ಸಾಹುಕಾರ್ ಗೆ ದಾರಿ ಬಿಡದೇ ಉದ್ದಟತನ ಮೆರೆದ ಚನ್ನರಾಜ!

ಯುವ ಭಾರತ ಸುದ್ದಿ , ಬೆಳಗಾವಿ :ಬೆಳಗಾವಿ ತಾಲೂಕಿನ ರಾಜಹಂಸಗಡ ಕೋಟೆಗೆ ಮಾಜಿ ಸಚಿವ ಮತ್ತು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹಾಗೂ ಇತರ ಬಿಜೆಪಿ ನಾಯಕರು ಶನಿವಾರ ತೆರಳುತ್ತಿರುವ ಬಗ್ಗೆ ಪೂರ್ವ ನಿಯೋಜಿತ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ದೇಶಪೂರ್ವಕವಾಗಿ ರಮೇಶ ಜಾರಕಿಹೊಳಿ ಅವರು ಬರುತ್ತಿರುವ ವೇಳೆ ಕಿರಿದಾದ ರಸ್ತೆಯಲ್ಲಿ ಕಾರು ತಂದಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ನೇರ ಕಾರಣರಾದರು.
ರಾಜಹಂಸಗಡ ಕೋಟೆಗೆ ಶನಿವಾರ ಬಿಜೆಪಿ ಕಾರ್ಯಕರ್ತರು ರಮೇಶ ಜಾರಕಿಹೊಳಿ ಅವರಿಗೆ ಜೈಕಾರ ಮೊಳಗಿಸಿದರು. ಕೊನೆಗೆ ಹಿಂದಕ್ಕೆ ಸರಿದ ಕಾರಣ ಪರಿಸ್ಥಿತಿ ತಿಳಿಗೊಂಡಿತು.
YuvaBharataha Latest Kannada News