ತೊಟ್ಟು….
ಆತ್ಮೀಯರೆ, ನಮಸ್ಕಾರ.
ಕರೋನಾ ಸಂದರ್ಭದಲ್ಲಿ ಜೀವ ಉಳಿಸಿದ ಔಷಧಿಯ ಒಂದು ‘ತೊಟ್ಟು’ ಹನಿಯು, ತಾನಾಗೇ ‘ತೊಟ್ಟು’ ಎಂಬ ಕಾವ್ಯದ ರೂಪ ‘ತೊಟ್ಟು’, ನಿರಂತರ ಹನಿಯುವ ‘ತೊಟ್ಟು’ ಆಗಿ, ‘ತೊಟ್ಟು’ ಕಳಚಿ ಬೀಳುವ ಹಣ್ಣಿನಂತೆ ಉದುರಿ, ಈಗ ಆ ‘ತೊಟ್ಟು’, ‘ತೊಟ್ಟು’ ಗಳೇ ಸೇರಿ, ೩೬೫ ‘ತೊಟ್ಟು’ಗಳ ಸಂಕಲನವಾಗಿ, ಬೆಂಗಳೂರಿನ’ಅಕ್ಕ ಪ್ರಕಾಶನ’ ದಿಂದ ಹೊರಬಂದಿದೆ. ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಅವರ ಮುನ್ನುಡಿ, ಡಾ.ವಿಜಯಾ ಅವರ ಬೆನ್ನುಡಿ, ಹಿರಿಯ ವಿದ್ವಾಂಸರನೇಕರ ಪ್ರತಿಕ್ರಿಯೆಗಳು ಹಾಗೂ ಬದುಕಿ ಉಳಿದ ಜೀವವೇ ಬರೆದ “ತೊಟ್ಟು”ಗಳ ರಚನೆಯ ಹಿಂದಿನ ವ್ಯಥೆಯ ಕಥೆ- ಇವುಗಳನ್ನೆಲ್ಲ ಒಳಗೊಂಡ 232 ಪುಟಗಳ ಈ ಕೃತಿಯ ಬೆಲೆ ರೂ. 250/- ಇದೆ. ಆಸಕ್ತರು ಹೆಚ್ಚಿನ ಪ್ರತಿಗಳನ್ನು ಕೊಂಡುಕೊಳ್ಳಲು ಕೋರಿಕೆ. ಅಂಚೆ ವೆಚ್ಚ ಉಚಿತವಿದ್ದು, ನಿಮ್ಮ ಪೂರ್ತಿ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಬೇಕಿರುವ ಪ್ರತಿಗಳ ಸಂಖ್ಯೆ ತಿಳಿಸಿದರೆ ಗ್ರಂಥವನ್ನು ಕಳಿಸುವ ವ್ಯವಸ್ಥೆ ಮಾಡಲಾಗುವುದು. ಪುಸ್ತಕಗಳು ತಲುಪಿದ ನಂತರ ಹಣ ಕಳಿಸಬಹುದು.
ಇದು ಪ್ರೀತಿಯ ಕೋರಿಕೆಯೇ ಹೊರತು ಒತ್ತಾಯವಲ್ಲ.
ವಂದನೆಗಳೊಂದಿಗೆ,
ಬಸವರಾಜ ಸಾದರ