ಸೃಷ್ಟಿ ಸಮಷ್ಟಿಯ ಆದಿ….
ಚಿಗುರು ಚೈತನ್ಯದ ಮೂಲ ಯುಗಾದಿ
ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು ಸೃಷ್ಟಿಕರ್ತನಾದ ಪರಬ್ರಹ್ಮನು ಸಮಸ್ತ ಬ್ರಹ್ಮಾಂಡವನ್ನು ಸೃಷ್ಟಿಸಿ ಪೂರ್ಣಗೊಳಿಸಿದನೆಂದು ಪ್ರತೀತಿ.
ನಾವು ಪ್ರಕೃತಿ ಮಾತೆಯ ಮಡಿಲಿನ ಅತ್ಯಂತ ಬುದ್ಧಿವಂತ ಸೃಷ್ಟಿಯಾದ ಕಾರಣ ; ಈ ದಿನದಂದು ಸುತ್ತಲಿನ ನಿಸರ್ಗವನ್ನು ಸೂಕ್ಷ್ಮ ವಾಗಿ ಅವಲೋಕಿಸಿದಾಗ ಹೊಸ ಚೈತನ್ಯದ ಅನುಭವ ಖಂಡಿತವಾಗಿಯೂ ನಮ್ಮ ಇಂದ್ರಿಯ ಮತ್ತು ಮನಸ್ಸುಗಳಿಗೆ ನಿಲುಕುತ್ತದೆ. ಮಾವು -ಬೇವು ಹೊಂಗೆಯಂಥ ಮರಗಳತ್ತ ಸುಮ್ಮನೇ ಒಮ್ಮೆ ದೃಷ್ಟಿ ಹೊರಳಿದಾಗ ಹೊಸತನದ ನವಿರುಭಾವ ಮನಸ್ಸನ್ನು ಆವರಿಸುತ್ತದೆ. ಬಹುಶಃ ಈ ಹೊಸತನ ಪ್ರತಿ ವರ್ಷವೂ ಪುನರಾವರ್ತನೆಯಾಗಿ ಹಲವಾರು ದಶಕಗಳನ್ನು ಕಂಡ ಸಸ್ಯ ಸಂಕುಲಕ್ಕೆ ನವ ಪಲ್ಲವಗಳ ಉಡುಗೆ ಸಂಭ್ರಮವನ್ನು ತುಂಬದಿದ್ದರೆ
ಜಗತ್ತು ಏಕತಾನತೆಯಿಂದ ಹಳೆಯ ಬೇರು- ಬಿಳಲುಗಳಲ್ಲಿ ಅಂತೆಯೇ ಜಿಡ್ಡುಗಟ್ಟಿದ ಮನಸ್ಸುಗಳ ಜಂಜಡಗಳಲ್ಲಿ ಸೊರಗಿ ನವನಾವೀನ್ಯ ವೆಂಬುದು ಮರೀಚಿಕೆಯಾಗುತ್ತಿತ್ತು.
ಸೃಷ್ಟಿಯಿಂದ ಪ್ರೇರೇಪಿತ ಗೊಂಡ ಹೊಸ ಚಿಗುರು -ಹೊಸತನಗಳಿಗೆ ಮೈ -ಮನಗಳನ್ನು ಅರ್ಪಣೆಗೊಂಡು ಚೇತನ ಉಕ್ಕಿನೆ ಕೊರಡು- ಕೊನರಿಸುವ ;ಕೊರಡಾದ ಭಾವನೆಗಳಲ್ಲಿ ಪ್ರೀತಿ -ಕರುಣೆ ಸಂತೋಷದ ಪರಿಪೂರ್ಣ ಭಾವವನ್ನು ಪುನಃ ಪುನಃ ಸ್ಫುರಿಸುವಂತೆ ನಮ್ಮೆಲ್ಲರ ಜೀವನದಲ್ಲಿ ಹೊಸ ಸಂವತ್ಸರದ ಆಗಮನದೊಂದಿಗೆ ಹೊಸತನಕ್ಕಾಗಿ ತುಡಿಯುವಂತೆ ಮಾಡುವ ಈ ಸೃಷ್ಟಿಗೂ ಮತ್ತು ಸೃಷ್ಟಿಕರ್ತನಿಗೂ ಕೃತಜ್ಞತಾ ಭಾವದಿಂದ ನಮನಗಳನ್ನು ಸಲ್ಲಿಸುವ ಈ ದಿನವನ್ನು ಪರಿಸರದ ಕಾಳಜಿಯೊಂದಿಗೆ ಪ್ರಾರಂಭನೆ ಮುಂಬರುವ ಹೊಸ ಶೋಭಕೃತ್ ಸಂವತ್ಸರನವು ಎಲ್ಲರ ಬಾಳಲ್ಲಿ ಹೊಸತನ ಸಮೃದ್ಧಿ ಸಾಧನೆಗಳಿಗೆ ನಾಂದಿಯಾಗಲಿ ಎಂದು ಹಾರೈಸುತ್ತಾ .
ಎಲ್ಲರಿಗೂ
ಬೇವು ಬೆಲ್ಲದ ಜೀವನದಲ್ಲಿ ಬೇವಿನಯುಗ ಷಣಾರ್ಥವಾಗಿ ಬೆಲ್ಲದ ಪಾಲು ಸಾರಸಗಟಾಗಿ ದಕ್ಕಲೆಂದು ಶುಭ ಕೋರುತ್ತಾ ನವಯುಗವು ಸರ್ವರ ಬಾಳಲ್ಲಿ ನವ ಚೈತನ್ಯ ತುಂಬಲಿ.
ಯುಗಾದಿಯ ಸಂಭ್ರಮದ ಶುಭಾಷಯಗಳೊತುಂಬಲಿ
ಡಾ. ಶ್ರೀದೇವಿ ಆನಂದ ಪೂಜಾರಿ