Breaking News

ಪಾಲಿಕೆಯಲ್ಲಿ ಕನ್ನಡಕ್ಕೆ ಕುತ್ತು ..! ಕನ್ನಡ ಅಧಿಕಾರಿಗಳ ಎತ್ತಂಗಡಿಗೆ ಸಂಚು!

Spread the love

ಪಾಲಿಕೆಯಲ್ಲಿ ಕನ್ನಡಕ್ಕೆ ಕುತ್ತು ..! ಕನ್ನಡ ಅಧಿಕಾರಿಗಳ ಎತ್ತಂಗಡಿಗೆ ಸಂಚು!

ಮರಾಠಿಯಲ್ಲಿ ದಾಖಲೆ ಕೇಳಿದ ನಗರಸೇವಕರು..!
ಶಾಸಕರ ಮಾತಿಗೂ ಕಿಮ್ಮತು ಕೊಡದ ಆ ನಗರಸೇವಕರು ಯಾರು?

ವರದಿ : ಹರ್ಷವರ್ಧನ್

ಯುವ ಭಾರತ ವಿಶೇಷ : ಬೆಳಗಾವಿ. ಕನ್ನಡ ನಾಡು ನುಡಿಗೆ ಕರ್ನಾಟಕ ಸರ್ಕಾರ ಬದ್ಧ ಎನ್ನುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಬೆಳಗಾವಿಯಲ್ಲಿ ಮಣ್ಣು ಪಾಲಾಗಿದೆ. ಬಿಜೆಪಿಯ ಮೊದಲ ಮರಾಠಿ ಭಾಷಿಕ ಮೇಯರ್ ,ಉಪಮೇಯರ್ ಆಯ್ಕೆಯಾದವರು ಈಗ ಕನ್ನಡ ಮತ್ತು ಕನ್ನಡ ಅಧಿಕಾರಿಗಳನ್ಬು ಕಸಕ್ಕಿಂತ ಕೀಳು ಮಟ್ಟದಲ್ಲಿ ಕಾಣುತ್ತಿದ್ದಾರೆ. ಆಡಳಿತದ ಬಗ್ಗೆ ಕನ್ನಡದಲ್ಲಿ ವಿವರಣೆ ಕೊಡಲು ಬಂದವರನ್ನು ಮರಾಠಿಯಲ್ಲಿ ಮಾತಾಡಿ *(ಮರಾಠಿ‌ ಮಧ್ಯೆ ಬೋಲಾ)* ಎಂದು ಹಿಯ್ಯಾಳಿಸಿ ವಾಪಸ್ಸು ಕಳಿಸುವ ಪರಿಪಾಠ ಪಾಲಿಕೆಯಲ್ಲಿ ನಡೆಯುತ್ತಿದೆ. ಕನ್ನಡ ಭಾಷೆಯಲ್ಲಿ ತಮ್ಮ ಹೆಸರನ್ನು ಬರೆಯಲು ಬಾರದವನ್ನು ಆ ಹುದ್ದೆಗೆ ಕುಳ್ಳಿರಿಸಿದ ಬಿಜೆಪಿ ನಡೆ ಈಗ ರಾಜ್ಯದ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತಿದೆ.

ಪುತ್ರನ ದರ್ಪ.!
ಬೆಳಗಾವಿ ಪಾಲಿಕೆಯಲ್ಲಿ ಶೋಭಾ ಸೋಮನಾಚೆ ಮೇಯರ್. !
ಆದರೆ ಅವರ ಪುತ್ರ ದೀಪಕ ಸೋಮನಾಚೆ ಅಧಿಕೃತ ಮೇಯರ್ ರೀತಿ ವರ್ತಿಸುತ್ತಿದ್ದಾನೆ.
ಅವನೇ ಮೇಯರ್ ಕಾರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ.
ಜನರ ಸಮಸ್ಯೆ ಗಳನ್ನು ಆಲಿಸುವತ್ತ ಗಮನಹರಿಸಬೇಕಾದ ಮೇಯರ್ ಕಚೇರಿ ಕಾರನ್ನು ಜಾತ್ರೆಗೆ ಅಷ್ಟೇ ಅಲ್ಲ ಖಾಸಗಿ ಬದುಕಿಗೆ ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ.ಉಪಮೇಯರ್ ಕೂಡ ಕಾರನ್ನು ದಡ್ಡಿ ಜಾತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಇಡೀ ಪರಿವಾರ ಆ ಕಾರನ್ನು ಬಳಕೆ ಮಾಡಿಕೊಳ್ಳುತ್ತಿದೆ.

ಇವರದ್ದೇ ಸರ್ವಾಧಿಕಾರ.. !
ಮೇಯರ್ ಆಯ್ಕೆ ಮಾಡಿದ್ದು ನಾವೇ ಎನ್ನುವ ಭ್ರಮೆಯಲ್ಲಿದ್ದ ಆ ನಾಲ್ವರು ನಗರಸೇವಕರು ಶಾಸಕರಿಗಿಂತ ನಾವೇ ಸುಪ್ರೀಂ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವುದು ಉಳಿದವರ ಅಸಮಾಧಾನಕ್ಜೆ ಕಾರಣವಾಗುತ್ತಿದೆ. ನಗರಸೇವಕರಾದ ನಿತಿನ್ ಜಾಧವ, ಜಯಂತ ಜಾಧವ, ಮಂಗೇಶ ಪವಾರ, ಮೇಯರ ಪುತ್ರ ದೀಪಕ ಸೋಮನಾಚೆ ಮತ್ತು ಜಿತೇಂದ್ರ ದೇವಣ್ಣ ಅವರು ಶಾಸಕರ ವಿರುದ್ಣ ಮಾತನಾಡುತ್ತ ಎಲ್ಲರನ್ನು ಹೆದರಿಸಿಕೊಳ್ಳುವ ಕೆಲಸ ನಡೆಸಿದ್ದಾರೆ.
ಇದು ಇನ್ನುಳಿದ ಮರಾಠಿ ಭಾಷಿಕ ನಗರಸೇವಕ ಆಕ್ರೋಶಕ್ಕೆ ಕಾರಣವಾಗುತ್ತಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

5 × 5 =