ಯುವ ಭಾರತ ಸುದ್ದಿ, ಗೋಕಾಕ್: ಕಾಶ್ಮೀರ ಗಡಿಯಲ್ಲಿ ನುಸುಳೀಕೊಂಡಿದ್ದ ಭಯೋತ್ಪಾದಕರನ್ನು ಪ್ರಾಣದ ಹಂಗು ತೊರೆದು ಗುಂಡಿಕ್ಕಿಕೊAದು ದೇಶಪ್ರೇಮ ಮೆರೆದಿದ್ದ ವಡೇರಹಟ್ಟಿ ಗ್ರಾಮದ ಯೋಧ ನಾಗೇಂದ್ರ ಉದ್ಯಾಗೋಳನಿಗೆ ಭೂಸೇನೆಯ ಲೆಪ್ಟಿನಂಟ ಜನರಲ್ ಆಲುಖ್ಯ ಅವರು ನವದೇಹಲಿಯ ಸೇನಾಭವನದಲ್ಲಿ ನಡೆದ ಸಮಾರಂಭದಲ್ಲಿ ಸೇನಾಪದಕ ನೀಡಿ (ಮೆಡಲ್) ಗೌರವಿಸಿದ್ದರು.
ದೇಶಕ್ಕೆ ಹೆಮ್ಮೆ ತಂದ ಈ ಯೋಧನನ್ನು ವಡೇರಹಟ್ಟಿ ಗ್ರಾಮದ ವಾಲ್ಮೀಕಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಗೋಕಾಕ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ವಡೆಯರ ಮತ್ತು ಹಿರಿಯ ಕಾರ್ಯಕರ್ತೆ ಶ್ರೀದೇವಿ ತಡಕೋಡ ಮತ್ತು ಖ್ಯಾತ ಸಾಹಿತಿ ಮಹಾಲಿಂಗ ಮಂಗಿ ಅವರು ಸೇರಿಕೊಂಡು ಅಭಿನಂದಿಸಿ ಸತ್ಕರಿಸಿ ಸನ್ಮಾನಿಸಿದರು.
ಯೋಧನ ಕುರಿತು ಸಾಹಿತಿ ಮಹಾಲಿಂಗ ಮಂಗಿ, ರಾಜೇಶ್ವರಿ ವಡೆಯರ, ಶ್ರೀದೇವಿ ತಡಕೋಡ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಅಡಿವೆಪ್ಪ ಹಾದಿಮನಿ, À ಹಿರಿಯರಾದ ಮಾರುತಿ ಸೊಡ್ರುಗೋಳ, ಬನಪ್ಪ ವಡೆಯರ, ಮಾರುತಿ ಪೂಜೇರಿ, ಯಲ್ಲಪ್ಪ ಭಜಂತ್ರಿ ಸೇರಿದಂತೆ ಮುಂತಾದವರು ಉಪಸ್ತಿತರಿದ್ದರು.
ಸಾನಿಧ್ಯವನ್ನು ಶ್ರೀ ಮಲ್ಲಿಕಾರ್ಜುನ ಮಠದ ಶ್ರೀ ಗುರುಪ್ರಸಾದ ಶ್ರೀಗಳು ವಹಿಸಿದ್ದರು.
ಶಿಕ್ಷಕಿ ಇಂದ್ರವ್ವ ಆಸುಂದಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವನ್ನು ಪತ್ರಕರ್ತ ಬಸವರಾಜ ಕುರೇರ ಅವರು ಸ್ವಾಗತಿಸಿ, ವಂದಿಸಿದರು.
Check Also
ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ
Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …