡ ಮಹಿಳಾ ಸಂಘದ ಸಾಹಿತ್ಯ ಕಲಾ ವೇದಿಕೆ ವತಿಯಿಂದ ಫೆಬ್ರವರಿ 5ರಂದು ಕನ್ನಡ ಗೀತೆಗಳ ಸ್ಪರ್ಧೆಯ ಸ್ವರ ಪರೀಕ್ಷೆ (ಆಡಿಶನ್) ನಡೆಯಲಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಟಿಳಕವಾಡಿ ಬುಧವಾರ ಪೇಟೆಯ ಜಿ.ಜಿ.ಚಿಟ್ನೀಸ್ ಸ್ಕೂಲ್ ನಲ್ಲಿ ಆಡಿಶನ್ ನಡೆಯಲಿದ್ದು, ಆಸಕ್ತರು ಬಂದು ಹೆಸರು ನೋಂದಾಯಿಸಬಹುದು.

ಸ್ವರ ಪರೀಕ್ಷೆಗೆ ಐವರು ಪುರುಷರು ಇಲ್ಲವೇ ಐವರು ಮಹಿಳೆಯರ ಗುಂಪು ಇರಬೇಕು. ಯಾವುದೇ ಕನ್ನಡ ಹಾಡನ್ನು ಹಾಡಬಹುದು. ಅಂತಿಮ ಸ್ಪರ್ಧೆ ಫೆಬ್ರವರಿ 26ರಂದು ಮೂರು ಸುತ್ತಿನಲ್ಲಿ ನಡೆಯಲಿದೆ. ಸ್ವರ ಪರೀಕ್ಷೆಯಲ್ಲಿ ಆಯ್ಕೆಯಾದವರು ದಾಸರ ಪದ, ವಚನ ಹಾಗೂ ತತ್ವಪದ ಹೀಗೆ ಈ ಮೂರು ಪ್ರಕಾರದ ಹಾಡುಗಳನ್ನು ಅಂತಿಮ ಸ್ಪರ್ಧೆಗೆ ಸಿದ್ಧಪಡಿಸಿಕೊಳ್ಳಬೇಕು.

ಪುರುಷರಿಗೂ, ಮಹಿಳೆಯರಿಗೂ ಪ್ರತ್ಯೇಕ ನಗದು ಬಹುಮಾನಗಳಿವೆ. ಮೊದಲ ಬಹುಮಾನ 5 ಸಾವಿರ ರೂ. ಎರಡನೇ ಬಹುಮಾನ 3 ಸಾವಿರ ರೂ. ಹಾಗೂ 3ನೇ ಬಹುಮಾನ 2 ಸಾವಿರ ರೂ. ಇದ್ದು ತಲಾ 1 ಸಾವಿರ ರೂ.ಗಳ ಎರಡು ಸಮಾಧಾನಕರ ಬಹುಮಾನಗಳಿವೆ.

ಹೆಚ್ಚಿನ ವಿವರಗಳಿಗಾಗಿ ಮತ್ತು ಮಾರಾಟ ಮಳಿಗೆ ಹಾಕಬಯಸುವವರು, ಶುಭದಾ ಕೋಟೂಳಕರ (ಮೊಬೈಲ್ – 9902852367), ಸಂಗೀತಾ ಪಾಟೀಲ ( ಮೊಬೈಲ್ – 9980070771) ಅಥವಾ ಗೌರಿ ಸರ್ನೋಬತ್ ( ಮೊಬೈಲ್ – 9481390551) ಅವರನ್ನು ಸಂಪರ್ಕಿಸಬಹುದು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

eighteen − eleven =