ಕಿರಣ ಜಾಧವ ಅವರಿಂದ ಬೆಳಗಾವಿಯಲ್ಲಿ ಭಾನುವಾರ ಬೃಹತ್ ಚಿತ್ರಕಲಾ ಶಿಬಿರ ಆಯೋಜನೆ
ಯುವ ಭಾರತ ಸುದ್ದಿ ಬೆಳಗಾವಿ :
ಬಿಜೆಪಿ ಕರ್ನಾಟಕ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಮತ್ತು ಸಕಲ ಮರಾಠಾ ಸಮಾಜದ ಸಂಯೋಜಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಬೆಳಗಾವಿಯ ಯುವ ನಾಯಕ ಕಿರಣ ಜಾಧವ ಅವರು ತಮ್ಮ ವಿಮಲ್ ಫೌಂಡೇಶನ್ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಬೆಳಗಾವಿ ಮಹಾನಗರದ ಶಾಲೆಗಳಲ್ಲಿ ಫೆಬ್ರವರಿ 5 ರಂದು (ಭಾನುವಾರ) ಬೃಹತ್ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕಿರಣ ಜಾಧವ ನಮ್ಮವರು ಎಂದು ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ.
ಸಮಾಜದ ಒಳಿತಿಗಾಗಿ ಮತ್ತು ಜನರಲ್ಲಿ ಐಕ್ಯತೆ- ಸಮಗ್ರತೆಯನ್ನು ಬೆಳೆಸುವ ಚಿಂತನೆ ಇಟ್ಟುಕೊಂಡು ಈ ಶಿಬಿರ ಏರ್ಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಬೆಳಗಾವಿ ಸುತ್ತಮುತ್ತಲಿನ ಶಾಲೆಗಳಿಂದ 206 ಶಾಲೆಗಳನ್ನು ಸಂಪರ್ಕಿಸಿದ್ದು, ಈ ಮೂಲಕ 1.50 ಲಕ್ಷ ವಿದ್ಯಾರ್ಥಿಗಳು ಈ ಬೃಹತ್ ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತಲುಪಲು ನಮಗೆ ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಮೊದಲ ಸುತ್ತಿನಲ್ಲಿ 78 ಶಾಲೆಗಳು ಈ ಬೃಹತ್ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಲಿದ್ದು, ಮೊದಲ ಸುತ್ತಿನಲ್ಲಿ ಸುಮಾರು 43 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಭಾನುವಾರದ ನಂತರ ಉಳಿದ ಶಾಲೆಗಳಿಗೆ ಮುಂದಿನ ಸುತ್ತನ್ನು ಆಯಾ ಶಾಲೆಗಳ ಲಭ್ಯತೆಯ ಪ್ರಕಾರ ವಾರದೊಳಗೆ ನಡೆಸಲಾಗುವುದು.
ಈ ಬಗ್ಗೆ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಸಹಕಾರಕ್ಕಾಗಿ ಮತ್ತು ಅವರ ಪ್ರತಿಕ್ರಿಯೆಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಅವರು ತಿಳಿದಿದ್ದಾರೆ.