ರೈತರಿಗೆ ಸಾಕಾಗುವ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೋಬ್ಬರದ ದಾಸ್ತಾನು ಮಾಡಲಾಗಿದೆ.-ರಮೇಶ ಜಾರಕಿಹೊಳಿ.!
ಯುವಭಾರತ ಸುದ್ದಿ
ಗೋಕಾಕ: ಮುಂಗಾರ ಹಂಗಾಮಿಗಾಗಿ ರೈತರಿಗೆ ಸಾಕಾಗುವ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೋಬ್ಬರದ ದಾಸ್ತಾನು ಮಾಡಲಾಗಿದ್ದು, ಇದನ್ನು ರೈತರು ಕೃಷಿ ಇಲಾಖೆಯಿಂದ ಪಡೆದು ಹೆಚ್ಚಿನ ಇಳುವರಿ ತಗೆಯುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ನಗರದ ತಮ್ಮ ಕಛೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಹಾಯ ಧನದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕ ನದಾಫ ಮಾತನಾಡಿ, ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈತ ಸಂರ್ಪಕ ಕೇಂದ್ರ ಗೋಕಾಕ, ಅರಬಾಂವಿ, ಕೌಜಲಗಿ ಬೀಜ ಮಾರಾಟ ಕೇಂದ್ರಗಳ ಜೊತೆಗೆ ೧೮ ಉಪ ಮಾರಾಟ ಕೇಂದ್ರಗಳಲ್ಲಿಯೂ ಬೀಜಗಳನ್ನು ವಿತರಿಸಲಾಗುತ್ತಿದೆ ರೈತರಿಗೆ ಬೇಕಾಗುವ ಸಾಕಷ್ಟು ಪ್ರಮಾಣದಲ್ಲಿ ಸೋಯಾಬಿನ , ಗೋವಿನ ಜೋಳ, ಹೆಸರು, ಸೂರ್ಯಕಾಂತಿ, ಹೈಬ್ರೀಡ್ ಜೋಳ ಇತ್ಯಾದಿ ಬೆಳೆಗಳ ಬೀಜಗಳನ್ನು ದಾಸ್ತಾನು ಮಾಡಿ ವಿತರಿಸಲಾಗುತ್ತಿದ್ದು, ರೈತರು ಆಧಾರ ಕಾರ್ಡ, ಉತಾರ, ಬ್ಯಾಂಕ್ ಪಾಸಬುಕ್ಕುಗಳ ಜರಾಕ್ಸನೊಂದಿಗೆ ಬಂದು ಕೊವಿಡನ ನಿಯಮಾವಳಿಗಳ ಪ್ರಕಾರ ಮಾಸ್ಕ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕು. ಸೋಯಾಬಿನ ಬಿತ್ತನೆ ಮಾಡಲು ಜೂನ ೧ ರಿಂದ ಜುಲೈ ೧೫ರ ವರೆಗೆ ಸಮಯವಕಾಶ ವಿದ್ದು ಹದವಾದ ಮಳೆಯಾದ ಮೇಲೆ ಬಿತ್ತನೆ ಮಾಡಬೇಕು. ನೀರಾವರಿ ಸೌಲಭ್ಯ ವಿರುವವರು ಮೊದಲು ನೀರು ಹಾಯಿಸಿ ನಂತರ ಬಿತ್ತನೆ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ಸುರೇಶ ಸನದಿ, ಲಕ್ಷೀಕಾಂತ ಎತ್ತನಮನಿ, ಕೆಂಪಣ್ಣ ಮೈಲನ್ನವರ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ, ಕೃಷಿ ಇಲಾಖೆ ಸಿಬ್ಬಂಧಿಗಳು ಸೇರಿದಂತೆ ಅನೇಕರು ಇದ್ದರು.