Breaking News

ಹೊಸ ತಾಲೂಕು : ಸರಕಾರಿ ಕಚೇರಿ ತೆರೆಯಲು ಬೃಹತ್ ಪ್ರತಿಭಟನೆ

Spread the love

ಹೊಸ ತಾಲೂಕು : ಸರಕಾರಿ ಕಚೇರಿ ತೆರೆಯಲು ಬೃಹತ್ ಪ್ರತಿಭಟನೆ

ಯುವ ಭಾರತ ಸುದ್ದಿ ದೇವರಹಿಪ್ಪರಗಿ :
ನೂತನ ತಾಲೂಕಿಗೆ ಬೇಕಾಗುವ ಸರಕಾರಿ ಕಚೇರಿಗಳು ಹಾಗೂ ಸಿಪಿಐ ಕಚೇರಿ ತೆರೆಯಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಗತಿಪರ ಸಂಘಟನೆಗಳಿಂದ ಪಟ್ಟಣದ ಮೊಹರೆ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಿ.ಎ. ಗುಡದಿನ್ನಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.
ಹಲವು ಮುಖಂಡರು ಮಾತನಾಡಿ, ನೂತನ ತಾಲೂಕು ರಚನೆಯಾಗಿ 5 ವರ್ಷವಾದರು ಮಹಿಳೆಯರ, ವೃದ್ಧರ, ರೈತರ, ಬಡವರ ದೀನದಲಿತರ ಅಲ್ಪಸಂಖ್ಯಾತರ ದಿನ ನಿತ್ಯದ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳು ಸ್ಥಾಪನೆ ಮಾಡದೆ ದಿನನಿತ್ಯ ಕೆಲಸ ಬಿಟ್ಟು ತಿರುಗಾಡುವ ಪರಿಸ್ಥಿತಿ ಸರ್ಕಾರ ರಾಜಕೀಯ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಮಾಡಿದ್ದಾರೆ.

ಪಟ್ಟಣದಲ್ಲಿದ್ದ ಪೊಲೀಸ್ ಠಾಣೆಯನ್ನು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ಸೇರ್ಪಡೆ ಮಾಡಿದ್ದು ಅವೈಜ್ಞಾನಿಕ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಕಚೇರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳು ಪಟ್ಟಣದಲ್ಲಿ ಇರುವ ಕಾರಣ ಆದಷ್ಟು ಬೇಗ ಕಚೇರಿ ಸ್ಥಾಪನೆ ಮಾಡಬೇಕು ಎಂದು ವಿವಿಧ ರಾಜಕೀಯ ಪಕ್ಷದ ಪ್ರಗತಿಪರ ಸಂಘಟನೆಗಳ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸಾಯಿಬಣ್ಣ ಬಾಗೇವಾಡಿ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಡಾ.ಆರ್. ಆರ್. ನಾಯಕ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸಂಗನಗೌಡ ಹರನಾಳ, ಕರವೇ ತಾಲೂಕು ಅಧ್ಯಕ್ಷ ಮಡುಗೌಡ,
ಮುಖಂಡರಾದ ಚನ್ನವೀರಪ್ಪ ಕುದರಿ, ಸಂಗಮೇಶ ಛಾಯಗೋಳ, ಮುನೀರ್ ಅಹ್ಮದ್ ಮಳಖೇಡ, ಹುಯೋಗಿ ತಳ್ಳೊಳ್ಳಿ, ಪ್ರಕಾಶ ಗುಡಿಮನಿ ಮಾತನಾಡಿ, ಸರ್ಕಾರಕ್ಕೆ ವಿವಿಧ ಕಚೇರಿಗಳನ್ನು ಶೀಘ್ರವೇ ನೀಡುವಂತೆ ಆಗ್ರಹಿಸಿದರು.
ಸುಮಾರು ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಯ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ತಹಶೀಲ್ದಾರ್ ಸಿ ಎ ಗುಡದಿನ್ನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮುಖಂಡರಾದ ಎಸ್ ಎನ್ ಬಸವರೆಡ್ಡಿ, ಎ.ಡಿ.ಮುಲ್ಲಾ,ಪ ಪಂ ಸದಸ್ಯರಾದ ಕಾಸುಗೌಡ ಬಿರಾದಾರ, ಉಮೇಶ ರೂಗಿ, ಪ್ರಕಾಶ ಮಲ್ಹಾರಿ,ಕಾಸಿನಾಥ ತಳಕೇರಿ, ರಾವುತ್ ಮಾಸ್ತರ್ ತಳಕೇರಿ,ರಹೀಮಾನ ಕಣಕಲ್, ಸಿದ್ರಾಮಪ್ಪ ಅವಟಿ, ಸುನೀಲ ಕನಮಡಿ, ರಮೇಶ ಮ್ಯಾಕೇರಿ, ಸುಭಾಸ ಜಾಧವ ಸೇರಿದಂತೆ ಪ್ರಗತಿಪರ ಸಂಘಟನೆಗಳ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಮತ್ತೆ ಕಂಪಿಸಿದ ಭೂಮಿ

Spread the loveಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ …

Leave a Reply

Your email address will not be published. Required fields are marked *

2 × 1 =