ಗೋಕಾಕ : ಬಜೆಟ್ ಮಂಡನೆ
ಯುವ ಭಾರತ ಸುದ್ದಿ ಗೋಕಾಕ :
ನಗರಸಭೆಯ ೨೦೨೩ ಹಾಗೂ ೨೦೨೪ನೇ ಸಾಲಿನ ೭ ಲಕ್ಷ ೩೨ ಸಾವಿರ ರೂಗಳ ಉಳಿತಾಯದ ಬಜೆಟ್ ನ್ನು ಪೌರಾಯುಕ್ತ ಶಿವಾನಂದ ಹಿರೇಮಠ ಅವರು ಶನಿವಾರದಂದು ನಗರಾಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರ ಅಧ್ಯಕ್ಷೆತೆಯಲ್ಲಿ ನಡೆದ ಸಭೆಯಲ್ಲಿ ಮಂಡಿಸಿದರು .
ನಗರದ ಸ್ವಚ್ಛತೆಗಾಗಿ ೧೯ ಜನ ಪೌರಕಾರ್ಮಿಕರ ನೇಮಕವಾಗಲಿದ್ದು, ಉಳಿದ ಕಾರ್ಮಿಕರನ್ನು ಹೊರಗುತ್ತಿಗೆ ಹಾಗೂ ನೇರ ಪಾವತಿ ಆಧಾರದ ಮೇಲೆ ಸೇವೆಯನ್ನು ಪಡೆಯುವ ಉದ್ದೇಶಕ್ಕೆ ೩.೮೪ ಕೋಟಿ ರೂಗಳ ಅವಶ್ಯ ವಿರುವುದಾಗಿ ತಿಳಿಸಿದರು.
ನಗರಸಭೆಯ ಲೆಕ್ಕ ಅಧಿಕ್ಷರಾದ ಎಂ.ಎನ್.ಸಾಗರೇಕರ ಇವರು ೪೦.೭೮ ಕೋಟಿ ರೂಗಳ ಆಯ ಮತ್ತು ೪೦.೭೦ ಕೋಟಿ ರೂಗಳ ವ್ಯಯವುಳ್ಳ ಅಂದಾಜು ವ್ಯಯವನ್ನು ವಿಶ್ಲೇಷಣೆ ಮಾಡುತಾ ನಗರದಲ್ಲಿ ಎಚ್.ಎಫ್.ಸಿ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡೆಸಲು ೧೯ ಕೋಟಿ ರೂಗಳನ್ನು ಖರ್ಚು ಮಾಡಲಾಗಿದ್ದು, ಬಾಕಿ ೬ ಕೋಟಿ ರೂಗಳ ಕಾಮಗಾರಿಗಳನ್ನು ಬರುವ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಲಾಗುವದು.
೩ ಕೋಟಿ ರೂಗಳ ಅನುದಾನದಲ್ಲಿ ೧ ಕೋಟಿ ರೂ ವೆಚ್ಚದ ವಾಣಿಜ್ಯ ಮಳಿಗೆಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಉಳಿದ ಕಾಮಗಾರಿಯನ್ನು ಮುಂದಿನ ವರ್ಷದಲ್ಲಿ ಮುಗಿಸಲಾಗುವದು. ೧೫ ನೇ ಹಣಕಾಸು ಯೋಜನೆ ಒಳಗೊಂಡಂತೆ ರಸ್ತೆ, ಚರಂಡಿ, ಬೀದಿ ದೀಪ , ಉದ್ಯಾನವನ, ನೀರು ಸರಬರಾಜು, ಒಳಚರಂಡಿ ಇತ್ಯಾದಿ ಕಾಮಗಾರಿಗಳಿಗಾಗಿ ಆಯವ್ಯಯದಲ್ಲಿ ೧೨.೭೮ ಕೋಟಿ ರೂಗಳ ಕಾಮಗಾರಿಗಳನ್ನು ಪ್ರಸ್ತಾಪಿಸಲಾಗಿದೆ. ಶೇಕಡಾ ೨೪.೧೦% , ೭ ೨೫ ಮತ್ತು ೫ದರ ವಿಭಾಗಗಳಲ್ಲಿ ರೂ ೨೮ ಲಕ್ಷ ಅಂದಾಜು ಖರ್ಚುಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸ್ಥಾಯಿ ಸಮಿತಿ ಚೇರಮನ್ ಸಿದ್ದಪ್ಪ ಹುಚ್ಚರಾಮಗೋಳ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳಾದ ವ್ಹಿ.ವಾಯ್.ಪಾಟೀಲ, ಎಂ.ಎಚ್.ಗಜಾಕೋಶ ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.